ಕರ್ನಾಟಕ

karnataka

ETV Bharat / sports

ಟೀಕೆ ಮಾಡೋರಿಗೆ ಬ್ಯಾಟ್​​ನಿಂದ ಉತ್ತರಿಸಿದ ಧೋನಿ... ಮ್ಯಾಚ್​ ಫಿನಿಷರ್​ ಈಸ್​ ಬ್ಯಾಕ್​! - ಟೀಕಾಕಾರರು

ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ನಿಧಾನಗತಿ ಬ್ಯಾಟಿಂಗ್​​ ಮಾಡಿ ಎಲ್ಲರ ಟೀಕೆಗೆ ಗುರಿಯಾಗಿದ್ದ ಎಂಎಸ್​ ಧೋನಿ, ಕೆರಿಬಿಯನ್​ ವಿರುದ್ಧದ ಪಂದ್ಯದಲ್ಲಿ ಕಮ್​ಬ್ಯಾಕ್​ ಮಾಡಿದ್ದಾರೆ. ಈ ಮೂಲಕ ಟೀಕಾಕಾರರಿಗೆ ಬ್ಯಾಟ್​ ಮೂಲಕ ಉತ್ತರ ನೀಡಿದ್ದಾರೆ.

ಎಂಎಸ್​ ಧೋನಿ

By

Published : Jun 28, 2019, 2:19 AM IST

Updated : Jun 28, 2019, 1:29 PM IST

ಮ್ಯಾಂಚೆಸ್ಟರ್​​:ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ನಿಧಾನಗತಿ ಬ್ಯಾಟಿಂಗ್​ ಪ್ರದರ್ಶನ ನೀಡಿ ವ್ಯಾಪಕ ಟೀಕೆ ಎದುರಿಸಿದ್ದ ಮ್ಯಾಚ್​ ಫಿನಿಷರ್​​ ಧೋನಿ ಇದೀಗ ಬ್ಯಾಟ್​​ನಿಂದಲೇ ಉತ್ತರ ನೀಡುವ ಮೂಲಕ ತಿರುಗೇಟು ನೀಡಿದ್ದಾರೆ.

ವಿಶ್ವಕಪ್​​ನಲ್ಲಿ ದುರ್ಬಲ ಅಫ್ಘಾನಿಸ್ತಾನದ ವಿರುದ್ಧ ಬರೋಬ್ಬರಿ 52 ಎಸೆತಗಳಲ್ಲಿ 28ರನ್​ಗಳಿಕೆ ಮಾಡಿದ್ದ ಧೋನಿ ಕ್ರೀಡಾಭಿಮಾನಿಗಳಿಂದ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದರು. ಇದಕ್ಕೆ ಕ್ರಿಕೆಟ್​ ದೇವರು ಸಚಿನ್​ ತೆಂಡೂಲ್ಕರ್​ ಸಹ ಬೇಸರ ವ್ಯಕ್ತಪಡಿಸಿದ್ದರು. ಆದರೆ ನಿನ್ನೆ ವೆಸ್ಟ್​ ಇಂಡೀಸ್​ ವಿರುದ್ಧದ ಪಂದ್ಯದಲ್ಲಿ ಕ್ರೀಸ್​​ನಲ್ಲಿ ಗಟ್ಟಿಯಾಗಿ ನಿಂತು ಅದ್ಭುತ ಬ್ಯಾಟಿಂಗ್​ ಪ್ರದರ್ಶನ ನೀಡಿ ಅವರಿಗೆ ಉತ್ತರಿಸಿದ್ದಾರೆ. 61 ಎಸೆತಗಳಲ್ಲಿ ಎರಡು ಭರ್ಜರಿ ಸಿಕ್ಸರ್​ ಹಾಗೂ ಮೂರು ಬೌಂಡರಿ ಸೇರಿ ಅಜೇಯ 56ರನ್​ಗಳಿಕೆ ಮಾಡಿದರು. ಇದರೊಂದಿಗೆ ಟೀಕೆ ಮಾಡುವವರಿಗೆ ಬ್ಯಾಟ್​ ಮೂಲಕವೇ ಉತ್ತರ ನೀಡಿದ್ದಾರೆ.

ಎಂಎಸ್​ ಧೋನಿ

ಆರಂಭದಿಂದಲೂ ನಿಧಾನಗತಿ ಬ್ಯಾಟಿಂಗ್​ ಪ್ರದರ್ಶನ ನೀಡಿದ ಧೋನಿ 45 ಎಸೆತಗಳಲ್ಲಿ 26ರನ್​ಗಳಿಕೆ ಮಾಡಿದ್ದರು. ತದನಂತರದ 30ರನ್​ಗಳನ್ನ ಕೇವಲ 16 ಎಸೆತಗಳಲ್ಲಿ ಗಳಿಕೆ ಮಾಡಿದ್ದು ವಿಶೇಷವಾಗಿತ್ತು. ಈ ವೇಳೆ ಎರಡು ಭರ್ಜರಿ ಸಿಕ್ಸರ್​ ಸಹ ಸಿಡಿಸಿದ್ದಾರೆ. ಇನ್ನು ಧೋನಿ ಅವರನ್ನ ಸುಲಭವಾಗಿ ಸ್ಟಂಪ್​ ಮಾಡುವ ಅವಕಾಶ ಪಡೆದುಕೊಂಡಿದ್ದರೂ ವೆಸ್ಟ್​ ಇಂಡೀಸ್​ ಮಿಸ್​ ಮಾಡಿದ್ದು ತಂಡಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿತು.

Last Updated : Jun 28, 2019, 1:29 PM IST

ABOUT THE AUTHOR

...view details