ಕರ್ನಾಟಕ

karnataka

ETV Bharat / sports

ಕರ್ನಾಟಕ ತಂಡಕ್ಕೆ ಆನೆ ಬಲ: ಮನೀಶ್ ಪಾಂಡೆ, ಗೌತಮ್ ಕಮ್​ಬ್ಯಾಕ್​ - ಕರ್ನಾಟಕ ಕ್ರಿಕೆಕ್ ಸಂಸ್ಥೆ

ಕೆಎಸ್​ಸಿಎ ಖಜಾಂಚಿ ವಿನಯ್​ ಮೃತ್ಯುಂಜಯ ಮನೀಶ್ ಪಾಂಡೆ ಮತ್ತು ಕೃಷ್ಣಪ್ಪ ಗೌತಮ್​ ನಾಕೌಟ್​ ಪಂದ್ಯಗಳಿಗೆ ಲಭ್ಯರಿರುವ ಮಾಹಿತಿಯನ್ನು ಖಚಿತಪಡಿಸಿದ್ದಾರೆ.

ವಿಜಯ್ ಹಜಾರೆ ಟ್ರೋಫಿ
ಮನೀಶ್ ಪಾಂಡೆ, ಗೌತಮ್ ