ಸಿಡ್ನಿ(ಆಸ್ಟ್ರೇಲಿಯಾ): ಭಾರತದ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಹಾಗೂ ವಿಂಡೀಸ್ನ ಬ್ರಿಯಾನ್ ಲಾರಾ ಇಬ್ಬರ ನಡುವಿನ ಸ್ಪರ್ಧೆಯಲ್ಲಿ ಸಚಿನ್ ಅತ್ಯುತ್ತಮ ಬ್ಯಾಟ್ಸ್ಮನ್ ಎಂದು ಆಸೀಸ್ ಮಾಜಿ ವೇಗಿ ಬ್ರೆಟ್ ಲೀ ಅಭಿಪ್ರಾಯಪಟ್ಟಿದ್ದಾರೆ. ಆದರೆ ದಕ್ಷಿಣ ಆಫ್ರಿಕಾದ ಜಾಕ್ ಕಾಲೀಸ್ ಪರಿಪೂರ್ಣ ಕ್ರಿಕೆಟರ್ ಎಂದು ಲೀ ಹೇಳಿದ್ದಾರೆ.
ಜಿಂಬಾಬ್ವೆಯ ಪಾಮ್ಮಿ ಎಂಬಾಗ್ವ ನಡೆಸಿದ ಸಂದರ್ಶನದಲ್ಲಿ ಬ್ರೆಟ್ ಲೀ ತಾವು ಬೌಲಿಂಗ್ ಮಾಡಿದ ಬ್ಯಾಟ್ಸ್ಮನ್ಗಳಲ್ಲಿ ಸಚಿನ್ ಅತ್ಯುತ್ತಮ ಬ್ಯಾಟ್ಸ್ಮನ್ ಎಂದು ತಿಳಿಸಿದ್ದಾರೆ.
ನೀವು ಕೂಡ ಸಚಿನ್ ತೆಂಡೂಲ್ಕರ್ ಎಂದು ಆಲೋಚಿಸುತ್ತೀರ, ಏಕೆಂದರೆ ಸಚಿನ್ ರಿಟರ್ನ್ ಕ್ರೀಸ್ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು. ಹಾಗೆಯೇ ಸ್ಟಂಪ್ ಪಕ್ಕದಲ್ಲೂ ಬ್ಯಾಟಿಂಗ್ ನಡೆಸುತ್ತಿದ್ದರು. ಅವರು ನನ್ನ ವಿರುದ್ಧ ಬ್ಯಾಟಿಂಗ್ ನಡೆಸಲು ಭಯಸುತ್ತಿದ್ದರು. ನನ್ನ ಪ್ರಕಾರ ಅವರೊಬ್ಬ ವಿಶ್ವದ ಅತ್ಯುತ್ತಮ ಬ್ಯಾಟ್ಸ್ಮನ್ ಎಂದು ಹೇಳಿದ್ದಾರೆ.
ಆದರೆ ಬ್ರಿಯಾನ್ ಲಾರಾ ತೆಗೆದುಕೊಳ್ಳಿ, ಅವರು ತುಂಬಾ ಅಬ್ಬರದ ಬ್ಯಾಟಿಂಗ್ ನಡೆಸುತ್ತಿದ್ದರು. ಅವರಿಗೆ ಎಷ್ಟು ಬೇಗನೇ ಬೌಲ್ ಮಾಡಿದರೂ ಅವರು ಮೈದಾನದ ಯಾವುದೇ ಮೂಲೆಗಾದರು ಸಿಕ್ಸ್ ಹೊಡೆಯಲು ಸಮರ್ಥರಾಗಿದ್ದರು. ಲಾರಾ ಮತ್ತು ಸಚಿನ್ ನಡುವೆ ಬೆಸ್ಟ್ ಬ್ಯಾಟ್ಸ್ಮನ್ ಯಾರು ಎಂಬ ಸ್ಪರ್ಧೆಯಲ್ಲಿ ನಾನು ಸಚಿನ್ ಅವರನ್ನು ಗ್ರೇಟೆಸ್ಟ್ ಬ್ಯಾಟ್ಸ್ಮನ್ ಎಂದು ಆಯ್ಕೆ ಮಾಡುತ್ತೇನೆ. ಆದರೆ ನನ್ನ ಪ್ರಕಾರ ಜಾಕ್ ಕಾಲೀಸ್ ಪರಿಪೂರ್ಣ ಕ್ರಿಕೆಟರ್ ಎಂದು ಲೀ ಹೇಳಿದ್ದಾರೆ.
ಮಾಜಿ ದಕ್ಷಿಣ ಅಫ್ರಿಕಾ ಆಲ್ರೌಂಡರ್ ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್ ಎರಡರಲ್ಲೂ 250 ಕ್ಕೂ ಹೆಚ್ಚು ವಿಕೆಟ್ ಹಾಗೂ 10,000 ರನ್ ಗಳಿಸಿರುವ ವಿಶ್ವದ ಏಕೈಕ ಬ್ಯಾಟ್ಸ್ಮನ್ ಆಗಿದ್ದಾರೆ. ಇದಕ್ಕೂ ಮೊದಲು ಪ್ರಸ್ತುತ ಕೊಹ್ಲಿ ಹಾಗೂ ಸ್ಮಿತ್ ನಡುವೆ ಉತ್ತಮ ಬ್ಯಾಟ್ಸ್ಮನ್ ಯಾರು ಎಂಬ ಪ್ರಶ್ನೆಗೆ ಸ್ಟಿವ್ ಸ್ಮಿತ್ರನ್ನು ಆಯ್ಕೆ ಮಾಡಿದ್ದರು.