ನವದೆಹಲಿ :2008ರ ಅಂಡರ್ 19 ವಿಶ್ವಕಪ್‌ಗೆ ಇನ್ನೂ ಕೆಲವೇ ದಿನಗಳಿರುವ ಸಂದರ್ಭದಲ್ಲಿ ತನ್ನನ್ನು ನಾಯಕನನ್ನಾಗಿ ನೇಮಿಸಲಾಗಿತ್ತು ಎಂದು ವಿರಾಟ್ ಕೊಹ್ಲಿ ಆ ದಿನಗಳನ್ನ ಸ್ಮರಿಸಿಕೊಂಡಿದ್ದಾರೆ. ಭಾರತ ತಂಡದ ನಾಯಕ ಕೊಹ್ಲಿತಮ್ಮ ಸಹ ಆಟಗಾರ ರವಿಚಂದ್ರನ್ ಜೊತೆ ನಡೆಸಿ ಇನ್ಸ್ಟಾಗ್ರಾಮ್ ಲೈವ್ ಚಾಟ್ ವೇಳೆ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
ಜೊತೆಗೆ ಅವರು ಮುಂದೊಂದು ದಿನ ಟೀಂ ಇಂಡಿಯಾದ ನಾಯಕನಾಗುತ್ತೇನೆಂದು ಕನಸಿನಲ್ಲಿಯೂ ಅಂದುಕೊಂಡಿರಲಿಲ್ವಂತೆ. ಅಂಡರ್-19 ತಂಡದ ನಾಯಕತ್ವದಿಂದ ಭಾರತ ತಂಡದ ನಾಯಕನಾಗಿ ಪರಿವರ್ತನೆಗೊಂಡ ಬಗ್ಗೆ ಕೇಳಿದಾಗ ಕೊಹ್ಲಿ ತಾನು ನಾಯಕನಾಗಿ ಆಯ್ಕೆಯಾಗಿದ್ದ ಕಥೆ ಸ್ಮರಿಸಿಕೊಂಡಿದ್ದಾರೆ.
"ನಾನು ಯಾವಾಗಲೂ ಜವಾಬ್ದಾರಿ ತೆಗೆದುಕೊಳ್ಳುಲು ಇಷ್ಟಪಡುವ ವ್ಯಕ್ತಿಯಾಗಿದ್ದೆ. ಇದೇ ಸಂದರ್ಭದಲ್ಲಿ ಅಂಡರ್-19 ವಿಶ್ವಕಪ್ ಕೂಡ ಸಂಭವಿಸಿತ್ತು. ಆದರೆ, ನಾನು ಅಂಡರ್-19 ವಿಶ್ವಕಪ್ ಪ್ರವಾಸಕ್ಕೆ ತೆರಳುವ ಒಂದು ಗಂಟೆಯವರೆಗೆ ನಾನೇ ಟೀಂ ಇಂಡಿಯಾ ನಾಯಕ ಎಂದು ಹೆಚ್ಚಿನ ಜನರಿಗೆ ತಿಳಿದಿರಲಿಲ್ಲ. ನಾವು ದಕ್ಷಿಣ ಆಫ್ರಿಕಾಗೆ ತೆರಳಿದ ನಂತರ ನಾವು ಗೆದ್ದ ವಿಶ್ವಕಪ್ನ ನಾಯಕತ್ವವನ್ನು ನನಗೆ ನೀಡಲಾಗಿತ್ತು" ಎಂದು ಕೊಹ್ಲಿ ತಿಳಿಸಿದ್ದಾರೆ.