ನವದೆಹಲಿ:ಐಸಿಸಿ ವಿಶ್ವಕಪ್ನ ಸೆಮಿಫೈನಲ್ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ 18 ರನ್ಗಳ ಸೋಲು ಕಾಣುವ ಮೂಲಕ ಕೊಹ್ಲಿ ಪಡೆ ತನ್ನ ವರ್ಲ್ಡ್ಕಪ್ ಅಭಿಯಾನ ಮುಗಿಸಿದೆ. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಭಾರತ ತಂಡಕ್ಕೆ ಟ್ವೀಟ್ ಮೂಲಕ ಧೈರ್ಯ ತುಂಬಿದ್ದಾರೆ.
ನಿರಾಶಾದಾಯಕ ಫಲಿತಾಂಶ; ಆದ್ರೂ ಕೊನೆವರೆಗೂ ಹೋರಾಡಿದ್ದೀರಿ: ಕೊಹ್ಲಿ ಟೀಂಗೆ ಧೈರ್ಯ ತುಂಬಿದ ಮೋದಿ
ವಿಶ್ವಕಪ್ನ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ವಿರೋಚಿತ ಸೋಲು ಕಂಡು ಟೂರ್ನಿಯಿಂದ ಹೊರಬಿದ್ದಿದ್ದು, ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಹುಲ್ ಗಾಂಧಿ ಟ್ವೀಟ್ ಮಾಡಿ ತಂಡಕ್ಕೆ ಧೈರ್ಯ ತುಂಬಿದ್ದಾರೆ.
ಆರಂಭಿಕ ಆಘಾತದ ನಡುವೆಯೂ ಕೊನೆಯವರೆಗೂ ಟೀಂ ಇಂಡಿಯಾ ಹೋರಾಟ ನಡೆಸಿದ ರೀತಿ ನಿಜಕ್ಕೂ ಶ್ಲಾಘನೀಯ. ಫಲಿತಾಂಶ ನಿರಾಶಾದಾಯಕವಾಗಿರಬಹುದು. ಆದರೆ ನೀವೂ ಹೋರಾಡಿರುವ ರೀತಿ ನಿಜಕ್ಕೂ ಮೆಚ್ಚುವಂತಹದ್ದು ಎಂದು ಟ್ವೀಟ್ ಮಾಡಿರುವ ಮೋದಿ, ಟೂರ್ನಿಯುದ್ದಕ್ಕೂ ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದೀರಿ. ಇದರಿಂದ ನಮಗೆ ಹೆಮ್ಮೆ ಇದೆ. ಗೆಲುವು ಹಾಗೂ ಸೋಲು ಜೀವನದ ಎರಡು ಮುಖಗಳು. ಮುಂದಿನ ದಿನಗಳಲ್ಲಿ ನಿಮ್ಮಿಂದ ಅದ್ಭುತ ಕ್ರಿಕೆಟ್ ಮೂಡಿ ಬರಲಿ ಎಂದು ಆತ್ಮವಿಶ್ವಾಸ ತುಂಬಿದ್ದಾರೆ.
ರಾಹುಲ್ ಗಾಂಧಿ ಟ್ವೀಟ್
ಶತಕೋಟಿ ಕ್ರೀಡಾಭಿಮಾನಿಗಳ ಕನಸು ನುಚ್ಚುನೂರಾಗಿದ್ದರೂ, ಟೀಂ ಇಂಡಿಯಾ ಹೋರಾಡಿರುವ ರೀತಿ ನಿಜಕ್ಕೂ ಅದ್ಭುತ. ನಮ್ಮ ಪ್ರೀತಿ ಹಾಗೂ ಗೌರವಕ್ಕೆ ನೀವೂ ಅರ್ಹರಾಗಿದ್ದೀರಿ ಎಂದಿರುವ ರಾಹುಲ್, ಫೈನಲ್ಗೆ ಲಗ್ಗೆ ಹಾಕಿರುವ ನ್ಯೂಜಿಲ್ಯಾಂಡ್ ತಂಡಕ್ಕೆ ಅಭಿನಂದನೆಗಳು ಎಂದಿದ್ದಾರೆ.