ಲಂಡನ್:ಪಾಕಿಸ್ತಾನ ಕ್ರಿಕೆಟ್ ತಂಡ ಇಂಗ್ಲೆಂಡ್ ವಿರುದ್ಧದ ಮೂರು ಟೆಸ್ಟ್ ಹಾಗೂ ಟಿ-20 ಪಂದ್ಯಗಳಲ್ಲಿ ಭಾಗಿಯಾಗಲು ಇಂದು ಲಂಡನ್ಗೆ ಬಂದಿಳಿದಿದೆ. ಇದಕ್ಕೆ ಸಂಬಂಧಿಸಿದಂತೆ ಐಸಿಸಿ ಟ್ವೀಟ್ ಮಾಡಿದ್ದು, ಜುಲೈ 30ರಿಂದ ಆರಂಭಗೊಳ್ಳಲಿರುವ ಕ್ರಿಕೆಟ್ ಸರಣಿಯಲ್ಲಿ ಭಾಗಿಯಾಗಲು ಪಾಕ್ ಇಂಗ್ಲೆಂಡ್ಗೆ ಆಗಮಿಸಿದೆ ಎಂದಿದೆ.
ಸದ್ಯ 14 ದಿನಗಳ ಕಾಲ ಪಾಕ್ ಕ್ರಿಕೆಟ್ ತಂಡ ಕ್ವಾರಂಟೈನ್ಗೊಳಗಾಗಲಿದ್ದು, ಬಳಿಕ ತರಬೇತಿಯಲ್ಲಿ ಭಾಗಿಯಾಗಲಿದೆ ಎಂದು ಪಿಸಿಬಿ ತಿಳಿಸಿದೆ. ಇಂಗ್ಲೆಂಡ್ ವಿರುದ್ಧದ ಕ್ರಿಕೆಟ್ ಸರಣಿಗಾಗಿ ಪಿಸಿಬಿ 29 ಪ್ಲೇಯರ್ಸ್ ತಂಡ ಪ್ರಕಟಗೊಳಿಸಿದೆ. ಆದರೆ ಇದರಲ್ಲಿ 9 ಪ್ಲೇಯರ್ಸ್ಗೆ ಕೊರೊನಾ ಸೋಂಕು ಕಾಣಿಸಿಕೊಂಡ ಕಾರಣ ಕೇವಲ 20 ಪ್ಲೇಯರ್ಸ್ ಹಾಗೂ ಸಹಾಯಕ ಸಿಬ್ಬಂದಿ ತೆರಳಿದ್ದಾರೆ.
ಉಭಯ ತಂಡಗಳ ನಡುವೆ ನಡೆಯುವ ಪಂದ್ಯದ ವೇಳೆ ಯಾವುದೇ ಕ್ರೀಡಾಭಿಮಾನಿಗಳಿಗೆ ಅವಕಾಶ ಇರುವುದಿಲ್ಲ. ಅಜರ್ ಅಲಿ ತಂಡವನ್ನ ಮುನ್ನಡೆಸಲಿದ್ದಾರೆ. ಟಿ-20 ತಂಡಕ್ಕೆ ಬಾಬರ್ ಆಜಂ ಸಾರಥ್ಯ ವಹಿಸಿದ್ದಾರೆ.