ಮೆಲ್ಬೋರ್ನ್: ಪ್ರಸ್ತುತ ನಡೆಯುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್ನಲ್ಲಿ ಭಾರತ ತಂಡದ ಅಜಿಂಕ್ಯಾ ರಹಾನೆ ಅವರ ಶತಕ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿನ ಶ್ರೇಷ್ಠ ಶತಕಗಳಲ್ಲಿ ಒಂದಾಗಿದೆ ಎಂದು ಭಾರತ ತಂಡದ ಮಾಜಿ ನಾಯಕ ಸುನೀಲ್ ಗವಾಸ್ಕರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮೊದಲ ಟೆಸ್ಟ್ನಲ್ಲಿ ಭಾರತ ಅತ್ಯಂತ ಅವಮಾನಕರ ಸೋಲು ಕಂಡಿತ್ತು. 36 ರನ್ಗಳಿಗೆ ಆಲೌಟ್ ಆಗುವ ಮೂಲಕ ಟೆಸ್ಟ್ ಚರಿತ್ರೆಯಲ್ಲಿ ಅತ್ಯಂತ ಕಳಪೆ ಮೊತ್ತ ದಾಖಲಿಸಿತ್ತು. ಈ ಮೂಲಕ 8 ವಿಕೆಟ್ಗಳ ಸೋಲು ಕಂಡಿತ್ತು.
ಆದರೆ ಪ್ರವಾಸಿ ತಂಡ 2ನೇ ಟೆಸ್ಟ್ನಲ್ಲಿ ಅದ್ಭುತವಾಗಿ ತಿರುಗಿಬಿದ್ದಿದ್ದು, ಆಸ್ಟ್ರೇಲಿಯಾ ತಂಡವನ್ನು ಎರಡೂ ಇನ್ನಿಂಗ್ಸ್ಗಳಲ್ಲೂ ಕಡಿಮೆ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದೆ. ಬ್ಯಾಟಿಂಗ್ನಲ್ಲಿ ರಹಾನೆ ಶತಕ ಹಾಗೂ ಜಡೇಜಾ ಅರ್ಧಶತಕ ಸಿಡಿಸುವ ಮೂಲಕ ಪ್ರಾಬಲ್ಯ ಸಾಧಿಸಿದರು.
ಇದನ್ನು ಓದಿ: ರಹಾನೆಗೆ ಪ್ರಿಯವಾದ ಶತಕ ಇದಲ್ವಂತೆ!.. ಮತ್ಯಾವುದು ಗೊತ್ತಾ?
ಈ ಕುರಿತು ಮಾನಾಡಿರುವ ಸುನೀಲ್ ಗವಾಸ್ಕರ್, "ಈ ಶತಕ ಭಾರತೀಯ ಕ್ರಿಕೆಟ್ನ ಚರಿತ್ರೆಯಲ್ಲಿನ ಅತ್ಯಂತ ಶ್ರೇಷ್ಠ ಶತಕಗಳಲ್ಲಿ ಒಂದಾಗಲಿದೆ ಎಂದು ನಾನು ಭಾವಿಸುತ್ತೇನೆ" ಎಂದಿದ್ದಾರೆ.
ರಹಾನೆ ಈ ಪಂದ್ಯದಲ್ಲಿ 112 ರನ್ ಗಳಿಸಿ ಭಾರತ ತಂಡಕ್ಕೆ 131 ರನ್ಗಳ ಮುನ್ನಡೆ ದೊರಕಿಸಿಕೊಟ್ಟಿದ್ದಾರೆ. ಬೌಲರ್ಗಳು ಕೂಡ ಅತ್ಯುತ್ತಮ ಪ್ರದರ್ಶನದ ಮೂಲಕ ಆತಿಥೇಯ ತಂಡದ ಪ್ರಮುಖ 6 ವಿಕೆಟ್ ಪಡೆದು ಕೇವಲ 133 ರನ್ ಬಿಟ್ಟುಕೊಟ್ಟಿದ್ದಾರೆ.
"ಮೊದಲ ಪಂದ್ಯದಲ್ಲಿ 36 ರನ್ಗಳಿಗೆ ಆಲೌಟ್ ಆಗಿ ದಯನೀಯ ಸೋಲು ಕಂಡ ನಂತರ ಭಾರತ ತಂಡ ಸುಮ್ಮನೆ ಮಲಗಲು ಹೋಗುವುದಿಲ್ಲ. ಬದಲಾಗಿ ಈ ರೀತಿ ತಿರುಗಿ ಬೀಳಲಿದೆ ಎಂದು ಎದುರಾಳಿಗೆ ಸಂದೇಶ ನೀಡಿದೆ. ಹಾಗಾಗಿ ರಹಾನೆಯವರ ಈ ಶತಕ ಭಾರತೀಯ ಕ್ರಿಕೆಟ್ನಲ್ಲಿ ಪ್ರಮುಖ್ಯತೆ ಪಡೆದ ಶತಕಗಳಲ್ಲಿ ಒಂದು ಎಂದು ನಾನು ಭಾವಿಸಿದ್ದೇನೆ " ಎಂದು ಭಾರತ ತಂಡದ ಮಾಜಿ ಆರಂಭಿಕ ಬ್ಯಾಟ್ಸ್ಮನ್ ಹೇಳಿದ್ದಾರೆ.
ಇದನ್ನು ಓದಿ: ಐಸಿಸಿ ಅವಾರ್ಡ್ಸ್ 2020: ರನ್ ಮಷಿನ್ ಕೊಹ್ಲಿಗೆ ಐಸಿಸಿ ದಶಕದ ಕ್ರಿಕೆಟಿಗ ಪ್ರಶಸ್ತಿ