ಲಂಡನ್: ವಿಶ್ವಕಪ್ ಸೆಮಿಫೈನಲ್ ತಲುಪಿದ ಖುಷಿಯಲ್ಲಿದ್ದ ಕಾಂಗರೂ ಪಡೆಗೆ ಗಾಯದ ಸಮಸ್ಯೆ ಎದರಾಗಿದೆ. ಮಧ್ಯಮ ಕ್ರಮಾಂಕದ ನಂಬಿಕಸ್ಥ ಬ್ಯಾಟ್ಸ್ಮನ್ ಆಗಿದ್ದ ಉಸ್ಮಾನ್ ಖವಾಜ ಗಾಯಕ್ಕೆ ತುತ್ತಾಗಿದ್ದು, ಆಸೀಸ್ ತಂಡ ಯಾರನ್ನ ಕಡೆಗಣಿಸಿತ್ತೋ ಆತನನ್ನೇ ಮತ್ತೆ ತಂಡಕ್ಕೆ ಸೇರ್ಪಡೆಗೊಳಿಸಿದ್ದಲ್ಲದೇ, ಸೆಮಿಫೈನಲ್ನಲ್ಲೂ ಆಡಿಸಲು ನಿರ್ಧರಿಸಿದೆ.
ವಿಶ್ವಕಪ್ ಪ್ರಾಥಮಿಕ ತಂಡದ ಘೋಷಿಸಿದ್ದ ಆಸ್ಟ್ರೇಲಿಯಾ ತಂಡದಲ್ಲಿ ವಿಕೆಟ್ ಕೀಪರ್ ಸ್ಥಾನಕ್ಕೆ ಪೀಟರ್ ಹ್ಯಾಂಡ್ಸ್ಕಂಬ್ ಬಿಟ್ಟು ಅಲೆಕ್ಸ್ ಕ್ಯಾರಿಯನ್ನು ಆಯ್ಕೆ ಮಾಡಿದ್ದು ಅಸೀಸ್ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿತ್ತು. ಆದರೆ ಗುರುವಾರ ಇಂಗ್ಲೆಂಡ್ ವಿರುದ್ಧ ನಡೆಯುವ ಎರಡನೇ ಸೆಮಿಫೈನಲ್ನಲ್ಲಿ ಆಡುವ 11ರ ಬಳಗದಲ್ಲಿ ಕಣಕ್ಕಿಳಿಯುವುದು ಖಚಿತ ಎಂದು ಕೋಚ್ ಜಸ್ಟಿನ್ ಲ್ಯಾಂಗರ್ ತಿಳಿಸಿದ್ದಾರೆ.