ಕರ್ನಾಟಕ

karnataka

ETV Bharat / sports

'ಸಿಕ್ಸರ್'​​ನಲ್ಲಿ ವಿಶ್ವದಾಖಲೆ.. ಹಿಟ್​​ಮ್ಯಾನ್​ ಅಬ್ಬರಕ್ಕೆ ರೆಕಾರ್ಡ್​​​ ಚೂರು ಚೂರು!

ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟೆಸ್ಟ್​​ ಪಂದ್ಯದಲ್ಲಿ ಟೀಂ ಇಂಡಿಯಾ ಹಿಟ್​ಮ್ಯಾನ್​ ರೋಹಿತ್​ ಶರ್ಮಾ ಮತ್ತೊಂದು ವಿಶ್ವ ದಾಖಲೆ ನಿರ್ಮಾಣ ಮಾಡಿದ್ದಾರೆ. ಅಷ್ಟೇ ಅಲ್, ಈ ದಾಖಲೆ ಬರೆದ ಮೊದಲ ಪ್ಲೇಯುರ್ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ.

ರೋಹಿತ್​ ಶರ್ಮಾ

By

Published : Oct 19, 2019, 3:59 PM IST

Updated : Oct 19, 2019, 4:10 PM IST

ರಾಂಚಿ:ನಿಗದಿತ ಓವರ್​​ಗಳ ಕ್ರಿಕೆಟ್​​​ನಲ್ಲಿ ಅಬ್ಬರಿಸಿ ಬೊಬ್ಬರಿಯುವ ಹಿಟ್​​ಮ್ಯಾನ್​ ಖ್ಯಾತಿಯ ರೋಹಿತ್ ಶರ್ಮಾ ಸದ್ಯ ಟೆಸ್ಟ್​​ ಪಂದ್ಯದಲ್ಲೂ ದಾಖಲೆಗಳ ಸರಮಾಲೆ ಕಟ್ಟುತ್ತಿದ್ದಾರೆ. ಸದ್ಯ ರಾಂಚಿಯಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮತ್ತೊಂದು ವಿಶ್ವದಾಖಲೆ ನಿರ್ಮಾಣ ಮಾಡಿದ್ದಾರೆ.

ರೋಹಿತ್​ ಶರ್ಮಾ

ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಕೊನೆಯ ಟೆಸ್ಟ್​​ ಪಂದ್ಯದಲ್ಲಿ ಮತ್ತೊಂದು ಶತಕ ಸಿಡಿಸಿ, ಒಂದೇ ಸರಣಿಯಲ್ಲಿ ಮೂರು ಭರ್ಜರಿ ಶತಕ ಸಿಡಿಸಿರುವ ರೋಹಿತ್​ ಶರ್ಮಾ, ಇದರ ಜತೆಗೆ ಟೆಸ್ಟ್​ ಕ್ರಿಕೆಟ್​ ಸರಣಿವೊಂದರಲ್ಲಿ ಅತಿ ಹೆಚ್ಚು ಸಿಕ್ಸ್​ ಸಿಡಿಸಿರುವ ದಾಖಲೆ ನಿರ್ಮಾಣ ಮಾಡಿದ್ದಾರೆ.

ದಕ್ಷಿಣ ಆಫ್ರಿಕಾದ ಡೇನ್​ ಪಿಟ್​ ಎಸೆತದಲ್ಲಿ ಸಿಕ್ಸರ್​ ಸಿಡಿಸಿರುವ ರೋಹಿತ್​ ಶರ್ಮಾ ಟೆಸ್ಟ್​​ ಸರಣಿವೊಂದರಲ್ಲಿ ಅತಿ ಹೆಚ್ಚು 17 ಸಿಕ್ಸರ್​ ಸಿಡಿಸಿರುವ ದಾಖಲೆ ನಿರ್ಮಾಣ ಮಾಡಿದ್ದಾರೆ. ಈ ಮೂಲಕ ವೆಸ್ಟ್​ ಇಂಡೀಸ್​ ಸ್ಪೋಟಕ ಬ್ಯಾಟ್ಸ್​ಮನ್​​ 2018ರಲ್ಲಿ ಬಾಂಗ್ಲಾ ವಿರುದ್ಧ ಸಿಡಿಸಿದ್ದ 15 ಸಿಕ್ಸರ್​ ದಾಖಲೆ ಬ್ರೇಕ್​ ಮಾಡಿದ್ದಾರೆ. ಜತೆಗೆ ಭಾರತದ ಆಲ್​ರೌಂಡರ್​​ 2010ರಲ್ಲಿ ನ್ಯೂಜಿಲ್ಯಾಂಡ್​ ವಿರುದ್ಧ ಸಿಡಿಸಿದ್ದ 14 ಸಿಕ್ಸರ್​ ದಾಖಲೆ ಕೂಡ ಉಡೀಸ್​ ಆಗಿದೆ.

Last Updated : Oct 19, 2019, 4:10 PM IST

ABOUT THE AUTHOR

...view details