ಕರ್ನಾಟಕ

karnataka

ETV Bharat / sports

ಚೆನ್ನೈ-ಮುಂಬೈ ಫೈಟ್​: ಮೊದಲ ಸೋಲಿಗೆ ಸೇಡು ತೀರಿಸಿಕೊಳ್ಳುವ ತವಕದಲ್ಲಿ ರೋಹಿತ್​ ಪಡೆ! - ಮುಂಬೈ ವರ್ಸಸ್​ ಚೆನ್ನೈ

ರೋಹಿತ್​ ಶರ್ಮಾ ಅನಾರೋಗ್ಯದ ಕಾರಣ ಇಂದಿನ ಪಂದ್ಯದಿಂದ ಹೊರಗುಳಿದಿದ್ದು, ಆಲ್​ರೌಂಡರ್​ ಕಿರನ್​ ಪೋಲಾರ್ಡ್​ ತಂಡವನ್ನ ಮುನ್ನಡೆಸಲಿದ್ದಾರೆ.

IPL 2020 News
IPL 2020 News

By

Published : Oct 23, 2020, 7:23 PM IST

ಶಾರ್ಜಾ:ಇಂಡಿಯನ್​ ಪ್ರೀಮಿಯರ್​ ಲೀಗ್​​ನ 41ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಮುಂಬೈ ಇಂಡಿಯನ್ಸ್​ ಹಾಗೂ ಚೆನ್ನೈ ಸೂಪರ್​ ಕಿಂಗ್ಸ್​ ತಂಡಗಳು ಮುಖಾಮುಖಿಯಾಗುತ್ತಿದ್ದು, ಉದ್ಘಾಟನಾ ಪಂದ್ಯದಲ್ಲಿ ಧೋನಿ ಬಳಗದ ವಿರುದ್ಧ ಸೋಲು ಕಂಡಿರುವ ಮುಂಬೈ ಇಂಡಿಯನ್ಸ್​​​ ಇಂದಿನ ಪಂಧ್ಯದಲ್ಲಿ ಗೆದ್ದು ತಿರುಗೇಟು ನೀಡುವ ತವಕದಲ್ಲಿದೆ.

ಇಂದಿನ ಪಂದ್ಯದಲ್ಲಿ ಟಾಸ್​ ಗೆದ್ದು ಮುಂಬೈ ಇಂಡಿಯನ್ಸ್​​ ಬೌಲಿಂಗ್​ ಆಯ್ದುಕೊಂಡಿದೆ. ಅನಾರೋಗ್ಯದ ಕಾರಣ ಕ್ಯಾಪ್ಟನ್​​ ರೋಹಿತ್​ ಶರ್ಮಾ ಕಣಕ್ಕಿಳಿಯುತ್ತಿಲ್ಲವಾದ್ದರಿಂದ ಪೋಲಾರ್ಡ್​ ತಂಡ ಮುನ್ನಡೆಸಲಿದ್ದಾರೆ. ಹಿಟ್​ಮ್ಯಾನ್​ ರೋಹಿತ್​​ ಬದಲಿಗೆ ಸೌರಭ್​ ತಿವಾರಿ ಅವಕಾಶ ಪಡೆದುಕೊಂಡಿದ್ದು, ಡಿಕಾಕ್​ ಜತೆ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ. ಇನ್ನು ಚೆನ್ನೈ ತಂಡದಲ್ಲಿ ಅನೇಕ ಬದಲಾವಣೆ ಮಾಡಲಾಗಿದ್ದು, ಹೊಸ ಮುಖಗಳು ಅವಕಾಶ ಪಡೆದುಕೊಂಡಿವೆ.

ತಂಡಗಳು ಇಂತಿವೆ

ಚೆನ್ನೈ ಸೂಪರ್​ ಕಿಂಗ್ಸ್​​: ಸ್ಯಾಮ್​ ಕರನ್​, ಡುಪ್ಲೆಸಿ, ಅಂಬಾಟಿ ರಾಯುಡು, ಎನ್​. ಜಗದೀಶನ್​, ಎಂ.ಎಸ್​ ಧೋನಿ, ಋತುರಾಜ್​ ಗಾಯ್ಕವಾಡ್​, ಆರ್​. ಜಡೇಜಾ, ದೀಪಕ್​ ಚಹರ್​, ಶಾರ್ದೂಲ್​ ಠಾಕೂರ್​, ಜೋಶ್​ ಹ್ಯಾಜಲ್​ವುಡ್​​ ಹಾಗೂ ಇಮ್ರಾನ್​​ ತಾಹೀರ್​.

ತಂಡದಿಂದ ಕೇದಾರ್​ ಜಾಧವ್​, ಶೇನ್​ ವ್ಯಾಟ್ಸನ್​, ಪಿಯೂಷ್​​ ಚಾವ್ಹಾ ಹೊರಬಿದ್ದಿದ್ದಾರೆ.

ಮುಂಬೈ ಇಂಡಿಯನ್ಸ್​​: ಕ್ವಿಂಟನ್​ ಡಿಕಾಕ್​(ವಿ,ಕೀ), ಸೌರಭ್​ ತಿವಾರಿ, ಸೂರ್ಯಕುಮಾರ್​ ಯಾದವ್​, ಇಶಾನ್​ ಕಿಶನ್​, ಹಾರ್ದಿಕ್​ ಪಾಂಡ್ಯ, ಕಿರನ್​ ಪೋಲಾರ್ಡ್​​(ಕ್ಯಾಪ್ಟನ್​), ಕೃನಾಲ್​ ಪಾಂಡ್ಯ, ನಾಥನ್​ ಕೌಂಟರ್​ ನೇಲ್​, ರಾಹುಲ್​ ಚಹರ್​, ಬೋಲ್ಟ್​, ಜಸ್​ಪ್ರೀತ್​ ಬುಮ್ರಾ

ABOUT THE AUTHOR

...view details