ನವದೆಹಲಿ:ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ನಲ್ಲಿ ಬಳಕೆ ಮಾಡುತ್ತಿರುವ ಜರ್ಸಿ ನಂ.7 ಅನ್ನು ಇನ್ನು ಮಂದೆ ಬೇರೆ ಆಟಗಾರರು ಬಳಸುವಂತಿಲ್ಲ. ಈ ಬಗ್ಗೆ ಬಿಸಿಸಿಐ ನಿರ್ಧಾರ ತೆಗೆದುಕೊಂಡಿದ್ದು ವಿಶೇಷವಾಗಿದೆ.
2014ರಲ್ಲೇ ಧೋನಿ ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತಿ ಪಡೆದುಕೊಂಡಿದ್ದು, ಇದೀಗ ಟೆಸ್ಟ್ ಚಾಂಪಿಯನ್ಶಿಫ್ ಆರಂಭಗೊಳ್ಳುತ್ತಿರುವ ಕಾರಣ, ಅವರು ಬಳಕೆ ಮಾಡುತ್ತಿರುವ ಜರ್ಸಿ ಯಾವುದೇ ಕಾರಣಕ್ಕೂ ಇತರ ಆಟಗಾರರು ಬಳಕೆ ಮಾಡುವುದನ್ನು ನಿರ್ಬಂಧಿಸಲಾಗಿದೆ.