ಕರ್ನಾಟಕ

karnataka

ETV Bharat / sports

ಕ್ರಿಕೆಟ್​ ಇತಿಹಾಸವಿಲ್ಲದ ಜಾಗದಿಂದ ಬಂದು ಸಾಧನೆ ಮಾಡಬೇಕು ಎನ್ನುವವರಿಗೆ ಧೋನಿ ಸ್ಪೂರ್ತಿ

ಒಂದು ಕಾಲದಲ್ಲಿ ದೊಡ್ಡ ದೊಡ್ಡ ನಗರಗಳಿಂದ ಬಂದ ಕ್ರಿಕೆಟಿಗರೇ ಹೆಚ್ಚು ಭಾರತ ತಂಡದಲ್ಲಿ ಆಡುತ್ತಿದ್ದರು. ಆದರೆ, ಕ್ರಿಕೆಟಿಗನಾಗಲು ಪ್ರತಿಭೆ ಇದ್ದರೆ ಸಾಕು, ಕ್ರಿಕೆಟ್​ ಇತಿಹಾಸದ ಅವಶ್ಯಕತೆಯಿಲ್ಲ ಎಂದು ಇಡೀ ಜಗತ್ತಿಗೆ ತೋರಿಸಿಕೊಟ್ಟವರು ಎಂಎಸ್ ಧೋನಿ ಎನ್ನುವುದರಲ್ಲಿ ಎರಡು ಮಾತಿಲ್ಲ.

ಸಂಜು ಸಾಮ್ಸನ್- ಎ.ಎಸ್​ ಧೋನಿ
ಸಂಜು ಸಾಮ್ಸನ್- ಎ.ಎಸ್​ ಧೋನಿ

By

Published : Aug 25, 2020, 4:21 PM IST

ನವದೆಹಲಿ: ರಾಂಚಿಯಂತಹ ಸಣ್ಣ ಪಟ್ಟಣದಿಂದ ಬಂದ ಧೋನಿ ಇಡೀ ಕ್ರಿಕೆಟ್​ ಜಗತ್ತಿನಲ್ಲೇ ಅದ್ಭುತ ನಾಯಕ, ವಿಕೆಟ್​ ಕೀಪರ್​ ಆಗಿ ಮೆರೆದಿದ್ದಾರೆ. ಕ್ರಿಕೆಟ್​ನಲ್ಲಿ ಸಾಧನೆ ಮಾಡಬೇಕು ಎಂದು ಬಯಸುವ ಸಣ್ಣಪುಟ್ಟ ಪಟ್ಟಣಗಳ ಲಕ್ಷಾಂತರ ಯುವಕರಿಗೆ ಧೋನಿ ಸ್ಪೂರ್ತಿಯಾಗಿದ್ದಾರೆ. ಇದೊಂದು ವಿಚಾರ ನನಗೆ ಧೋನಿ ಇಷ್ಟವಾಗಲು ಕಾರಣ ಎಂದು ಭಾರತ ತಂಡದ ಯುವ ವಿಕೆಟ್​ ಕೀಪರ್​ ಬ್ಯಾಟ್ಸ್​ಮನ್​ ಸಂಜು ಸಾಮ್ಸನ್​ ಹೇಳಿಕೊಂಡಿದ್ದಾರೆ.

ಒಂದು ಕಾಲದಲ್ಲಿ ಮಹಾ ನಗರಗಳಿಂದ ಬಂದ ಕ್ರಿಕೆಟಿಗರೇ ಹೆಚ್ಚು ಭಾರತ ತಂಡದಲ್ಲಿ ಆಡುತ್ತಿದ್ದರು. ಆದರೆ ಕ್ರಿಕೆಟಿನಾಗಲು ಪ್ರತಿಭೆ ಇದ್ದರೆ ಸಾಕು, ಕ್ರಿಕೆಟ್​ ಇತಿಹಾಸದ ಅವಶ್ಯಕತೆಯಿಲ್ಲ ಎಂದು ಇಡೀ ಜಗತ್ತಿಗೆ ತೋರಿಸಿಕೊಟ್ಟವರು ಎಂಎಸ್ ಧೋನಿ ಎನ್ನುವುದರಲ್ಲಿ ಎರಡು ಮಾತಿಲ್ಲ.

