ಕರ್ನಾಟಕ

karnataka

ETV Bharat / sports

ರಾಷ್ಟ್ರಗೀತೆ ಹಾಡುವ ವೇಳೆ ಭಾವುಕರಾಗಿದ್ದಕ್ಕೆ ಕಾರಣ ತಿಳಿಸಿದ ಸಿರಾಜ್​ - ಭಾರತ vs ಆಸ್ಟ್ರೇಲಿಯಾ ಲೈವ್​ ಸ್ಕೋರ್​

3ನೆ ಟೆಸ್ಟ್​ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್​, ಟೆಸ್ಟ್​ ಕ್ರಿಕೆಟ್​ಗೆ ಮರಳಿರುವ ಆಸ್ಟ್ರೇಲಿಯಾದ ಸ್ಟಾರ್​ ಬ್ಯಾಟ್ಸ್​ಮನ್​ ಡೇವಿಡ್​ ವಾರ್ನರ್​ ವಿಕೆಟ್​ ಪಡೆದಿದ್ದರು.

ಮೊಹಮ್ಮದ್ ಸಿರಾಜ್​
ಮೊಹಮ್ಮದ್ ಸಿರಾಜ್​

By

Published : Jan 7, 2021, 4:38 PM IST

ಸಿಡ್ನಿ: ಭಾರತ ತಂಡದ ವೇಗಿ ಮೊಹಮ್ಮದ್​ ಸಿರಾಜ್​ ಸಿಡ್ನಿ ಟೆಸ್ಟ್​ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ಹಾಡುವ ವೇಳೆ ಭಾವುಕರಾಗಿದ್ದಕ್ಕೆ ಪಂದ್ಯದ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಕಾರಣ ತಿಳಿಸಿದ್ದಾರೆ.

ನನ್ನ ತಂದೆ ನಾನು ಭಾರತಕ್ಕಾಗಿ ಆಡುವುದನ್ನು ನೋಡಲು ಬಯಸಿದ್ದರು. ಅವರು ಈ ದಿನ ಇಲ್ಲಿ ಇರಬೇಕಿತ್ತು ಎಂದು ಭಾವಿಸಿಕೊಂಡೆ. ಹಾಗಾಗಿ ರಾಷ್ಟ್ರಗೀತೆ ವೇಳೆ ನಾನು ಭಾವುಕನಾದೆ ಎಂದು ಸಿರಾಜ್​ ತಿಳಿಸಿದ್ದಾರೆ. ಈ ವಿಡಿಯೋವನ್ನು ಬಿಸಿಸಿಐ ತನ್ನ ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿದೆ.

ಸಿರಾಜ್ ತಂದೆ ಮೊಹಮ್ಮದ್ ಘೌಸ್​ ಶ್ವಾಸಕೋಶ ಸಂಬಂಧಿ ಕಾಯಿಲೆಯಿಂದ ಬಳಲಿ ನವೆಂಬರ್​ 20ರಂದು ನಿಧನರಾಗಿದ್ದರು. ಆದರೆ ರಾಷ್ಟ್ರೀಯ ತಂಡದ ಕರ್ತವ್ಯದಲ್ಲಿರುವ ಸಿರಾಜ್​ ಭಾರತಕ್ಕೆ ಮರಳಿರಲಿಲ್ಲ. ನಂತರ ಬಾಕ್ಸಿಂಗ್​ ಡೇ ಟೆಸ್ಟ್​ ವೇಳೆ ಟೀಮ್​ ಇಂಡಿಯಾ ಪರ ಪಾದಾರ್ಪಣೆ ಮಾಡಿ ವಿಕೆಟ್​ ಕೂಡ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಇದನ್ನು ಓದಿ:ಅಶ್ವಿನ್​ರನ್ನು ಒತ್ತಡಕ್ಕೆ ಒಳಗಾಗುವಂತೆ ಮಾಡಲು ಎದುರು ನೋಡುತ್ತಿದ್ದೇನೆ: ಸ್ಟೀವ್ ಸ್ಮಿತ್​

ABOUT THE AUTHOR

...view details