ಬರ್ಲಿನ್:ಬರ್ಲಿನ್‌ನಲ್ಲಿ ನಡೆದ ವರ್ಣರಂಜಿತ 'ಲಾರೆಸ್ ವಿಶ್ವ ಸ್ಪೋರ್ಟ್ಸ್ ಪ್ರಶಸ್ತಿ'ಗೆ ಕ್ರಿಕೆಟ್ ದೇವರು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಭಾಜನರಾಗಿದ್ದಾರೆ.
ಸ್ಪೋರ್ಟ್ ವಿಭಾಗದಲ್ಲಿ 'ಆಸ್ಕರ್' ಎಂದು ಕರೆಯಲಾಗುವ ಲಾರೆಸ್ ವಿಶ್ವ ಕ್ರೀಡಾ ಪ್ರಶಸ್ತಿಯು 20ನೇ ವರ್ಷಕ್ಕೆ ಕಾಲಿರಿಸಿದೆ. ಕ್ರೀಡಾ ಪ್ರಪಂಚದ ವ್ಯಕ್ತಿಗಳು ಹಾಗೂ ತಂಡಗಳ ಕ್ರೀಡಾ ಸಾಧನೆಯನ್ನು ಗುರುತಿಸಿ ಪ್ರಶಸ್ತಿಗಳನ್ನು ನೀಡಿಕೊಂಡು ಬರಲಾಗುತ್ತಿದೆ. ಕಳೆದೆರಡು ದಶಕಗಳಲ್ಲಿನ ಸ್ಫೂರ್ತಿದಾಯಕ ಆಟವಾಡಿದ ಅತ್ಯುತ್ತಮ ಆಟಗಾರರನ್ನು ಆಯ್ಕೆ ಮಾಡಲಾಗುತ್ತಿದೆ. ಈ ವರ್ಷದ 'ಸ್ಪೋರ್ಟಿಂಗ್ ಮೊಮೆಂಟ್ 2000-2020 ಪ್ರಶಸ್ತಿ'ಯು ಸಚಿನ್ ರಮೇಶ್ ತೆಂಡೂಲ್ಕರ್ಗೆ ಒಲಿದಿದೆ.
ಲಿಯೋನೆಲ್ ಮೆಸ್ಸಿ ಲೂಯಿಸ್ ಅವರು ರೇಸರ್ ಹ್ಯಾಮಿಲ್ಟನ್ ಜೊತೆಗೆ ವರ್ಷದ ಲಾರೆಸ್ ವರ್ಲ್ಡ್ ಸ್ಪೋರ್ಟ್ಮ್ಯಾನ್ ಪ್ರಶಸ್ತಿ ಗೆದ್ದಿದ್ದಾರೆ. ಲಿಯೋನೆಲ್ ಮೆಸ್ಸಿ ಈ ಪ್ರಶಸ್ತಿ ಗೆದ್ದ ಮೊದಲ ಫುಟ್ಬಾಲ್ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.