ಭಾರತ ತಂಡದ ಭವಿಷ್ಯದ ವಿಕೆಟ್​ ಕೀಪರ್​ ಸ್ಥಾನಕ್ಕೆ ಪೈಪೋಟಿಯಲ್ಲಿರುವ ಸಂಜು ಸಾಮ್ಸನ್​ ಧೋನಿ ತಮ್ಮ ಜೀವನದಲ್ಲಿ ಹೇಗೆ ಪ್ರಭಾವ ಬೀರಿದ್ದಾರೆ ಎನ್ನುವುದನ್ನು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಸಂಜು ಸಾಮ್ಸನ್​

ಹೌದು, ಧೋನಿ ಭಾಯ್​ ನನ್ನಂತಹವರಿಗೆ ಅವರ ಬಾಂಗ್ಲಾದೇಶದ ವಿರುದ್ಧ ಮೊದಲ ಪಂದ್ಯ ಆಡಿದ ದಿನದಿಂದ ಹಾಗೂ ಪಾಕಿಸ್ತಾನದ ವಿರುದ್ಧ ಪ್ರಸಿದ್ಧ ಶತಕದ ಬಾರಿಸಿದ ದಿನದಿಂದಲೇ ಸ್ಪೂರ್ತಿಯಾಗಿದ್ದಾರೆ ಎಂದು ಗಲ್ಫ್​ ನ್ಯೂಸ್​ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಅವರು ಕ್ರಿಕೆಟ್​ ಇತಿಹಾಸವೇ ಇಲ್ಲದ ರಾಂಚಿಯಿಂದ ಬಂದವರಾದರೂ, ಅವರ ಸ್ವತಃ ತಮ್ಮಲ್ಲಿದ್ದ ಒಬ್ಬ ಅದ್ಭುತ ಕ್ರಿಕೆಟಿಗನನ್ನು ಹುಟ್ಟುಹಾಕುವಲ್ಲಿ ಯಶಸ್ವಿಯಾದರು. ಅಲ್ಲದೇ ವಿಶ್ವದ ಅತ್ಯುತ್ತಮ ಫಿನಿಶರ್​ ಎಂದು ಕರೆಸಿಕೊಂಡಿದ್ದಾರೆ. ಇದೇ ಕಾರಣದಿಂದ ನನಗೆ ಧೋನಿ ಸ್ಪೂರ್ತಿಯಾಗಿದ್ದಾರೆ. ಏಕೆಂದರೆ ನಾನು ಕೂಡ ಕ್ರಿಕೆಟ್​ ಇತಿಹಾಸವಿಲ್ಲದ ಕೇರಳದಂತಹ ಪ್ರದೇಶದಿಂದ ಬಂದಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ಸಂಜು ಸಾಮ್ಸನ್​ ಸದ್ಯ ಭಾರತ ಸೀಮಿತ ಓವರ್​ಗಳ ವಿಕೆಟ್​ ಕೀಪರ್​ ಸ್ಥಾನಕ್ಕೆ ರಿಷಭ್ ಪಂತ್ ಹಾಗೂ ಕನ್ನಡಿಗೆ ಕೆಎಲ್​ ರಾಹುಲ್​ ಅವರ ಪ್ರತಿಸ್ಪರ್ಧಿಯಾಗಿದ್ದಾರೆ. ಇವರಿಗೆ ಹೆಚ್ಚಿನ ಅವಕಾಶಗಳೇನು ಸಿಕ್ಕದಿದ್ದರೂ, ಸಿಕ್ಕಂತಹ ಒಂದರೆಡು ಅವಕಾಶಗಳಲ್ಲಿ ಉತ್ತಮ ಪ್ರದರ್ಶನ ತೋರಲು ವಿಫಲರಾಗಿದ್ದಾರೆ. ಆದರೂ ಹಲವಾರು ಕ್ರಿಕೆಟ್​ ದಿಗ್ಗಜರು ಈತನಿಗೆ ಹೆಚ್ಚಿನ ಅವಕಾಶ ಕೊಡಬೇಕು ಎಂದು ಬಿಸಿಸಿಐಗೆ ಒತ್ತಾಯಿಸಿದ್ದಾರೆ. ಈ ಬಾರಿಯ ಐಪಿಎಲ್​ನಲ್ಲಿ ಸಾಮ್ಸನ್​ ಉತ್ತಮ ಪ್ರದರ್ಶನ ತೋರಿದರೆ ಖಂಡಿತ ಮುಂದಿನ ಟಿ-20 ವಿಶ್ವಕಪ್​ಗೆ ಅರ್ಹತೆ ಪಡೆಯಲಿದ್ದಾರೆ.

ABOUT THE AUTHOR

...view details