ಮ್ಯಾಚೆಸ್ಟರ್:ಕಳೆದ ತಿಂಗಳು ನಡೆದಿದ್ದ ಐಪಿಎಲ್ನಲ್ಲಿ ಮುಂಬೈ ತಂಡ ಚಾಂಪಿಯನ್ ಆಗಿತ್ತು. ನಾಯಕ ರೋಹಿತ್ ಮಾತ್ರ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿರಲಿಲ್ಲ. ಹೀಗಾಗಿ ವಿಶ್ವಕಪ್ನಲ್ಲಿ ಭಾರತ ತಂಡಕ್ಕೆ ರೋಹಿತ್ ಕಳಪೆ ಫಾರ್ಮ್ ದೊಡ್ಡ ಹೊಡೆತ ಕೊಡುತ್ತೆ ಎಂಬ ಮಾತು ಕೇಳಿಬಂದಿತ್ತು.
ಆದರೆ, ರೋಹಿತ್ ಮಾತ್ರ ಐಪಿಎಲ್ನಲ್ಲಿ ನೀಡುವ ಪ್ರದರ್ಶನ ವಿಶ್ವಕಪ್ ಆಯ್ಕೆಗೆ ಮಾನದಂಡವಾಗುವುದಿಲ್ಲ ಎಂದಿದ್ದರು. ವಿಶ್ವಕಪ್ಗಾಗಿ ಕಳೆದ 5 ವರ್ಷಗಳಿಂದ ಕಠಿಣ ಶ್ರಮವಹಿಸಿ ಆಡಲಾಗುತ್ತಿದೆ. ತಂಡದಲ್ಲಿರುವ ಎಲ್ಲಾ ಆಟಗಾರರು ಏಕದಿನ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಆದರೆ ಒಂದೂವರೆ ತಿಂಗಳು ನಡೆಯುವ ಐಪಿಎಲ್ ಯಾವೊಬ್ಬ ಆಟಗಾರನ ಸಾಮರ್ಥ್ಯವನ್ನು ಅಳೆಯುವುದಕ್ಕಾಗುವುದಿಲ್ಲ ಎಂದು ಪ್ರತಿಪಾದಿಸಿದ್ದರು.
'ಐಪಿಎಲ್ ಪ್ರದರ್ಶನಕ್ಕೂ ವಿಶ್ವಕಪ್ಗೂ ಸಂಬಂಧವಿಲ್ಲ' ಎಂಬ ಮಾತನ್ನು ನಿಜ ಮಾಡಿದ ರೋಹಿತ್
ಐಪಿಎಲ್ ಒಂದೂವರೆ ತಿಂಗಳು ನಡೆಯುವ ಲೀಗ್ ಆಗಿದ್ದು, ಇಲ್ಲಿ ಆಟಗಾರರು ನೀಡುವ ಪ್ರದರ್ಶನ ವಿಶ್ವಕಪ್ ತಂಡಕ್ಕೆ ಯಾವುದೇ ಪರಣಾಮ ಬೀರುವುದಿಲ್ಲ ಎಂದು ರೋಹಿತ್ ವಿಶ್ವಕಪ್ಗೂ ಮುನ್ನ ಹೇಳಿಕೆ ನೀಡಿದ್ದರು. ಇದೀಗ ಅದನ್ನು ತಮ್ಮ ಬ್ಯಾಟ್ನಿಂದ ನಿರೂಪಿಸಿ ತೋರಿಸಿದ್ದಾರೆ.
ಇದೀಗ ವಿಶ್ವಕಪ್ನಲ್ಲಿ ಭಾರತ ತಂಡ ಆಡಿರುವ ಮೂರು ಪಂದ್ಯಗಳಲ್ಲೂ ಉತ್ತಮ ಪ್ರದರ್ಶನ ತೋರಿರುವ ರೋಹಿತ್ ಶರ್ಮಾ 2 ಶತಕ ಹಾಗೂ 1 ಅರ್ಧಶತಕ ಸಹಿತ 319 ರನ್ ಗಳಿಸಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ 2ನೇ ಸ್ಥಾನ ಅಲಂಕರಿಸಿದ್ದಾರೆ. ಈ ಮೂಲಕ ಒಂದು ತಿಂಗಳ ಹಿಂದೆ ತಾವು ಹೇಳಿದ್ದ ಮಾತನ್ನು ನಿಜ ಮಾಡಿದ್ದಾರೆ.
ರೋಹಿತ್ ಮಾತ್ರವಲ್ಲದೆ ಯುವ ಸ್ಪಿನ್ ಬೌಲರ್ ಕುಲ್ದೀಪ್ ಕೂಡ ಐಪಿಎಲ್ನಲ್ಲಿ ವೈಫಲ್ಯ ಕಂಡಿದ್ದರು. ಆದರೆ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಬಾಬರ್ ಅಜಂ, ಫಾಖರ್ ಜಮಾನ್ ವಿಕೆಟ್ ಪಡೆಯುವ ಮೂಲಕ ತಮ್ಮ ತಾಕತ್ತನ್ನು ವಿಶ್ವಕ್ಕೆ ತೋರಿಸಿಕೊಟ್ಟಿದ್ದಾರೆ.