ಹೈದರಾಬಾದ್:ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಹಿಡಿತ ಕಳೆದುಕೊಂಡಿರುವ ಪಾಕಿಸ್ತಾನ ತಂಡಕ್ಕೆ ಬಲ ತುಂಬಲು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಮುಂದಾಗಿದ್ದು, ಈ ನಿಟ್ಟಿನಲ್ಲಿ ತಂಡದ ಮಾಜಿ ನಾಯಕನನ್ನು ಕೋಚ್ ಹುದ್ದೆಗೆ ತರಲು ಚಿಂತನೆ ನಡೆಸಿದೆ.
ಪಾಕಿಸ್ತಾನ ತಂಡವನ್ನ ನಾಯಕನಾಗಿ ಮುನ್ನಡೆಸಿ ಅನುಭವ ಹೊಂದಿರುವ ಮಿಸ್ಬಾ ಉಲ್ ಹಕ್ರನ್ನು ಪಾಕ್ ತಂಡದ ಕೋಚ್ ಹಾಗೂ ಆಯ್ಕೆ ಸಮಿತಿಯ ಮುಖ್ಯಸ್ಥರನ್ನಾಗಿ ನೇಮಿಸಲು ಮುಂದಾಗಿದೆ.
ಪಾಕ್ ಮಾಜಿ ನಾಯಕ ಮಿಸ್ಬಾ ಉಲ್ ಹಕ್ ಪಾಕಿಸ್ತಾನ ತಂಡದ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಆಹ್ವಾನ ಮಾಡಲಾಗಿದ್ದು, ಆಗಸ್ಟ್ 23 ಕೊನೆಯ ದಿನವಾಗಿದೆ. ಮಿಸ್ಬಾ ಉಲ್ ಹಕ್ರನ್ನು ಕೋಚ್ ಸ್ಥಾನಕ್ಕೆ ತರಲು ಉದ್ದೇಶಿಸಲಾಗಿದ್ದರೂ ಇಲ್ಲಿತನಕ ಮಿಸ್ಬಾ ಅರ್ಜಿ ಸಲ್ಲಿಕೆ ಮಾಡಿಲ್ಲ.
2007ರ ಟಿ-20 ವಿಶ್ವಕಪ್ ಫೈನಲ್ನ ಮಿಸ್ಬಾ ಆಟ ಇಂದಿಗೂ ಕ್ರಿಕೆಟ್ ಅಭಿಮಾನಿಗಳ ಮನದಲ್ಲಿ ಹಸಿರಾಗಿದೆ. ಉಪಾಂತ್ಯ ಪಂದ್ಯದಲ್ಲಿ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಮಿಸ್ಬಾ ವಿಫಲವಾದ ಪರಿಣಾಮ ವಿಶ್ವಕಪ್ ಭಾರತದ ಪಾಲಾಗಿತ್ತು. ಮಿಸ್ಬಾ ಉಲ್ ಹಕ್ 2017ರ ಮೇ ತಿಂಗಳಲ್ಲಿ ಎಲ್ಲ ಮಾದರಿಯ ಕ್ರಿಕೆಟ್ಗೆ ವಿದಾಯ ಘೋಷಿಸಿದ್ದರು. ಪ್ರಸ್ತುತ ಸದ್ಯ ಟಿ-20 ಲೀಗ್ ಹಾಗೂ ದೇಶೀಯ ಕ್ರಿಕೆಟ್ನಲ್ಲಿ ಸಕ್ರಿಯರಾಗಿದ್ದಾರೆ.