ದುಬೈ: ಐಪಿಎಲ್ನಲ್ಲಿ ಕಾಮೆಂಟೇಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಡೀನ್ ಜೋನ್ಸ್ ತೀವ್ರ ಹೃದಯಾಘಾತದಿಂದ ಗುರುವಾರ ಮೃತಪಟ್ಟಿದ್ದು, ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಇಂದು ಆರ್‌ಸಿಬಿ ಮತ್ತು ಪಂಜಾಬ್ ತಂಡಗಳು ತೋಳಿಗೆ ಕಪ್ಪುಪಟ್ಟಿ ಧರಿಸಿ ಆಡುತ್ತಿವೆ.
59 ವರ್ಷದ ಜೋನ್ಸ್1984 ರಿಂದ 1992ರವರೆಗೂ 8 ವರ್ಷಗಳ ಕಾಲ ಆಸ್ಟ್ರೇಲಿಯಾ ತಂಡದಲ್ಲಿ ಆಡಿದ್ದರು. 52 ಟೆಸ್ಟ್ ಪಂದ್ಯಗಳಲ್ಲಿ 3631 ರನ್ಗಳಿಸಿದ್ದರು. 11 ಶತಕ ಮತ್ತು 14 ಅರ್ಧಶತಕಗಳನ್ನು ಬಾರಿಸಿದ್ದರು. ಏಕದಿನ ಕ್ರಿಕೆಟ್ನಲ್ಲಿ 161 ಪಂದ್ಯಗಳಲ್ಲಿ 7 ಶತಕ ಹಾಗೂ 46 ಅರ್ಧಶತಕ ಸಹಿತ 6068 ರನ್ ಗಳಿಸಿದ್ದರು.