ಕರ್ನಾಟಕ

karnataka

ETV Bharat / sports

ರೈನಾರನ್ನು ಮತ್ತೆ ತಂಡಕ್ಕೇಕೆ ಆಯ್ಕೆ ಮಾಡಲಿಲ್ಲ: ಕಾರಣ ಬಿಚ್ಚಿಟ್ಟ ಎಂಎಸ್​ಕೆ ಪ್ರಸಾದ್​

ರೈನಾ 2018-19ರ ರಣಜಿಯಲ್ಲಿ ಕೇವಲ 243 ರನ್​ಗಳಿಸಿದ್ದರು. ಇನ್ನು ಐಪಿಎಲ್​ನಲ್ಲೂ 17 ಪಂದ್ಯಗಳಿಂದ 383 ರನ್​ಗಳಿಸಿದ್ದರು. ಈ ಕಾರಣದಿಂದ ಅವರು ಮರಳಿ ರಾಷ್ಟ್ರೀಯ ತಂಡದಲ್ಲಿ ಅವಕಾಶಗಿಟ್ಟಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಸುರೇಶ್​ ರೈನಾ
ಸುರೇಶ್​ ರೈನಾ

By

Published : May 6, 2020, 10:22 AM IST

ಲಖನೌ: ಭಾರತ ತಂಡದಲ್ಲಿ ಪವರ್​ ಹಿಟ್ಟರ್​ ಖ್ಯಾತಿಯ ಸುರೇಶ್​ ರೈನಾ ಒಮ್ಮೆ ತಂಡದಿಂದ ಹೊರಬಿದ್ದ ಮೇಲೆ ಮತ್ತೆ ಅವಕಾಶ ಸಿಕ್ಕಿರಲಿಲ್ಲ. ಇದಕ್ಕೆ ಕಾರಣ ಹೇಳಿ ಸರಿಪಡಿಸಿಕೊಳ್ಳುತ್ತೇನೆ ಎಂದು ರೈನಾ ಸಂದರ್ಶನವೊಂದರಲ್ಲಿ ಹೇಳಿದ್ದಕ್ಕೆ, ಆ ಸಂದರ್ಭದಲ್ಲಿ ಆಯ್ಕೆ ಸಮಿತಿ ಮುಖ್ಯಸ್ಥರಾಗಿದ್ದ ಎಂಎಸ್​ಕೆ ಪ್ರಸಾದ್​ ಕಾರಣ ಬಿಚ್ಚಿಟ್ಟಿದ್ದಾರೆ.

ಒಂದು ಕಾಲದಲ್ಲಿ ಗೇಮ್​ ಫಿನಿಶರ್​ ಆಗಿದ್ದ ಅವಕಾಶ ವಂಚಿತರಾಗಿ ತಂಡದಿಂದ ಹೊರಬಿದ್ದ ಮೇಲೆ ದೇಶಿ ಕ್ರಿಕೆಟ್​ನಲ್ಲಿ ಉತ್ತಮ ಪ್ರದರ್ಶನ ನೀಡದಿರುವುದೇ ಅವರ ಆಯ್ಕೆ ಮಾಡದಿರಲು ಕಾರಣ ಎಂದು ಪ್ರಸಾದ್​ ತಿಳಿಸಿದ್ದಾರೆ.

ಎಂಎಸ್​ ಕೆ ಪ್ರಸಾದ್​​

1999ರಲ್ಲಿ ಕಳಪೆ ಪ್ರದರ್ಶನದಿಂದ ವಿವಿಎಸ್‌ ಲಕ್ಷ್ಮಣ್ ಅವರನ್ನು ಭಾರತ ತಂಡದಿಂದ ಕೈಬಿಡಲಾಗಿತ್ತು. ಆದರೆ, ಲಕ್ಷ್ಮಣ್​ ಅವರು ದೇಶಿ ಕ್ರಿಕೆಟ್‌ನ ಋತುವಿನಲ್ಲಿ 1400 ರನ್‌ಗಳನ್ನು ಗಳಿಸುವ ಮೂಲಕ ಮತ್ತೆ ಭಾರತ ತಂಡಕ್ಕೆ ಮರಳಿದರು. ನಾವು ಕೂಡ ಅನುಭವಿ ರೈನಾರಿಂದ ಇಂತಹ ಪ್ರದರ್ಶನವನ್ನೇ ಎದುರು ನೋಡಿದೆವು. ಆದರೆ, ರೈನಾರಿಂದ ಅಂತಹ ಪ್ರದರ್ಶನ ಹೊರಬರಲಿಲ್ಲ ಎಂದು ಪ್ರಸಾದ್​ ಹೇಳಿದ್ದಾರೆ.

ರೈನಾ 2018-19ರ ರಣಜಿಯಲ್ಲಿ ಕೇವಲ 243 ರನ್​ಗಳಿಸಿದ್ದರು. ಇನ್ನು ಐಪಿಎಲ್​ನಲ್ಲೂ 17 ಪಂದ್ಯಗಳಿಂದ 383 ರನ್​ಗಳಿಸಿದ್ದರು. ಈ ಕಾರಣದಿಂದ ಅವರು ಮರಳಿ ರಾಷ್ಟ್ರೀಯ ತಂಡದಲ್ಲಿ ಅವಕಾಶಗಿಟ್ಟಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ರೈನಾ , ಆಯ್ಕೆ ಸಮಿತಿ ಹಿರಿಯ ಆಟಗಾರರ ಬಗ್ಗೆ ಜವಾಬ್ದಾರಿಯುತವಾಗಿ ಗಮನ ಹರಿಸಬೇಕು. ನನ್ನಲ್ಲಿ ಏನಾದರೂ ಕೊರತೆ ಇದ್ದರೆ ಹೇಳಿ. ಕಠಿಣ ಪರಿಶ್ರಮಪಟ್ಟು ತಿದ್ದಿಕೊಳ್ಳುತ್ತೇನೆ ಎಂದು ಹೇಳಿದ್ದರು.

ರೈನಾ ಭಾರತದ ಪರ 226 ಏಕದಿ ಪಂದ್ಯಗಳಿಂದ 5,615 ರನ್​, 78 ಟಿ-20 ಪಂದ್ಯಗಳಿಂದ 1604 ರನ್​ ಹಾಗೂ 18 ಟೆಸ್ಟ್​ ಪಂದ್ಯಗಳಿಂದ 768 ರನ್​ಗಳಿಸಿದ್ದರು.

ABOUT THE AUTHOR

...view details