ಸಿಡ್ನಿ:ಆಸ್ಟ್ರೇಲಿಯಾ ವಿರುದ್ಧ 3ನೇ ಪಂದ್ಯದ ವೇಳೆ ವಿಲ್ ಪುಕೋವ್ಸ್ಕಿ ಅವರ ಎರಡು ಕ್ಯಾಚ್ಗಳನ್ನು ಡ್ರಾಪ್ ಮಾಡುವ ಮೂಲಕ ವಿಕೆಟ್ ಕೀಪರ್ ರಿಷಭ್ ಪಂತ್ ಟೀಕೆಗೆ ಗುರಿಯಾಗಿದ್ದಾರೆ.
ಎಸ್ಸಿಜಿಯಲ್ಲಿ ನಡೆದಿದ್ದ ಅಭ್ಯಾಸ ಪಂದ್ಯದಲ್ಲಿ ಸ್ಫೋಟಕ ಶತಕ ಸಿಡಿಸಿದ ಪಂತ್ ಮೊದಲ ಟೆಸ್ಟ್ನಲ್ಲಿ ಅವಕಾಶ ಪಡೆಯದಿದ್ದರೂ ಬಾಕ್ಸಿಂಗ್ ಡೇ ಟೆಸ್ಟ್ನಲ್ಲಿ ಅವಕಾಶ ಪಡೆದಿದ್ದರು. 29 ರನ್ ಗಳಿಸಿದ್ದ ಅವರು ರಹಾನೆ ಜೊತೆ ಪ್ರಮುಖ ಜೊತೆಯಾಟದಲ್ಲಿ ಪಾಲ್ಗೊಂಡಿದ್ದರು. ಅಲ್ಲದೆ ಇದೇ ಕ್ರೀಡಾಂಗಣದಲ್ಲಿ ಕಳೆದ ಪ್ರವಾಸದಲ್ಲಿ ಶತಕ ಸಿಡಿಸಿದ್ದ ದಾಖಲೆ ಇರುವುದರಿಂದ ಈ ಪಂದ್ಯದಲ್ಲೂ ಅವರಿಗೆ ಅವಕಾಶ ನೀಡಲಾಗಿದೆ. ಆದರೆ ತಮ್ಮ ಕೆಟ್ಟ ವಿಕೆಟ್ ಕೀಪಿಂಗ್ನಿಂದ ಭಾರಿ ಟ್ರೋಲ್ಗೊಳಗಾಗುತ್ತಿದ್ದಾರೆ.
ಗುರುವಾರ ಮಳೆಯಿಂದ ಕೇವಲ 55 ಓವರ್ಗಳ ಆಟ ನಡೆದಿತ್ತು. ಆದರೆ ಈಗಾಗಲೇ ರಿಷಭ್ ಪಂತ್ 2 ಕ್ಯಾಚ್ ಕೈಚೆಲ್ಲಿದ್ದಾರೆ. ಅಶ್ವಿನ್ ಎಸೆದ 22ನೇ ಓವರ್ನಲ್ಲಿ ವಿಲ್ ಪುಕೋವ್ಸ್ಕಿ ಔಟ್ಸೈಡ್ ಎಡ್ಜ್ ಟಚ್ ಆಗಿತ್ತು. ಆದರೆ ಪಂತ್ ಡ್ರಾಪ್ ಮಾಡಿದರು.
ಮತ್ತೆ 3 ಓವರ್ಗಳ ನಂತರ ಮತ್ತೊಂದು ಸುಲಭ ಕ್ಯಾಚ್ ಕೈಚೆಲ್ಲಿದರು. 26ನೇ ಓವರ್ನ ಕೊನೆಯ ಎಸೆತದಲ್ಲಿ ಪುಕೋವ್ಸ್ಕಿಗೆ ಮತ್ತೊಂದು ಜೀವದಾನ ಕೊಟ್ಟರು. ಇದರ ಸಂಪೂರ್ಣ ಲಾಭ ಪಡೆದುಕೊಂಡ 22 ವರ್ಷದ ಬ್ಯಾಟ್ಸ್ಮನ್ 110 ಎಸೆತಗಳಲ್ಲಿ 62 ರನ್ ಗಳಿಸಿ 35ನೇ ಓವರ್ನಲ್ಲಿ ಔಟಾದರು.
ನಿರ್ಣಾಯಕ ಟೆಸ್ಟ್ನಲ್ಲಿ ಕೈಗೆ ಬಂದ ಕ್ಯಾಚ್ಗಳನ್ನು ಕೈಬಿಟ್ಟಿದ್ದಕ್ಕೆ ಮಾಜಿ ಕ್ರಿಕೆಟಿಗ ಎಸ್.ಬದ್ರಿನಾಥ್ ಸೇರಿದಂತೆ ಹಲವಾರು ಕ್ರಿಕೆಟ್ ಅಭಿಮಾನಿಗಳು ಅಸಮಾಧಾನ ಹೊರಹಾಕಿದ್ದಾರೆ.