ಕರ್ನಾಟಕ

karnataka

ETV Bharat / sports

ಧೋನಿ ಸ್ಥಾನ ತುಂಬಲು ನನ್ನಿಂದ ಸಾಧ್ಯವಿಲ್ಲ: ಕೆಎಲ್​ ರಾಹುಲ್​ - Kings XI Panjab

ವಿಕೆಟ್​ ಕೀಪರ್​ ಜವಾಬ್ದಾರಿ ಬಗ್ಗೆ ಮಾತನಾಡಿರುವ ರಾಹುಲ್​, ನಾವು ಭಾರತ ತಂಡಕ್ಕಾಗಿ ಸಾಧ್ಯವಾದಷ್ಟು ಹೆಚ್ಚು ಪಂದ್ಯಗಳನ್ನು ಗೆದ್ದುಕೊಡಬೇಕು, ಇದಕ್ಕಾಗಿ ತಂಡದಲ್ಲಿ ಯಾವುದೇ ಜವಾಬ್ದಾರಿ ನಿರ್ವಹಿಸಲು ನಾನು ಸಿದ್ಧನಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ಕೆಎಲ್​ ರಾಹುಲ್​-ಎಂಎಸ್ ಧೋನಿ
ಕೆಎಲ್​ ರಾಹುಲ್​-ಎಂಎಸ್ ಧೋನಿ

By

Published : Sep 3, 2020, 8:53 PM IST

ದುಬೈ: ಭಾರತದ ಯುವ ವಿಕೆಟ್​ ಕೀಪರ್ ಹಾಗೂ ಕಿಂಗ್ಸ್​ ಇಲೆವೆನ್​ ತಂಡದ ನಾಯಕ ಕೆಎಲ್​ ರಾಹುಲ್,​ ತಮ್ಮಿಂದ ಧೋನಿಯ ಸ್ಥಾನ ತುಂಬುವುದು ಅಸಾಧ್ಯ ಎಂದು ಹೇಳಿದ್ದಾರೆ.

2019ರ ವಿಶ್ವಕಪ್​ ಸೆಮಿಫೈನಲ್​ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ಹೊರಗುಳಿದಿದ್ದ ಧೋನಿ ಆಗಸ್ಟ್​ 15ರಂದು ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ. ಇದೀಗ ಧೋನಿ ಸ್ಥಾನ ತುಂಬಲು ಕನ್ನಡಿಗ ಕೆಎಲ್​ ರಾಹುಲ್​, ರಿಷಭ್ ಪಂತ್​ ಹಾಗೂ ಸಂಜು ಸಾಮ್ಸನ್​ ಭಾರಿ ಪೈಪೋಟಿ ನಡೆಸುತ್ತಿದ್ದಾರೆ. ಅಲ್ಲದೆ ವಿಕೆಟ್​ ಕೀಪರ್​ ಹಾಗೂ ನಾಯಕನಾಗಿರುವ ರಾಹುಲ್​ ಭವಿಷ್ಯದ ಧೋನಿ ಆಗುವರೇ ಎಂಬ ಚರ್ಚೆ ಕೂಡ ನಡೆಯುತ್ತಿದೆ.

ಕೆಎಲ್​ ರಾಹುಲ್​

ಆದರೆ ಈ ಕುರಿತು ಪ್ರತಿಕ್ರಿಯಿಸಿರುವ ಅವರು ನಿರೀಕ್ಷೆಗಳು ನನ್ನ ಮೇಲಷ್ಟೇ ಅಲ್ಲ ಪ್ರತಿಯೊಬ್ಬ ಆಟಗಾರನ ಮೇಲೂ ಇರುತ್ತದೆ. ಆದರೆ ಇದರಿಂದ ನನಗೆ ಯಾವುದೇ ಒತ್ತಡವಿಲ್ಲ. ನನ್ನ ಸದ್ಯದ ಗಮನ ಐಪಿಎಲ್​ ಕಡೆಗಿದೆ. ಇನ್ನು ಧೋನಿ ಸ್ಥಾನವನ್ನು ಯಾರಿಂದಲೂ ತುಂಬಲು ಸಾಧ್ಯವಿಲ್ಲ ಎನ್ನುವುದು ನನ್ನ ಭಾವನೆಯಾಗಿದೆ ಎಂದಿದ್ದಾರೆ.

ವಿಕೆಟ್​ ಕೀಪರ್​ ಜವಾಬ್ದಾರಿ ಬಗ್ಗೆ ಮಾತನಾಡಿರುವ ರಾಹುಲ್​, ನಾವು ಭಾರತ ತಂಡಕ್ಕಾಗಿ ಸಾಧ್ಯವಾದಷ್ಟು ಹೆಚ್ಚು ಪಂದ್ಯಗಳನ್ನು ಗೆದ್ದುಕೊಡಬೇಕು, ಇದಕ್ಕಾಗಿ ತಂಡದಲ್ಲಿ ಯಾವುದೇ ಜವಾಬ್ದಾರಿ ನಿರ್ವಹಿಸಲು ನಾನು ಸಿದ್ಧನಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ಮಯಾಂಕ್ ಅಗರ್​ವಾಲ್​, ಕರುಣ್ ನಾಯರ್​, ಕ್ರಿಸ್​ ಗೇಲ್​ ಮತ್ತು ಮ್ಯಾಕ್ಸ್​ವೆಲ್​ ಅಂತಹ ಘಟಾನುಘಟಿ ಆಟಗಾರರನ್ನು ಹೊಂದಿರುವ ಕಿಂಗ್ಸ್​ ಇಲೆವೆನ್​ ಪಂಜಾಬ್​ ತಂಡಕ್ಕೆ ಕೆಎಲ್​ ರಾಹುಲ್​ ನಾಯಕನಾಗಿದ್ದಾರೆ. ಈ ಬಾರಿ ಯುಎಇನಲ್ಲಿ ಟೂರ್ನಿ ನಡೆಯುತ್ತಿರುವುದರಿಂದ ಟೂರ್ನಿಯನ್ನು ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಪಂಜಾಬ್ ಕೂಡ ಒಂದಾಗಿದೆ. ಏಕೆಂದರೆ ಯುಎಇನಲ್ಲಿ ಈ ಹಿಂದೆ ನಡೆದಿರುವ ಪಂದ್ಯಗಳಲ್ಲಿ ಸೋಲರಿಯದ ಏಕೈಕ ತಂಡವೆಂದರೆ ಅದರು ಕಿಂಗ್ಸ್​ ಇಲೆವೆನ್​ ಪಂಜಾಬ್​.

ABOUT THE AUTHOR

...view details