ಸಿಡ್ನಿ :ಭಾರತದ ವಿರುದ್ಧ ಮುಂಬರುವ ಟೆಸ್ಟ್ ಸರಣಿಯಲ್ಲಿ ಆರಂಭಿಕ ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿರುವ ಆಸ್ಟ್ರೇಲಿಯಾದ ಯುವ ಬ್ಯಾಟ್ಸ್ಮನ್ ವಿಲ್ ಪುಕೋವ್ಸ್ಕಿ, ಮೊದಲ ಅಭ್ಯಾಸ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವ ವೇಳೆ ತಲೆಗೆ ಪೆಟ್ಟು ಬಿದ್ದಿರುವುದರಿಂದ ಡಿಸೆಂಬರ್ 11ರಿಂದ ಆರಂಭವಾಗಲಿರುವ ಅಹರ್ನಿಶಿ ಅಭ್ಯಾಸ ಪಂದ್ಯದಿಂದ ಹೊರಗುಳಿಯಬೇಕಾಗಿದೆ.
ಕ್ರಿಕೆಟ್ ಆಸ್ಟ್ರೇಲಿಯಾದ ಶೆಫೀಲ್ಡ್ ಶೀಲ್ಡ್ ಪ್ರಥಮ ದರ್ಜೆ ಟೂರ್ನಿಯಲ್ಲಿ ಬ್ಯಾಕ್ ಟು ಬ್ಯಾಕ್ ದ್ವಿಶತಕ ಸಿಡಿಸಿ ಮೊದಲ ಬಾರಿಗೆ ಆಸ್ಟ್ರೇಲಿಯಾ ತಂಡ ಸೇರಿಕೊಂಡಿರುವ ಪುಕೋವ್ಸ್ಕಿ ಖಾಯಂ ಆರಂಭಿಕ ಜೋಬರ್ನ್ಸ್ ಜೊತೆ ಪೈಪೋಟಿಯಲ್ಲಿದ್ದಾರೆ. ವಾರ್ನರ್ ಗಾಯಕ್ಕೆ ತುತ್ತಾಗಿ ಮೊದಲ ಟೆಸ್ಟ್ನಿಂದ ಹೊರಬಿದ್ದಿರುವುದರಿಂದ ಪುಕೋವ್ಸ್ಕಿಗೆ ಅವಕಾಶ ಸಿಗಲಿದೆ ಎಂಬ ಮಾತು ಕೇಳಿ ಬಂದಿದೆ.
ಆದರೆ, ಮಂಗಳವಾರ ಆಸ್ಟ್ರೇಲಿಯಾ ಎ ಮತ್ತು ಭಾರತ ಎ ತಂಡಗಳ ನಡುವಿನ ಅಭ್ಯಾಸ ಪಂದ್ಯದ ಕೊನೆಯ ದಿನ ತಲೆಗೆ ಪೆಟ್ಟು ತಿಂದಿದ್ದಾರೆ. ಅವರು 29 ರನ್ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ಭಾರತೀಯ ಯುವ ಬೌಲರ್ ಕಾರ್ತಿಕ್ ತ್ಯಾಗಿ ಎಸೆದ ಚೆಂಡು ಹೆಲ್ಮೆಟ್ಗೆ ಬಲವಾಗಿ ಬಿದ್ದಿರುವುದರಿಂದ ಅವರನ್ನು ಮುಂದಿನ ಅಭ್ಯಾಸ ಪಂದ್ಯಕ್ಕೆ ವಿಶ್ರಾಂತಿ ನೀಡಲಾಗಿದೆ.
ಚೆಂಡು ಹೆಲ್ಮೆಟ್ಗೆ ಬಡಿದ ತಕ್ಷಣ ಸಣ್ಣದಾಗಿ ಕನ್ಮಸನ್(ತಲೆ ನೋವು)ನ ಲಕ್ಷಣಗಳನ್ನು ಆತ(ಪುಕೋವ್ಸ್ಕಿ) ಅನುಭವಿಸಿದ್ದಾನೆ. ಆದರೆ, ಮೈದಾನವನ್ನು ಯಾವುದೇ ಭಯವಿಲ್ಲದೆ ತ್ಯಜಿಸಿದ್ದಾನೆ ಎಂದು cricket.com.au ಗೆ ನೀಡಿದ ಸಂದರ್ಶನದಲ್ಲಿ ವೈದ್ಯರ ತಂಡ ತಿಳಿಸಿದೆ.
ಪುಕೋವ್ಸ್ಕಿ ಪ್ರಸ್ತುತ ವೈದ್ಯರ ಮೇಲ್ವೀಚಾರಣೆಯಲ್ಲಿದ್ದಾರೆ. ಅವರು ಸಿಬ್ಬಂದಿ, ಸಹ ಆಟಗಾರರು ಮತ್ತು ಕುಟುಂಬದವರೊಂದಿಗೆ ಮುಕ್ತವಾಗಿ ಮಾತನಾಡಿದ್ದಾರೆ ಎಂದು ತಂಡದ ವೈದ್ಯ ಜಾನ್ ಆರ್ಚಾರ್ಡ್ ತಿಳಿಸಿದ್ದಾರೆ. 22 ವರ್ಷದ ಯುವ ಆಟಗಾರ ಅಭ್ಯಾಸ ತಂಡಕ್ಕಾಗಿ ಘೋಷಿಸಿರುವ ತಂಡದಲ್ಲಿ ಇರುತ್ತಾರೆ. ಆದರೆ 3 ದಿನಗಳ ಅಭ್ಯಾಸ ಪಂದ್ಯದಲ್ಲಿ ಆಡುವುದಿಲ್ಲ ಎಂದು ಅವರು ಹೇಳಿದ್ದಾರೆ.