ಅಬುಧಾಬಿ :ಆಫ್ಘಾನಿಸ್ತಾನದ ವಿರುದ್ಧ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದಲ್ಲಿ ಫಾಲೋ ಆನ್ಗೆ ತುತ್ತಾಗಿದ್ದ ಜಿಂಬಾಬ್ವೆ, ನಾಯಕ ಸೀನ್ ವಿಲಿಯಮ್ಸ್ ಸಿಡಿಸಿದ ಶತಕದ ನೆರವಿನಿಂದ ಇನ್ನಿಂಗ್ಸ್ ಸೋಲಿನ ಭೀತಿಯಿಂದ ತಪ್ಪಿಸಿಕೊಂಡಿದ್ದಲ್ಲದೆ, 5ನೇ ದಿನ ಸ್ಪರ್ಧಾತ್ಮಕ ಟಾರ್ಗೆಟ್ ನೀಡುವ ಭರವಸೆ ಮೂಡಿಸಿದೆ.
ಮೊದಲ ಇನ್ನಿಂಗ್ಸ್ನಲ್ಲಿ ಆಫ್ಘಾನಿಸ್ತಾನ 545 ರನ್ಗಳಿಸಿತ್ತು. ಇದಕ್ಕುತ್ತರವಾಗಿ ಜಿಂಬಾಬ್ವೆ ಮೊದಲ ಇನ್ನಿಂಗ್ಸ್ನಲ್ಲಿ 287ರನ್ಗಳಿಗೆ ಆಲೌಟ್ ಆಗಿತ್ತು. ಆಫ್ಘಾನಿಸ್ತಾನ 258ರನ್ಗಳ ಮುನ್ನಡೆ ಹೊಂದಿದ್ದರಿಂದ ಜಿಂಬಾಂಬ್ವೆ ಮೇಲೆ ಫಾಲೋ ಆನ್ ಹೇರಿತ್ತು.
ಬೃಹತ್ ಹಿನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ಪ್ರವಾಸಿ ತಂಡ ನಿರಂತರ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಒಂದು ಹಂತದಲ್ಲಿ 142 ರನ್ಗಳಿಗೆ 7 ವಿಕೆಟ್ ಕಳೆದುಕೊಂಡು ಇನ್ನಿಂಗ್ಸ್ ಸೋಲಿನ ಭೀತಿಗೆ ಸಿಲುಕಿತ್ತು.