ಕರ್ನಾಟಕ

karnataka

ETV Bharat / sports

IPL​​ ಪ್ರದರ್ಶನದ ಮೇಲೆ ಧೋನಿ ಕ್ರಿಕೆಟ್​ ಭವಿಷ್ಯ: ಕೊನೆಗೂ ಮೌನ ಮುರಿದ ಕೋಚ್​ ಶಾಸ್ತ್ರಿ

ಕಳೆದ ನಾಲ್ಕು ತಿಂಗಳಿಂದ ಟೀಂ ಇಂಡಿಯಾ ತಂಡದಿಂದ ಹೊರಗುಳಿದಿದ್ದ ಧೋನಿ ಮುಂದಿನ ಟಿ-20 ವಿಶ್ವಕಪ್​ನಲ್ಲಿ ಭಾಗಿಯಾಗ್ತಾರೋ ಇಲ್ವೋ ಎಂಬ ಗೊಂದಲ ಶುರುವಾಗಿದ್ದು, ಇದೇ ವಿಷಯವಾಗಿ ಕೋಚ್​ ರವಿ ಶಾಸ್ತ್ರಿ ಮಾತನಾಡಿದ್ದಾರೆ.

Ravi Shastri
ಎಂಎಸ್​ ಧೋನಿ ಭವಿಷ್ಯ

By

Published : Nov 26, 2019, 8:09 PM IST

ಮುಂಬೈ:ಲಂಡನ್​​ನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್​ ಕ್ರಿಕೆಟ್​ ಬಳಿಕ ಟೀಂ ಇಂಡಿಯಾದ ಹಿರಿಯ ಆಟಗಾರ ಎಂ.ಎಸ್.​ ಧೋನಿ ಯಾವುದೇ ಕ್ರಿಕೆಟ್​​ ಪಂದ್ಯದಲ್ಲೂ ಭಾಗಿಯಾಗಿಲ್ಲ. ಇದೀಗ ಆರಂಭಗೊಳ್ಳಲಿರುವ ವೆಸ್ಟ್​ ಇಂಡೀಸ್​ ವಿರುದ್ಧದ ಸರಣಿಯಲ್ಲಿ ಅವರು ಅವಕಾಶ ಪಡೆದುಕೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಈ ಸರಣಿಯಲ್ಲೂ ಅವರು ತಂಡದಿಂದ ಹೊರಗುಳಿದಿದ್ದಾರೆ.

ಐಪಿಎಲ್​​ನಲ್ಲಿ ಎಂ.ಎಸ್.​ ಧೋನಿ

ಟೀಂ ಇಂಡಿಯಾ ಕೋಚ್​ ರವಿಶಾಸ್ತ್ರಿ ಇದೇ ವಿಷಯವಾಗಿ ಮಾತನಾಡಿದ್ದು, ಇಂಡಿಯನ್​ ಪ್ರೀಮಿಯರ್​ ಲೀಗ್​​ನಲ್ಲಿ ಧೋನಿ ನೀಡುವ ಪ್ರದರ್ಶನದ ಮೇಲೆ ಅವರ ಕ್ರಿಕೆಟ್​​ ಭವಿಷ್ಯ ನಿರ್ಧಾರವಾಗಲಿದೆ ಎಂದು ತಿಳಿಸಿದ್ದಾರೆ. ಮುಂದಿನ ಟಿ20 ಕ್ರಿಕೆಟ್​ ವಿಶ್ವಕಪ್​​​ನಲ್ಲಿ ಧೋನಿ ಭಾಗಿಯಾಗಬೇಕೋ, ಬೇಡ್ವೋ ಎಂಬುದರ ಕುರಿತು ಐಪಿಎಲ್​​ನಲ್ಲಿ ಅವರು ನೀಡುವ ಪ್ರದರ್ಶನ ಮಹತ್ವದ ಪಾತ್ರ ನಿರ್ವಹಿಸಲಿದೆ ಎಂದು ತಿಳಿಸಿದ್ದಾರೆ.

ಮುಂದಿನ ಟಿ-20 ವಿಶ್ವಕಪ್​​ನಲ್ಲಿ ಟೀಂ ಇಂಡಿಯಾದ 15 ಸದಸ್ಯರು ಯಾರೆಲ್ಲ ಎಂಬುದರ ಬಗ್ಗೆ ಐಪಿಎಲ್​​ನಲ್ಲಿ ಗೊತ್ತಾಗಲಿದ್ದು, ಧೋನಿ ನೀಡುವ ಪ್ರದರ್ಶನ ಸಹ ಇಲ್ಲಿ ಕೌಂಟ್​ ಆಗಲಿದೆ ಎಂದಿದ್ದಾರೆ.

ಇಂಡಿಯನ್​ ಪ್ರೀಮಿಯರ್​ ಲೀಗ್​ಗೂ ಮುನ್ನವೇ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲಿ ಭಾಗಿಯಾಗಲಿದ್ದು, ಐಸಿಸಿಯಿಂದ ಮಾನ್ಯತೆ ಪಡೆದುಕೊಂಡಿರುವ ವಿಶ್ವ ಇಲೆವೆನ್ ವಿರುದ್ಧ ಸೆಣೆಸಾಡಲು ಏಷ್ಯಾ ಇಲೆವೆನ್ ತಂಡಕ್ಕೆ ಮಹೇಂದ್ರ ಸಿಂಗ್ ಧೋನಿ ಸೇರಿದಂತೆ 7 ಆಟಗಾರರನ್ನು ನೀಡಲು ಬಾಂಗ್ಲಾ ಕ್ರಿಕೆಟ್ ಬೋರ್ಡ್ ಬಿಸಿಸಿಐಗೆ ಮನವಿ ಮಾಡಿದೆ.

ABOUT THE AUTHOR

...view details