ಕರ್ನಾಟಕ

karnataka

ETV Bharat / sports

ರಿಷಭ್​ ಪಂತ್​ ಅದ್ಭುತ ಆಟಗಾರ​, ಸ್ವಲ್ಪ ಸಮಯ ನೀಡಿದ್ರೆ ಎಲ್ಲವೂ ಸರಿ ಹೋಗುತ್ತೆ: ಗಂಗೂಲಿ

ಬಾಂಗ್ಲಾ ವಿರುದ್ಧ ನಡೆಯುತ್ತಿರುವ ಟಿ-20 ಕ್ರಿಕೆಟ್​ ಸರಣಿಯಲ್ಲಿ ವಿಕೆಟ್​ ಕೀಪಿಂಗ್​ ಜವಾಬ್ದಾರಿ ನಿಭಾಯಿಸುತ್ತಿರುವ ರಿಷಭ್ ಪಂತ್​, ಮೇಲಿಂದ ಮೇಲೆ ಎಡವಟ್ಟು ಮಾಡುತ್ತಿದ್ದು, ಇದೇ ವಿಷಯವಾಗಿ ಬಿಸಿಸಿಐ ಅಧ್ಯಕ್ಷ ಗಂಗೂಲಿ ಮಾತನಾಡಿದ್ದಾರೆ.

ರಿಷಭ್​ ಪಂತ್​

By

Published : Nov 9, 2019, 9:03 PM IST

ಕೋಲ್ಕತ್ತಾ:ಕಳಪೆ ವಿಕೆಟ್​ ಕೀಪಿಂಗ್​ ಮೂಲಕ ಟೀಕೆಗೊಳಗಾಗಿರುವ ರಿಷಭ್​ ಪಂತ್​ ಪರ ರೋಹಿತ್​ ಶರ್ಮಾ ಬಳಿಕ ಇದೀಗ ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ ಬ್ಯಾಟ್​ ಬೀಸಿದ್ದಾರೆ.

ರಿಷಭ್​ ಪಂತ್​​ ಓರ್ವ ಅದ್ಭುತ ಹಾಗೂ ಪ್ರತಿಭಾವಂತ ಪ್ಲೇಯರ್​ ಆಗಿದ್ದು, ಸ್ವಲ್ಪ ಸಮಯವಕಾಶ ನೀಡಿದ್ರೆ ಅವರು ತಮ್ಮ ತಪ್ಪು ಸರಿಪಡಿಸಿಕೊಳ್ಳಲಿದ್ದಾರೆ ಎಂದು ಗಂಗೂಲಿ ಹೇಳಿದ್ದಾರೆ.

ಸೌರವ್​ ಗಂಗೂಲಿ,ಬಿಸಿಸಿಐ ಅಧ್ಯಕ್ಷ

ಬಾಂಗ್ಲಾದೇಶದ ವಿರುದ್ಧದ ಮೊದಲ ಪಂದ್ಯದಲ್ಲಿ ಡಿಆರ್​ಎಸ್​ ತಪ್ಪಾಗಿ ಬಳಕೆ ಮಾಡಿ ಟ್ರೋಲ್​ಗೆ ಒಳಗಾಗಿದ್ದ ಪಂತ್​, ಎರಡನೇ ಪಂದ್ಯದಲ್ಲೂ ವಿಕೆಟ್ ಕೀಪಿಂಗ್​​​ನಲ್ಲಿ ಯಡವಟ್ಟು ಮಾಡಿಕೊಂಡಿದ್ದರು.

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಕ್ಯಾಪ್ಟನ್​ ರೋಹಿತ್ ಶರ್ಮಾ, ಸ್ವಲ್ಪ ದಿನಗಳ ಕಾಲ ಅವರನ್ನ ಅವರಷ್ಟಕ್ಕೆ ಬಿಟ್ಟು ಬಿಡಿ ಎಂದು ಹೇಳಿದ್ದರು. ಇದೀಗ ಗಂಗೂಲಿ ಮಾತನಾಡಿ, ರಿಷಭ್‌ ಪಂತ್‌ಗೆ ಸ್ವಲ್ಪ ಸಮಯ ಕೊಡಿ. ಆತ ಸುಧಾರಿಸಿಕೊಳ್ಳುತ್ತಾನೆ ಎಂದಿದ್ದಾರೆ. ಈ ಹಿಂದೆ ಸಹ ಪಂತ್​ ಪರ ಬ್ಯಾಟ್​ ಬೀಸಿದ್ದ ಗಂಗೂಲಿ ಅವರಿಗೆ ಸಮಯವಕಾಶ ನೀಡುವಂತೆ ತಿಳಿಸಿದ್ದರು.

ABOUT THE AUTHOR

...view details