ನವದೆಹಲಿ :ಕ್ರಿಕೆಟ್ ಜಗತ್ತಿನ ಅತಿ ಹೆಚ್ಚು ವಿಕೆಟ್ ಸಾಧನೆ ಮಾಡಿರುವ ಶ್ರೀಲಂಕಾದ ಲೆಜೆಂಡ್ ಮುತ್ತಯ್ಯ ಮುರುಳೀಧರನ್ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಎಸೆತಗಳನ್ನು ಎಸೆದಿರುವ ಬೌಲರ್ ಎಂಬ ಖ್ಯಾತಿಗೆ ಪಾತ್ರವಾಗಿದ್ದಾರೆ.
133 ಪಂದ್ಯಗಳನ್ನಾಡಿರುವ ಮುತ್ತಯ್ಯ ಮುರುಳೀಧರನ್ 230 ಇನ್ನಿಂಗ್ಸ್ಗಳಲ್ಲಿ ಬೌಲಿಂಗ್ ಮಾಡಿದ್ದಾರೆ. ಅವರು ಇಷ್ಟು ಇನ್ನಿಂಗ್ಸ್ಗಳಲ್ಲಿ ಬರೋಬ್ಬರಿ 44,039 ಎಸೆತಗಳನ್ನು ಎಸೆದಿದ್ದಾರೆ. ಇವರು ಇನ್ನಿಂಗ್ಸ್ವೊಂದರಲ್ಲಿ ಸರಾಸರಿ 32 ಓವರ್ ಎಸೆದಿದ್ದಾರೆ.