ಮೈಸೂರು: ಹಿಮಾಚಲ ಪ್ರದೇಶ-ಕರ್ನಾಟಕ ವಿರುದ್ಧದ ರಣಜಿ ಪಂದ್ಯ ಡ್ರಾನಲ್ಲಿ ಅಂತ್ಯ ಕಂಡಿದೆ. ಮೊದಲ ಇನ್ನಿಂಗ್ಸ್ ಆಧಾರದ ಮೇಲೆ ಹಿ.ಪ್ರದೇಶ 3 ಅಂಕ ಪಡೆದುಕೊಂಡಿದೆ.
ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಗಂಣದಲ್ಲಿ ನಡೆದ ಪಂದ್ಯದಲ್ಲಿ ಕರ್ನಾಟಕ ಮೊದಲು ಬ್ಯಾಟಿಂಗ್ ನಡೆಸಿ 166 ರನ್ಗಳಿಗೆ ಆಲೌಟ್ ಆಗಿತ್ತು. ಇದಕ್ಕುತ್ತರವಾಗಿ ಹಿ.ಪ್ರದೇಶ 280 ರನ್ಗಳಿಸಿ 114 ರನ್ಗಳ ಮುನ್ನಡೆ ಅನುಭವಿಸಿತ್ತು.
ಮತ್ತೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕ ತಂಡ ದೇವದತ್ ಪಡಿಕ್ಕಲ್(99), ಕರುಣ್ ನಾಯರ್(64) ಶರತ್ ಬಿಆರ್ (44) ಉತ್ತಮ ಬ್ಯಾಟಿಂಗ್ ನೆರವಿನಿಂದ 296 ರನ್ಗಳಿಸಿತು. ಈ ಮೂಲಕ ಕೊನೆಯ ದಿನ ಹಿ.ಪ್ರದೇಶಕ್ಕೆ180 ರನ್ಗಳ ಟಾರ್ಗೆಟ್ ನೀಡಿತು.
180 ಟಾರ್ಗೆಟ್ ಪಡೆದ ಹಿಮಾಚಲ ಪ್ರದೇಶ 16 ಓವರ್ಗಳಲ್ಲಿ 34 ರನ್ಗಳಿಸಿ 2 ವಿಕೆಟ್ ಪಡೆದಿದ್ದ ವೇಳೆ ಪಂದ್ಯವನ್ನು ಡ್ರಾ ಎಂದು ಘೋಷಿಸಲಾಯಿತು. ಮೊದಲ ಇನ್ನಿಂಗ್ಸ್ ಆಧಾರದ ಮೇಲೆ ಹಿ.ಪ್ರದೇಶ ತಂಡ 3 ಅಂಕ ಹಾಗೂ ಕರ್ನಾಟಕ 1 ಅಂಕ ಪಡೆಯಿತು.