ಮುಂಬೈ: ಅಂತಾರಾಷ್ಟ್ರೀಯ ಮಟ್ಟಕ್ಕೇರಲು ತಳಪಾಯ ಹಾಕಿಕೊಟ್ಟ ಮುಂಬೈ ರಣಜಿ ತಂಡದ ಪರ ಆಡದ ಕಾರಣ ಶ್ರೇಯಸ್ ಅಯ್ಯರ್ ಹಾಗೂ ಶಿವಂ ದುಬೆ ವಿರುದ್ಧ ಮುಂಬೈ ಮಾಜಿ ಕ್ರಿಕೆಟಿಗರು ಕಿಡಿಕಾರಿದ್ದಾರೆ.
ಶನಿವಾರ ಅಂತ್ಯಗೊಂಡ ರೈಲ್ವೇಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ತಂಡ 10 ವಿಕೆಟ್ಗಳ ಹೀನಾಯ ಸೋಲು ಕಂಡಿತ್ತು. ರಹಾನೆ, ಪೃಥ್ವಿ ಶಾ, ಸೂರ್ಯಕುಮಾರ್ ಯಾದವ್‌ರಂತಹ ಅನುಭವಿಗಳಿದ್ದರೂ 10 ವಿಕೆಟ್ಗಳ ಹೀನಾಯ ಸೋಲು ಕಂಡಿತ್ತು. 41 ಬಾರಿಯ ಚಾಂಪಿಯನ್ ಇಂತಹ ಸೋಲು ಕಂಡಿದ್ದರಿಂದ ಮುಂಬೈ ಮಾಜಿ ಆಟಗಾರರು ಶ್ರೇಯಸ್ ಅಯ್ಯರ್ ಹಾಗೂ ಶಿವಂ ದುಬೆ ವಿರುದ್ಧ ಕಿಡಿಕಾರುತ್ತಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಿಗೆ ತುಂಬಾ ದಿನ ಬಿಡುವಿದ್ದರೂ ಮುಂಬೈ ರಣಜಿ ತಂಡದ ಪರ ಆಡದಿದ್ದಕ್ಕೆ ವಿನೋದ್ ಕಾಂಬ್ಳಿ, ಅಯ್ಯರ್ ಹಾಗೂ ಶಿವಂ ದುಬೆ ವಿರುದ್ಧ ಕಿಡಿ ಕಾರಿದ್ದಾರೆ. ಅಯ್ಯರ್ ಹಾಗೂ ದುಬೆ ಮುಂಬೈ ಪರ ಆಡದೆ ಇರುವುದು ತುಂಬಾ ಬೇಸರದ ಸಂಗತಿ ಎಂದಿದ್ದಾರೆ.
ಶ್ರೇಯಸ್ ಅಯ್ಯರ್ ಹಾಗೂ ಶಿವಂ ದುಬೆ ವಿಶ್ರಾಂತಿ ಪಡೆಯಲು ಭಾರತ ತಂಡದ ಕೋಚ್ ರವಿಶಾಸ್ತ್ರಿ ತಿಳಿಸಿದ್ದಾರೆ. ಅಥವಾ ಆಟಗಾರರು ಸ್ವಯಂ ಪ್ರೇರಿತವಾಗಿ ವಿಶ್ರಾಂತಿ ತೆಗೆದುಕೊಂಡಿದ್ದಾರೆಯೇ ಎಂಬುದನ್ನು ಖಂಡಿತವಾಗಿ ಚರ್ಚಿಸಲಾಗುವುದು ಎಂದು ಮುಂಬೈ ಕ್ರಿಕೆಟ್ ಮಂಡಳಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿಂಡೀಸ್ ವಿರುದ್ಧ ಟಿ20 ಸರಣಿ ಗೆಲ್ಲಲು ಕಾರಣರಾದ ಶಾರ್ದುಲ್ ಟಾಕೂರ್ ರೈಲ್ವೇಸ್ ವಿರುದ್ಧ ಆಡಿದ್ದಾರೆ. ಆದರೆ, ದುಬೆ ಮತ್ತು ಅಯ್ಯರ್ ರಣಜಿ ತಂಡ ಸೇರ್ಪಡೆಯಾಗದಿರುವುದು ಹಿರಿಯ ಆಟಗಾರರನ್ನು ಕೆರಳಿಸಿದೆ.