ನವದೆಹಲಿ:ಇಂಡಿಯನ್ ಪ್ರೀಮಿಯರ್ ಲೀಗ್ನ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲುವು ಸಾಧಿಸಿದ್ದು, ಈ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಮುಂದುವರೆದಿದೆ.
ಪ್ರತಿಭಾವಂತ, ಯಾವಾಗ್ಲೂ ಪ್ರತಿಭಾವಂತನೇ- ಐಪಿಎಲ್ ಲೋಗೋ ಆತನಿಂದ ಚಿತ್ರೀಕರಿಸಲ್ಪಟ್ಟಿದೆ: ಎಬಿಡಿ ಆಟ ಹೊಗಳಿದ ಸೆಹ್ವಾಗ್! - ಎಬಿಡಿ ಹಾಡಿಹೊಗಳಿದ ಸೆಹ್ವಾಗ್
ಇಂಡಿಯನ್ ಪ್ರೀಮಿಯರ್ ಲೀಗ್ನ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂಧ್ಯದಲ್ಲಿ ಎಬಿ ಡಿವಿಲಿಯರ್ಸ್ ಮತ್ತೊಮ್ಮೆ ಅಬ್ಬರಿಸಿದ್ದು, ತಂಡಕ್ಕೆ ಗೆಲುವು ತಂದಿಟ್ಟಿದ್ದಾರೆ.
ಆರ್ಸಿಬಿ ಗೆಲುವಿಗೆ 11 ಎಸೆತಗಳಲ್ಲಿ 29 ರನ್ಗಳ ಅವಶ್ಯಕತೆ ಇದ್ದ ವೇಳೆ ಸತತ ಮೂರು ಸಿಕ್ಸರ್ ಸಿಡಿಸಿ ತಂಡಕ್ಕೆ ಗೆಲುವಿನ ಜಯ ತಂದಿಟ್ಟಿರುವ ಎಬಿಡಿ ಬಗ್ಗೆ ಇದೀಗ ಟೀಂ ಇಂಡಿಯಾ ಮಾಜಿ ಆಟಗಾರ ವಿರೇಂದ್ರ ಸೆಹ್ವಾಗ್ ಮೆಚ್ಚುಗೆ ಮಾತುಗಳನ್ನಾಡಿ ಟ್ವೀಟ್ ಮಾಡಿದ್ದಾರೆ.
ಆತ ಪ್ರತಿಭಾವಂತನಾಗಿದ್ರೆ, ಯಾವಾಗಲೂ ಪ್ರತಿಭಾವಂತನೇ. ಎಂತಹ ಅದ್ಭುತ ಚೇಸ್, ಐಪಿಎಲ್ ಲೋಗೋ ಅವನಿಂದ ಚಿತ್ರೀಕರಿಸಲ್ಪಟ್ಟಿದೆ. ಇಂಡಿಯನ್ ಪ್ರೀಮಿಯರ್ ಲೀಗ್ನ ಲೋಗೋ ಆತನ ಭಂಗಿಯಂತೆ ಕಾಣಿಸುತ್ತದೆ ಎಂದಿದ್ದಾರೆ. ಇಂದಿನ ಪಂದ್ಯದಲ್ಲಿ ಎಬಿಡಿ ಕೇವಲ 22 ಎಸೆತಗಳಲ್ಲಿ 6 ಸಿಕ್ಸರ್, 1 ಬೌಂಡರಿ ಸೇರಿ ಅಜೇಯ 55 ರನ್ಗಳಿಕೆ ಮಾಡಿದ್ರೆ, ಕೋಲ್ಕತ್ತಾ ವಿರುದ್ಧದ ಪಂದ್ಯದಲ್ಲಿ 33 ಎಸೆತಗಳಲ್ಲಿ ಅಜೇಯ 73ರನ್ಗಳಿಕೆ ಮಾಡಿದ್ರು.