ನವದೆಹಲಿ:ಇಂಡಿಯನ್ ಪ್ರೀಮಿಯರ್ ಲೀಗ್ ವಿಶ್ವದ ಎಲ್ಲಾ ಟಿ-20 ಟೂರ್ನಮೆಂಟ್ಗಳಿಗೆ ಶಿಖರವಿದ್ದಂತೆ ಎಂದು ನ್ಯೂಜಿಲ್ಯಾಂಡ್ ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್ ಅಭಿಪ್ರಾಯಪಟ್ಟಿದ್ದಾರೆ.
ಸ್ಯಾಂಟ್ನರ್ ಅವರನ್ನು 2018ರ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಖರೀದಿಸಿತ್ತು. ಆದರೆ ಗಾಯದ ಸಮಸ್ಯೆಯಿಂದ ಅವರು ಆ ವರ್ಷ ಆಡಲಿಲ್ಲ. 2019ರಲ್ಲಿ ಕೆಲವು ಪಂದ್ಯಗಳನ್ನು ಆಡಿದರು. ಅದರಲ್ಲೂ ರಾಜಸ್ಥಾನ ರಾಯಲ್ಸ್ ವಿರುದ್ಧ ಕೊನೆಯ ಬಾಲ್ನಲ್ಲಿ ಸಿಕ್ಸರ್ ಬಾರಿಸಿ ಗೆಲ್ಲಿಸುವಲ್ಲಿ ಯಶಸ್ವಿಯಾಗಿದ್ದರು.
ನನ್ನ ಪ್ರಕಾರ ಐಪಿಲ್ ವಿಶ್ವದ ಎಲ್ಲಾ ಟಿ-20 ಲೀಗ್ಗಳ ಶಿಖರವೆನಿಸಿದೆ. 2008ರಲ್ಲಿ ಚೆನ್ನೈ ತಂಡಕ್ಕೆ ಆಯ್ಕೆಯಾಗಿದ್ದಾಗ ನಾನು ಬಹಳ ಉತ್ಸುಕನಾಗಿದ್ದೆ. ಚೆನ್ನೈ ತಂಡದಲ್ಲಿ ವಿಶ್ವದರ್ಜೆಯ ಸ್ಪಿನ್ನರ್‌ಗಳಿದ್ದರು. ನಾನು ಹೆಚ್ಚು ವೀಕ್ಷಣೆ ಮಾಡಿರುವಂತಹ ಹರ್ಭಜನ್ ಸಿಂಗ್ ಸೇರಿದಂತೆ ಇಮ್ರಾನ್ ತಾಹಿರ್, ರವೀಂದ್ರ ಜಡೇಜಾರಂತಹ ಮಹಾನ್ ಆಟಗಾರರ ಜೊತೆಗೆ ಬೌಲಿಂಗ್ ವಿಭಾಗ ಸೇರಿದ್ದು ಅತ್ಯುತ್ತಮ ಅನುಭವ ಎಂದಿದ್ದಾರೆ.
2018ರಲ್ಲಿ ನಾನು ಗಾಯಗೊಂಡು ಆಡದಿದ್ದಕ್ಕೆ ತುಂಬಾ ಬೇಸರವಾಗಿತ್ತು. ಆದರೆ ಕಳೆದ ವರ್ಷ ನನಗೆ ಆಡುವ ಅವಕಾಶ ಸಿಕ್ಕಿತು. ಅದೊಂದು ಮರೆಯಲಾಗದ ಅನುಭವ ನೀಡಿದೆ. ಇದೊಂದು ನಂಬಲಸಾಧ್ಯವಾದ ಟೂರ್ನಮೆಂಟ್. ಹಾಗಾಗಿ ವಿಶ್ವದಲ್ಲಿ ನಡೆಯುತ್ತಿರುವ ಟಿ-20 ಕ್ರಿಕೆಟ್ ಲೀಗ್ಗಳಲ್ಲಿ ಇದು ಅತ್ಯುತ್ತಮ ಲೀಗ್ ಎಂದಿದ್ದಾರೆ.
ಎಂ.ಎಸ್.ಧೋನಿ ನಾಯಕತ್ವದಲ್ಲಿ ಟಿ-20 ಲೀಗ್ನಲ್ಲಿ ಆಡಿದ್ದರಿಂದ ನನು ಸಾಕಷ್ಟು ಅನುಭವ ಪಡೆದುಕೊಂಡಿದ್ದೇನೆ. ಜೊತೆಗೆ ಸುರೇಶ್ ರೈನಾ ಅವರಂತಹ ಆಟಗಾರರ ಜೊತೆಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡಿದ್ದು ಅದ್ಭುತವಾಗಿತ್ತು ಎಂದು ಅವರು ಹೇಳಿದ್ದಾರೆ.