ಸಿಡ್ನಿ: ಟೀಂ ಇಂಡಿಯಾ ಆಟಗಾರ ಚೇತೇಶ್ವರ್ ಪುಜಾರ ಟೆಸ್ಟ್ ಕ್ರಿಕೆಟ್‌ನಲ್ಲಿ 6,000 ರನ್ ಪೂರ್ಣಗೊಳಿಸಿದ್ದು, ಭಾರತದ ಪರ ಈ ಸಾಧನೆ ಮಾಡಿದ 11ನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಲ್ಲಿ 6 ಸಾವಿರ ರನ್ ಪೂರೈಸಿದ ಚೇತೇಶ್ವರ್ ಪೂಜಾರ - ಅರ್ಧಶತಕ ಗಳಿಸಿದ ಪೂಜಾರ
ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ನಾಲ್ಕನೇ ದ್ವಿತೀಯ ಇನ್ನಿಂಗ್ಸ್ನಲ್ಲಿ ಅರ್ಧಶತಕ ಗಳಿಸಿದ ಪೂಜಾರ ಟೆಸ್ಟ್ ಕ್ರಿಕೆಟ್‌ನಲ್ಲಿ 6 ಸಾವಿರ ರನ್ ಪೂರೈಸಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಲ್ಲಿ 6 ಸಾವಿರ ರನ್ ಪೂರೈಸಿದ ಚೇತೇಶ್ವರ್ ಪೂಜಾರ
ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ (ಎಸ್‌ಸಿಜಿ) ನಡೆದ ಮೂರನೇ ಟೆಸ್ಟ್ ಪಂದ್ಯದ ಅಂತಿಮ ದಿನದಂದು ಪೂಜಾರ ಈ ಮೈಲಿಗಲ್ಲು ಸಾಧಿಸಿದರು. ನಾಲ್ಕನೇ ಇನ್ನಿಂಗ್ಸ್ 76 ನೇ ಓವರ್‌ನಲ್ಲಿ, ನಾಥನ್ ಲಿಯಾನ್ ಎಸೆತದಲ್ಲಿ ಬೌಂಡರಿ ಸಿಡಿಸಿ 6,000 ರನ್ ಪೂರೈಸಿದ್ರು.
ದ್ವಿತೀಯ ಇನ್ನಿಂಗ್ಸ್ನಲ್ಲಿ ನಿದಾನಗತಿಯಲ್ಲಿ ಬ್ಯಾಟ್ ಬೀಸಿದ ಪೂಜಾರ, ರಿಷಭ್ ಪಂತ್ ಜೊತೆ ಸೇರಿ 4ನೇ ವಿಕೆಟ್ಗೆ 148 ರನ್ಗಳ ಜೊತೆಯಾಟವಾಡಿದ್ರು. ಆದರೆ 77 ರನ್ ಗಳಿಸಿರುವಾಗ ಹೆಜಲ್ವುಡ್ ಬೌಲಿಂಗ್ನಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರಿದ್ರು.