ಕರ್ನಾಟಕ

karnataka

ETV Bharat / sports

ಆರ್​ಸಿಬಿಗೆ ಯುಎಇನಲ್ಲಿ ಲಾಭವಿದೆ: ಆಕಾಶ್​ ಚೋಪ್ರಾ ಪ್ರತಿಪಾದನೆ

ಐಪಿಎಲ್​​ ಯುಎನಲ್ಲಿ ನಡೆದರೆ ಏನೆಲ್ಲ ಸವಾಲುಗಳನ್ನು ಕ್ರಿಕೆಟಿಗರು ಎದುರಿಸಲಿದ್ದಾರೆ ಎಂದು ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ಮಾತನಾಡಿರುವ ಆಕಾಶ್​ ಚೋಪ್ರಾ ದುಬೈನ ಬಿಸಿಲಿಗೆ ಕ್ರಿಕೆಟಿಗರು ಬಳಲಲಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಐಪಿಎಲ್​ 2020
ಐಪಿಎಲ್​ 2020

By

Published : Jul 23, 2020, 1:09 PM IST

ಮುಂಬೈ: ಭಾರತದಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಈ ಕಾರಣದಿಂದ 13ನೇ ಆವೃತ್ತಿಯನ್ನು ಯುಎಇಯಲ್ಲಿ ನಡೆಸಲು ಬಿಸಿಸಿಐ ತೀರ್ಮಾನ ಮಾಡಿದೆ.

ಐಪಿಎಲ್​​ ಯುಎಇನಲ್ಲಿ ನಡೆದರೆ ಏನೆಲ್ಲ ಸವಾಲುಗಳನ್ನು ಕ್ರಿಕೆಟಿಗರು ಎದುರಿಸಲಿದ್ದಾರೆ ಎಂದು ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ಮಾತನಾಡಿರುವ ಆಕಾಶ್​ ಚೋಪ್ರಾ ದುಬೈನ ಬಿಸಿಲಿಗೆ ಕ್ರಿಕೆಟಿಗರು ಬಳಲಲಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಆರ್​ಸಿಬಿಗೆ ಹೆಚ್ಚು ಲಾಭ

ಆರ್​ಸಿಬಿ ಸೀಮಿತ ಬೌಲಿಂಗ್​ ದಾಳಿಯನ್ನು ಹೊಂದಿದೆ. ಇದರಿಂದ ಇಲ್ಲಿನ ದೊಡ್ಡ ಕ್ರೀಡಾಂಗಣದಲ್ಲಿ ಬೌಲಿಂಗ್​ ಶಕ್ತಿ ಪ್ರಬಲವಾಗಿರದಿದ್ದರೂ ಹೆಚ್ಚು ಪರಿಣಾಮಕಾರಿಯಾಗುವುದಿಲ್ಲ. ಇನ್ನು ಇಲ್ಲಿನ ಕ್ರೀಡಾಂಗಣದಲ್ಲಿ ಸ್ಪಿನ್​ ಬೌಲಿಂಗ್​ ಹೆಚ್ಚು ಪರಿಣಾಮಕಾರಿಯಾಗಲಿದೆ.

ಆರ್​ಸಿಬಿಯಲ್ಲಿ ಯಜುವೇಂದ್ರ ಚಹಾಲ್​, ಪವನ್​ ನೇಗಿ, ಮೊಯಿನ್​ ಅಲಿಯಂತಹ ಸ್ಪಿನ್​ ಬೌಲರ್​ಗಳು ಇರುವುದರಿಂದ ಆರ್​ಸಿಬಿ ತನ್ನ ಸೀಮಿತ ಬೌಲಿಂಗ್​ ದಾಳಿಯಿಂದಲೇ ಹೆಚ್ಚು ಲಾಭ ಪಡೆಯಲಿದೆ ಎಂದಿದ್ದಾರೆ.

ಕಿಂಗ್ಸ್​ ಇಲೆವೆನ್ ​ಮತ್ತು ಡೆಲ್ಲಿ ಕ್ಯಾಪಿಟಲ್​ಗೂ ಲಾಭ

2014ರಲ್ಲೂ ಐಪಿಎಲ್​ ಯುಎನಲ್ಲಿ ನಡೆದಿತ್ತು. ಆ ಸಂದರ್ಭದಲ್ಲಿ ಮ್ಯಾಕ್ಸ್​ವೆಲ್​ ಅದ್ಭುತ ಪ್ರದರ್ಶನ ತೋರಿದ್ದರು. ಇದೀಗ ಉತ್ತಮ ಸ್ಪಿನ್ ಬೌಲಿಂಗ್​ ಹಾಗೂ ಮ್ಯಾಕ್ಸ್​ವೆಲ್​ ತಂಡ ಸೇರಿಕೊಂಡಿರುವುದರಿಂದ ಯುಎಇನಲ್ಲಿ ಕಿಂಗ್ಸ್​ಗೆ ಲಾಭವಾಗುವ ನಿರೀಕ್ಷೆಯಿದೆ. ಇನ್ನು ಡೆಲ್ಲಿ ಕ್ಯಾಪಿಟಲ್​ನಲ್ಲಿ ಅಮಿತ್​ ಮಿಶ್ರಾ, ಆರ್​ ಅಶ್ವಿನ್​, ಅಕ್ಷರ್​ ಪಟೇಲ್​ ಮತ್ತು ಸಂದೀಪ್​ ಲಾಮಿಚ್ಛಾನೆ ಅಂತಹ ಸ್ಪಿನ್​ ಬೌಲಿಂಗ್ ದಾಳಿ ಹೊಂದಿದ್ದು , ಬೌಲಿಂಗ್​ ಮೂಲಕವೇ ಹೆಚ್ಚಿನ ಪಂದ್ಯಗಳನ್ನು ಗೆಲ್ಲುವ ತಾಕತ್ತು ದೊರೆಯುತ್ತದೆ ಎಂದು ಚೋಪ್ರಾ ತಿಳಿಸಿದ್ದಾರೆ.

ABOUT THE AUTHOR

...view details