ಮುಂಬೈ :ಭಾರತ ತಂಡದ ಜಂಟಲ್ಮ್ಯಾನ್, ದಿವಾ ಲ್ ಎಂದೇ ಖ್ಯಾತರಾಗಿರುವ ಕನ್ನಡಿಗ ರಾಹುಲ್ ದ್ರಾವಿಡ್ ಒಬ್ಬ ಆಟಗಾರನಾಗಿ ದೇಶಕ್ಕೋಶ್ಕರ ಹೇಗೆ ಕಾರ್ಯ ನಿರ್ವಹಿಸಿದ್ದರೋ ಹಾಗೇ ನಿವೃತ್ತಿಯ ನಂತರವೂ ಭಾರತೀಯ ಕ್ರಿಕೆಟ್ಗೆ ದುಡಿಯುತ್ತಿದ್ದಾರೆ.
ಭಾರತ ತಂಡದ ಹೆಡ್ ಕೋಚ್ ಹುದ್ದೆಯ ಆಯ್ಕೆ ಸಂದರ್ಭದಲ್ಲಿ ಕ್ರಿಕೆಟ್ ಆಫ್ ಅಥಾರಿಟಿ ದ್ರಾವಿಡ್ರಿಗೆ ಹೆಡ್ ಕೋಚ್ ಆಫರ್ ನೀಡಿದ್ದರಂತೆ. ಆದರೆ, ದ್ರಾವಿಡ್ ಆ ಹುದ್ದೆಯನ್ನು ತಿರಸ್ಕರಿಸಿದ್ದರು ಎಂದು ಸಿಒಎ ಅಧ್ಯಕ್ಷ ವಿನೋದ್ ರಾಯ್ ಸ್ಪೋರ್ಟ್ಸ್ಕೀಡಾ ಸಂದರ್ಶನದಲ್ಲಿ ತಿಳಿಸಿದ್ದಾರೆ. ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆ ವಹಿಸಿಕೊಳ್ಳಲು ರಾಹುಲ್ ದ್ರಾವಿಡ್ ಅವರಿಗೆ ಸಮಿತಿ ಬೆಂಬಲಿಸಿತ್ತು. ಆದರೆ, ಕೌಟುಂಬಿಕ ಕಾರಣಗಳನ್ನು ಉಲ್ಲೇಖಿಸಿ ಅವರು ಅದನ್ನು ನಿರಾಕರಿಸಿದ್ದರು. ತನ್ನ ಮಕ್ಕಳು ಬೆಳೆಯುತ್ತಿದ್ದಾರೆ ಮತ್ತು ಅವರೊಂದಿಗೆ ಸಾಕಷ್ಟು ಸಮಯ ಕಳೆಯಬೇಕಾಗಿದೆ ಎಂದು ದ್ರಾವಿಡ್ ಆ ಆಫರ್ ತಿರಸ್ಕರಿಸಿದ್ದರು ಎಂದು ವಿನೋದ್ ರಾಯ್ ಹೇಳಿದರು.