ಲಂಡನ್: 14 ದಿನಗಳ ಸೆಲ್ಫ್ ಐಸೊಲೇಸನ್ ಮುಗಿಸಿದ ನಂತ ಪಾಕಿಸ್ತಾನ ಆಟಗಾರರು ತರಬೇತಿಗಾಗಿ ಡರ್ಬಿಗೆ ಆಗಮಿಸಿದ್ದಾರೆ. ಆಗಸ್ಟ್ 5ರಿಂದ ಇಂಗ್ಲೆಂಡ್ ವಿರುದ್ಧ ಬಹು ನಿರೀಕ್ಷಿತ ಟೆಸ್ಟ್ ಸರಣಿ ಆರಂಭವಾಗಲಿದೆ.
ಇನ್ನು ಕ್ವಾರಂಟೈನ್ ಅವಧಿಯನ್ನು ಮುಗಿಸಿ ಡರ್ಬಿಗೆ ಆಗಮಿಸಿದ ಪಾಕ್ ತಂಡಕ್ಕೆ 5 ಸ್ಟಾರ್ ಹೋಟೆಲ್ ಬದಲು 3 ಸ್ಟಾರ್ ಹೋಟೆಲ್ನಲ್ಲಿ ಆತಿಥ್ಯ ನೀಡಲಾಗುತ್ತಿದೆ. ಜೊತೆಗೆ ಆಟಗಾರರು ರಾತ್ರಿ, ಮಧ್ಯಾಹ್ನದ ಔತಣಕ್ಕಾಗಿ ಕೆಳ ಮಹಡಿಗಳಿಗೆ ಬರುವುದಕ್ಕೆ ಹಾಗೂ ತಂಡದ ಸಹ ಆಟಗಾರರನ್ನು ಭೇಟಿ ಮಾಡಲು ಅನುಮತಿ ನೀಡಿಲ್ಲವೆಂದು ತಿಳಿದುಬಂದಿದೆ.
ಆಹಾರ ವ್ಯವಸ್ಥೆಯನ್ನು ಆಟಗಾರರಿರುವ ಮಹಡಿಗೆ ಹೋಟೆಲ್ ಸಿಬ್ಬಂದಿಯೇ ಮಾಡಿಕೊಡುತ್ತಿದ್ದಾರೆ. ಹೋಟೆಲ್ನ ಹೊಂದಿಕೊಂಡಿರುವ ಮೈದಾನದಲ್ಲಿ ಆಟಗಾರರು ತರಬೇತಿ ನಡೆಸಲಿದ್ದಾರೆ. ಬಿಡುವಿನ ಸಮಯದಲ್ಲಿ ಆಟಗಾರರು ಫಿಫಾ ಆಡುತ್ತಿದ್ದಾರೆಂದು ತಿಳಿದು ಬಂದಿದೆ. ಇನ್ನು ಆಟಗಾರರಿಗೆ ಟೇಬಲ್ ಟೆನ್ನಿಸ್, ಸ್ನೂಕರ್, ಟಾರ್ಡ್ಸ್ ಮತ್ತು ಕೇರಮ್ ಆಡಲು ಅವಕಾಶವಿದೆ ಎಂದು ತಿಳಿದು ಬಂದಿದೆ.
ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವೆ ಮ್ಯಾಂಚೆಸ್ಟರ್ನಲ್ಲಿ ಮೊದಲ ಟೆಸ್ಟ್ ಆಗಸ್ಟ್ 5 ರಂದು ಆರಂಭವಾದರೆ, ಕೊನೆಯ ಎರಡು ಟೆಸ್ಟ್ಗಳು ಸೌತಾಂಪ್ಟನ್ನಲ್ಲಿ ಆಗಸ್ಟ್ 13 ಮತ್ತು ಆಗಸ್ಟ್ 21ರಿಂದ ಆರಂಭವಾಗಲಿದೆ. ಮೂರು ಟಿ20 ಪಂದ್ಯಗಳು ಮ್ಯಾಂಚೆಸ್ಟರ್ನಲ್ಲಿ ಆಗಸ್ಟ್ 28, 30 ಹಾಗೂ ಸೆಪ್ಟೆಂಬರ್ನಲ್ಲಿ ನಡೆಯಲಿದೆ.