ಕರ್ನಾಟಕ

karnataka

ETV Bharat / sports

ಆತ ನನ್ನ ಪ್ರಕಾರ 'ಭಾರತದ ಮಿಸ್ಟರ್ 360': ಕನ್ನಡಿಗನ ಗುಣಗಾನ ಮಾಡಿದ ಬಂಗಾರ​

ಎಲ್ಲರೂ ಎಬಿ ಡಿ ವಿಲಿಯರ್ಸ್ ಅವರನ್ನು ಮಿ . 360 ಎಂದು ಕರೆಯುತ್ತಾರೆ. ನಾನು ಕೆಎಲ್ ರಾಹುಲ್ ಅವರನ್ನು ಭಾರತದ ಮಿ . 360 ಎಂದು ಕರೆಯುತ್ತೇನೆ . ಮೈದಾನದ ಉದ್ದಗಲಕ್ಕೂ ಬೌಂಡರಿ , ಸಿಕ್ಸರ್ ಸಿಡಿಸಬಲ್ಲ ಸಾಮರ್ಥ್ಯ ರಾಹುಲ್ ಅವರಿಗಿದೆ ' ಎಂದು ಬಂಗಾರ ಹೇಳಿದ್ದಾರೆ.

ಭಾರತದ ಮಿಸ್ಟರ್ 360
ಭಾರತದ ಮಿಸ್ಟರ್ 360

By

Published : Oct 3, 2020, 6:57 PM IST

ನವದೆಹಲಿ: ಮೈದಾನದ ಮೂಲೆ ಮೂಲೆಗಳಿಗೂ ಬೌಂಡರಿ ಸಿಕ್ಸರ್​ ಸಿಡಿಸುವ ದಕ್ಷಿಣ ಆಫ್ರಿಕಾದ ಎಬಿ ಡಿ ವಿಲಿಯರ್ಸ್​ ಅವರನ್ನು ಕ್ರಿಕೆಟ್​ನ ಮಿಸ್ಟರ್​ 360 ಎಂದು ಕರೆಯಲಾಗುತ್ತದೆ. ಆದರೆ, ಭಾರತದ ಮಾಜಿ ಬ್ಯಾಟಿಂಗ್ ಕೋಚ್​ ಸಂಜಯ್ ಬಂಗಾರ, ಕನ್ನಡಿಗ ಕೆ.ಎಲ್ ರಾಹುಲ್​ ಭಾರತದ ಮಿಸ್ಟರ್​ 360 ಬ್ಯಾಟ್ಸ್​ಮನ್​ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕಿಂಗ್ಸ್​ ಇಲೆವೆನ್​ ಪಂಜಾಬ್​ ತಂಡದ ನಾಯಕನಾಗಿರುವಾಗ ಕೆಎಲ್​ ರಾಹುಲ್,​ ಪ್ರಸ್ತುತ ಆವೃತ್ತಿಯಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರುತ್ತಿದ್ದಾರೆ. ಅವರು 4 ಪಂದ್ಯಗಳಿಂದ 239 ರನ್​ಗಳಿಸಿ, ಟೂರ್ನಿಯಲ್ಲಿ ಅತಿ ಹೆಚ್ಚು ರನ್​ಗಳಿಸಿರುವ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ. ಇವರ ಬ್ಯಾಟಿಂಗ್ ನೋಡಿರುವ ಬಂಗಾರ​, ರಾಹುಲ್ ಕೂಡ ಮೈದಾನದ ಎಲ್ಲಾ ಭಾಗಕ್ಕೂ ಹೊಡೆಯುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

" ಎಲ್ಲರೂ ಎಬಿ ಡಿ ವಿಲಿಯರ್ಸ್ ಅವರನ್ನು ಮಿ . 360 ಎಂದು ಕರೆಯುತ್ತಾರೆ . ನಾನು ಕೆಎಲ್ ರಾಹುಲ್ ಅವರನ್ನು ಭಾರತದ ಮಿ . 360 ಎಂದು ಕರೆಯುತ್ತೇನೆ . ಮೈದಾನದ ಉದ್ದಗಲಕ್ಕೂ ಬೌಂಡರಿ , ಸಿಕ್ಸರ್ ಸಿಡಿಸಬಲ್ಲ ಸಾಮರ್ಥ್ಯ ರಾಹುಲ್ ಅವರಿಗಿದೆ "ಎಂದು ಬಂಗಾರ ಹೇಳಿದ್ದಾರೆ.

2020ರ ಐಪಿಎಲ್​ನಲ್ಲಿ ಕೆಎಲ್ ರಾಹುಲ್ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಆರ್‌ಸಿಬಿ ವಿರುದ್ಧ ಅವರು ಅಜೇಯ 132 ರನ್ ಗಳಿಸಿದರು. ಇದು ಭಾರತೀಯ ಬ್ಯಾಟ್ಸ್​ಮನ್ ಒಬ್ಬರ ಹಾಗೂ ನಾಯಕನೊಬ್ಬನ ಅತ್ಯಧಿಕ ಸ್ಕೋರ್ ಆಗಿದೆ.

ABOUT THE AUTHOR

...view details