ಡಬ್ಲಿನ್: ಸ್ಕಾಟ್ಲೆಂಡ್ ತಂಡದ ಆರಂಭಿಕ ಬ್ಯಾಟ್ಸ್ಮನ್ ಜಾರ್ಜ್ ಮುನ್ಸೆ ನೆದರ್ಲ್ಯಾಂಡ್ ವಿರುದ್ಧ 14 ಸಿಕ್ಸರ್ ಸಿಡಿಸುವ ಮೂಲಕ ಆಸ್ಟ್ರೇಲಿಯಾದ ಆ್ಯರೋನ್ ಫಿಂಚ್ ದಾಖಲೆ ಸರಿಗಟ್ಟಿದ್ದಾರೆ.
ಐರ್ಲೆಂಡ್ನಲ್ಲಿ ನಡೆಯುತ್ತಿರುವ ತ್ರಿಕೋನ ಸರಣಿಯಲ್ಲಿ ಸ್ಕಾಟ್ಲೆಂಡ್ ತಂಡ ನೆದರ್ಲ್ಯಾಂಡ್ ವಿರುದ್ಧ ದಾಖಲೆಯ 252 ರನ್ಗಳಿಸಿದೆ. ಈ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದಿದ್ದ ಜಾರ್ಜ್ ಮುನ್ಸೆ(127) ಹಾಗೂ ಕೈಲ್ ಕೋಯಟ್ಜರ್(89) ಮೊದಲ ವಿಕೆಟ್ ಜೊತೆಯಾಟದಲ್ಲಿ 200 ರನ್ಗಳ ದಾಖಲೆಯ ಜೊತೆಯಾಟ ನೀಡಿದರು. ಸ್ಕಾಟ್ಲೆಂಡ್ ಒಟ್ಟಾರೆ 20 ಓವರ್ಗಳಲ್ಲಿ 252 ರನ್ಗಳಿಸಿತು.