ಕರ್ನಾಟಕ

karnataka

ETV Bharat / sports

ವೆಸ್ಟ್ ಇಂಡೀಸ್​ ಸರಣಿಗೆ ರೋಹಿತ್​ ಕ್ಯಾಪ್ಟನ್: ಕೊಹ್ಲಿಗೆ ರೆಸ್ಟ್‌ - ವಿರಾಟ್​ ಕೊಹ್ಲಿ

ವಿಶ್ವಕಪ್ ಸೆಮಿಫೈನಲ್​ನಲ್ಲಿ ಸೋತು ತವರಿಗೆ ವಾಪಸ್ ಆಗಲಿರುವ ಟೀಂ ಇಂಡಿಯಾ ಆಟಗಾರರು ವೆಸ್ಟ್​ ಇಂಡೀಸ್​ ಪ್ರವಾಸ ಕೈಗೊಳ್ಳಲಿದ್ದು, ತಂಡದಲ್ಲಿ ಮಹತ್ವದ ಬದಲಾವಣೆ ಆಗಲಿದೆ.

ವಿರಾಟ್​ ಕೊಹ್ಲಿಗೆ ವಿಶ್ರಾಂತಿ

By

Published : Jul 12, 2019, 5:34 PM IST

ಮುಂಬೈ:ವಿಶ್ವಕಪ್​ ಸೆಮಿಫೈನಲ್​ ಪಂದ್ಯದಲ್ಲಿ ಸೋತು ಟೀಂ ಇಂಡಿಯಾ ಮಹಾಟೂರ್ನಿಯಿಂದ ಹೊರಬಿದ್ದಿದೆ. ಇದರ ಬೆನ್ನಲ್ಲೇ ವೆಸ್ಟ್​ ಇಂಡೀಸ್​ ವಿರುದ್ಧ ನಡೆಯಲಿರುವ ಏಕದಿನ, ಟಿ20 ಹಾಗೂ ಟೆಸ್ಟ್​ ಸರಣಿಗೆ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದ್ದು, ರೋಹಿತ್​ ಶರ್ಮಾಗೆ ತಂಡ ಮುನ್ನಡೆಸಲಿದ್ದಾರೆ.

ಟೀಂ ಇಂಡಿಯಾ ಆಟಗಾರರು

ಕಳೆದೆರಡು ವರ್ಷಗಳಿಂದ ಕೊಹ್ಲಿ ನಿರಂತರವಾಗಿ ಕ್ರಿಕೆಟ್​ ಆಡುತ್ತಿರುವ ಕಾರಣ ಅವರಿಗೆ ವಿಶ್ರಾಂತಿ ನೀಡಲು ಆಯ್ಕೆ ಸಮಿತಿ ಮುಂದಾಗಿದ್ದು, ಇದರ ಜತೆಗೆ ಜಸ್​ಪ್ರೀತ್​ ಬುಮ್ರಾ, ಭುವನೇಶ್ವರ್​ ಕುಮಾರ್​​, ಮೊಹಮ್ಮದ್​ ಶಮಿ, ಹಾರ್ದಿಕ್​ ಪಾಂಡ್ಯಗೂ ಆಯ್ಕೆ ಸಮಿತಿ ವಿಶ್ರಾಂತಿ ನೀಡಲು ಮುಂದಾಗಿದೆ ಎನ್ನಲಾಗಿದೆ.

ಟೀಂ ಇಂಡಿಯಾ ಪ್ಲೇಯರ್ಸ್‌

ಟೀಂ ಇಂಡಿಯಾ ಜೊತೆಗೆ ಭಾನುವಾರ ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್​ಕೆ ಪ್ರಸಾದ್​ ಲಂಡನ್​​ನಿಂದ ವಾಪಸ್​ ಆಗುತ್ತಿದ್ದು, ವೆಸ್ಟ್​ ಇಂಡೀಸ್​ ಸರಣಿಗಾಗಿ ಕೆಲವೊಂದು ಅಚ್ಚರಿಯ ಬದಲಾವಣೆ ಆಗುವುದು ಕನ್ಫರ್ಮ್​ ಆಗಿದೆ. ಬರುವ ಜುಲೈ 17 ಹಾಗೂ 18ರಂದು ಆಯ್ಕೆ ಸಮಿತಿ ಸಭೆ ಸೇರಲಿದ್ದು, ಅಲ್ಲಿ ಮಹತ್ವದ ನಿರ್ಧಾರ ಹೊರಬೀಳಲಿದೆ.

ಎಂಎಸ್​ ಧೋನಿ

ಆಗಸ್ಟ್​ 3ರಿಂದ ಟಿ20 ಸರಣಿ ಆರಂಭಗೊಳ್ಳಲಿದ್ದು, ತದನಂತರ ಏಕದಿನ ಸರಣಿ ಹಾಗೂ ಆಗಸ್ಟ್​ 22ರಿಂದ ಟೆಸ್ಟ್​ ಸರಣಿ ನಡೆಯಲಿದೆ.

ಜಸ್​​ಪ್ರೀತ್ ಬುಮ್ರಾ

ವೆಸ್ಟ್​ ಇಂಡೀಸ್​ ವಿರುದ್ಧ ಟೀಂ ಇಂಡಿಯಾ ಮೂರು ಟಿ20, ಮೂರು ಏಕದಿನ ಸರಣಿ ಹಾಗೂ ಎರಡು ಟೆಸ್ಟ್​ ಪಂದ್ಯಗಳಲ್ಲಿ ಭಾಗಿಯಾಗಲಿದ್ದು, ಈ ಟೂರ್ನಿಯಲ್ಲಿ ಧೋನಿಗೆ ಅವಕಾಶ ನೀಡುತ್ತಾರಾ, ಇಲ್ಲವೋ ಎಂಬ ಪ್ರಶ್ನೆಗೂ ಉತ್ತರ ಸಿಗಲಿದೆ. ಉಳಿದಂತೆ ಟೆಸ್ಟ್​ ಸರಣಿಯಿಂದಲೂ ಕೊಹ್ಲಿ ದೂರ ಉಳಿದರೆ ರಹಾನೆ ಟೆಸ್ಟ್ ತಂಡವನ್ನ ಮುನ್ನಡೆಸುವ ಸಾಧ್ಯತೆ ಇದೆ.

ABOUT THE AUTHOR

...view details