ಬ್ರಿಸ್ಬೇನ್: 4ನೇ ಟೆಸ್ಟ್ಗಾಗಿ ಮತ್ತೊಮ್ಮೆ ಕ್ವಾರಂಟೈನ್ ಆಗುವುದು ಕಷ್ಟ, ಬೇಕಿದ್ದರೆ ಆಸ್ಟ್ರೇಲಿಯಾದ ಯಾವುದೇ ನೆಲದಲ್ಲಾದರೂ ಅಥವಾ ಒಂದೇ ಕ್ರೀಡಾಂಗಣದಲ್ಲಿ 2 ಪಂದ್ಯಗಳನ್ನು ಆಡಲು ನಾವು ಸಿದ್ಧರಿದ್ದೇವೆ ಎಂದು ಟೀಂ ಇಂಡಿಯಾ ಮ್ಯಾನೇಜ್ಮೆಂಟ್ ಬ್ರಿಸ್ಬೇನ್ ಟೆಸ್ಟ್ಗೂ ಮುನ್ನ ಕ್ವಾರಂಟೈನ್ ಆಗಬೇಕೆಂಬ ವಿಚಾರಕ್ಕೆ ಪ್ರತಿಕ್ರಿಯಿಸಿತ್ತು.
ಭಾರತ ತಂಡ 3 ತಿಂಗಳಿನಿಂದ ಬಯೋ ಬಬಲ್ನಲ್ಲಿದೆ. ಮೊದಲು ಐಪಿಎಲ್ಗಾಗಿ ದುಬೈನಲ್ಲಿ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಸರಣಿಗಾಗಿ ಸಿಡ್ನಿಯಲ್ಲಿ 14 ದಿನಗಳ ಕ್ವಾರಂಟೈನ್ ಮುಗಿಸಿದೆ. ಇದೀಗ 4ನೇ ಟೆಸ್ಟ್ಗಾಗಿ ಬ್ರಿಸ್ಬೇನ್ಗೆ ತೆರಳಬೇಕಿರುವ ಆಟಗಾರರಿಗೆ ಅಲ್ಲೂ ಕೂಡ 14 ದಿನಗಳ ಕ್ವಾರಂಟೈನ್ ಆಗಬೇಕೆಂದು ಅಲ್ಲಿನ ಸರ್ಕಾರ ಆದೇಶಿಸಿದೆ.
ಆದರೆ ಇದಕ್ಕೆ ಭಾರತ ತಂಡ ಒಪ್ಪದಿರುವುದಕ್ಕೆ ಕ್ವೀನ್ಸ್ಲ್ಯಾಂಡ್ ಸರ್ಕಾರ ನಿಯಮ ಪಾಲನೆ ಮಾಡದಿದ್ದರೆ ನೀವು ಬರುವುದೇ ಬೇಡ ಎಂದು ಟೀಂ ಇಂಡಿಯಾಗೆ ತಿರುಗೇಟು ನೀಡಿದೆ.