ಮ್ಯಾಂಚೆಸ್ಟರ್:ಯುವ ಬೌಲರ್ ನಸೀಮ್ ಶಾ ಬಗ್ಗೆ ಪಾಕಿಸ್ತಾನದ ಕೋಚ್ ಹಾಗೂ ಆಯ್ಕೆ ಸಮಿತಿ ಮುಖ್ಯಸ್ಥ ಮಿಸ್ಬಾ ಉಲ್ ಹಕ್ ಮೆಚ್ಚುಗೆ ವ್ಯಕ್ತಪಡಿಸಿದ್ದು, ಅವರು ಪಾಕ್ ತಂಡಕ್ಕೆ ತನ್ನ ಬೌಲಿಂಗ್ ಶಕ್ತಿಯಿಂದ ಟೆಸ್ಟ್ ಪಂದ್ಯಗಳನ್ನು ಗೆದ್ದುಕೊಡಬಲ್ಲರು ಎಂದು ಭವಿಷ್ಯ ನುಡಿದಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡುವ ಮೂಲಕ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ವಿಶ್ವದ ಅತಿ ಕಿರಿಯ ವೇಗಿ ಎಂಬ ಶ್ರೇಯಕ್ಕೆ ಇವರು ಪಾತ್ರರಾಗಿದ್ದರು. ಇದೇ ವರ್ಷ ರಾವಲ್ಪಿಂಡಿಯಲ್ಲಿ ನಡೆದ ಬಾಂಗ್ಲಾದೇಶದ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಹ್ಯಾಟ್ರಿಕ್ ಸಾಧಿಸಿದ ಅತ್ಯಂತ ಕಿರಿಯ ಬೌಲರ್ ಎಂಬ ಹೆಗ್ಗಳಿಕೆ ಕೂಡಾ ಇವರದ್ದಾಗಿದೆ.
ವಾಕರ್ ಯೂನಿಸ್ ಮತ್ತು ನಾನು ಅವರನ್ನು(ನಸೀಮ್) ಗಡಾಫಿ ಕ್ರೀಡಾಂಗಣದಲ್ಲಿ ನೋಡಿದಾಗ ನಮ್ಮ ಕಣ್ಣಿಗೆ ಅವರು ಪರಿಪೂರ್ಣ ಬೌಲರ್ ರೀತಿಯಲ್ಲಿ ಕಂಡರು. ಅದಕ್ಕಾಗಿ ಅವರನ್ನು ಪ್ರಥಮ ದರ್ಜೆ ಕ್ರಿಕೆಟ್ ಆಡದಿದ್ದರೂ ಆಸ್ಟ್ರೇಲಿಯಾ ಪ್ರವಾಸಕ್ಕೆ ಆಯ್ಕೆ ಮಾಡಲು ನಿರ್ಧರಿಸಿದ್ದೆವು ಎಂದು ಮಿಸ್ಬಾ ಹೇಳಿದ್ದಾರೆ.