ಹೈದರಾಬಾದ್:ಉದಯೋನ್ಮುಖ ಆಟಗಾರ ಸಂಜು ಸ್ಯಾಮ್ಸನ್ರನ್ನು ಮುಂಬರುವ ವಿಂಡೀಸ್ ಸರಣಿಗೆ ಕೈಬಿಟ್ಟ ವಿಚಾರಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಸಂಸದ ಶಶಿ ತರೂರ್ ಮಾತಿಗೆ ಟರ್ಬನೇಟರ್ ಹರ್ಭಜನ್ ಸಿಂಗ್ ದನಿಗೂಡಿಸಿದ್ದಾರೆ.
ನನ್ನ ಪ್ರಕಾರ ಆಯ್ಕೆ ಸಮಿತಿ ಸ್ಯಾಮ್ಸನ್ ಹೃದಯವನ್ನು ಪರೀಕ್ಷಿಸುತ್ತಿದೆ. ಆಯ್ಕೆ ಸಮಿತಿ ಸಂಪೂರ್ಣವಾಗಿ ಬದಲಾಗಿ, ಬಲಿಷ್ಠರ ಆಗಮನವಾಗಬೇಕು. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಈ ಬಗ್ಗೆ ಕಾರ್ಯೋನ್ಮುಖರಾಗುತ್ತಾರೆ ಎನ್ನುವ ಭರವಸೆ ಇದೆ ಎಂದು ಹರ್ಭಜನ್ ಸಿಂಗ್ ಟ್ವೀಟ್ ಮಾಡಿದ್ದಾರೆ.
ವಿಂಡೀಸ್ ಸರಣಿಗೆ ಟೀಂ ಇಂಡಿಯಾ ಪ್ರಕಟವಾದ ಬಳಿಕ ತಿರುವನಂತಪುರ ಕ್ಷೇತ್ರದ ಸಂಸದ ಶಶಿ ತರೂರ್ ಆಯ್ಕೆ ಸಮಿತಿಗೆ ವಿರುದ್ಧ ಬೇಸರ ಹೊರಹಾಕಿದ್ದರು. ಸ್ಯಾಮ್ಸನ್ ಬಾಂಗ್ಲಾ ವಿರುದ್ಧದ ಟಿ-20 ಸರಣಿಯಲ್ಲಿ ಕೇವಲ ನೀರನ್ನು ನೀಡಲು ಮಾತ್ರವೇ ಮೈದಾನಕ್ಕಿಳಿದಿದ್ದರು. ಆಯ್ಕೆ ಸಮಿತಿ ನಿಜಕ್ಕೂ ಆತನ ಬ್ಯಾಟಿಂಗ್ ಕೌಶಲ್ಯವನ್ನು ಪರೀಕ್ಷಿಸುತ್ತಿದೆಯೋ ಅಥವಾ ಹೃದಯವನ್ನೋ..? ಎಂದು ಟ್ವೀಟ್ ಮಾಡಿದ್ದರು.
ವಿಂಡೀಸ್ ಸರಣಿಗೆ ಟೀಂ ಇಂಡಿಯಾ ಪ್ರಕಟವಾಗುತ್ತಿದ್ದಂತೆ ಸ್ಯಾಮ್ಸನ್ ಪರ ಭಾರಿ ಬೆಂಬಲ ವ್ಯಕ್ತವಾಗಿತ್ತು. ಸತತ ವೈಫಲ್ಯ ಅನುಭವಿಸಿದರೂ ರಿಷಭ್ ಪಂತ್ ಆಯ್ಕೆ ಮಾಡಿದ್ದು, ನೆಟ್ಟಿಗರ ವಿರೋಧಕ್ಕೆ ಕಾರಣವಾಗಿತ್ತು.
ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್.ಕೆ ಪ್ರಸಾದ್