ಲಾಹೋರ್:ಉಮರ್ ಅಕ್ಮಲ್ ಅವರ ಶಿಕ್ಷೆಯ ಅವಧಿಯನ್ನು ಕಡಿಮೆ ಮಾಡಿದ್ದ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ನಿರ್ಧರಿಸಿದೆ.
ಉಮರ್ ಅಕ್ಮಲ್ಗೆ ಮತ್ತೆ ಶಾಕ್: ನಿಷೇಧ ಅವಧಿ ಕಡಿತ ವಿರುದ್ಧ ಮೇಲ್ಮನವಿಗೆ ಪಿಸಿಬಿ ನಿರ್ಧಾರ - Umar akmal ban
ಅಕ್ಮಲ್ಗೆ ತಿರುಗೇಟು ನೀಡಿರುವ ಪಿಸಿಬಿ ಶಿಕ್ಷೆ ಅವಧಿ ಕಡಿಮೆ ಮಾಡಿರುವುದರ ವಿರುದ್ಧವೇ ಮೆಲ್ಮನವಿ ಸಲ್ಲಿಸುವುದಾಗಿ ಹೇಳಿದೆ. ಅಕ್ಮಲ್ ಅವರ ಮೇಲಿನ ಶಿಕ್ಷೆಯ ಅವಧಿಯನ್ನು ಕೇವಲ ಸಹಾನುಭೂತಿಯ ದೃಷ್ಟಿಕೋನದ ಆಧಾರದ ಮೇಲೆ ತೆಗೆದುಕೊಳ್ಳಲಾಗಿದೆ. ಆದರೆ ಪಿಸಿಬಿಯ ಭ್ರಷ್ಟಾಚಾರ ನಿಯಮ 7.5.4 ಅನ್ವಯ ನ್ಯಾಯಾಧೀಶರ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಮುಂದಾಗಿದೆ.
ಉಮರ್ ಅಕ್ಮಲ್
ಅಕ್ಮಲ್ ಪ್ರಕರಣವನ್ನು ವಿಚಾರಣೆ ನಡೆಸಲು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಸ್ವತಂತ್ರ ತೀರ್ಪುಗಾರ ಸಮಿತಿ ರಚಿಸಿತ್ತು. ಕಳೆದ ತಿಂಗಳು ಈ ಪ್ರಕರಣದ ವಿಚಾರಣೆ ನಡೆಸಿದ್ದ ಮಾಜಿ ನ್ಯಾಯಾಧೀಶ ಫಕೀರ್ ಮೊಹಮ್ಮದ್ ಖೋಕರ್, ಉಮರ್ ಅಕ್ಮಲ್ ಅವರ ನಿಷೇಧದ ಶಿಕ್ಷೆಯ ಅವಧಿಯನ್ನು 3 ವರ್ಷಗಳ ಬದಲಾಗಿ 18 ತಿಂಗಳ ಅವಧಿಗೆ ಇಳಿಸಿತ್ತು. ಆದರೆ ಶಿಕ್ಷೆಯ ಅವಧಿಯನ್ನು ಇನ್ನೂ ಕಡಿಮೆ ಮಾಡಲು ಅಕ್ಮಲ್ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದ್ದರು.
ಆದರೆ ಅಕ್ಮಲ್ಗೆ ತಿರುಗೇಟು ನೀಡಿರುವ ಪಿಸಿಬಿ ಶಿಕ್ಷೆ ಕಡಿಮೆ ಮಾಡಿರುವುದರ ವಿರುದ್ಧವೇ ಮೆಲ್ಮನವಿ ಸಲ್ಲಿಸುವುದಾಗಿ ಹೇಳಿದೆ.
Last Updated : Aug 11, 2020, 6:26 PM IST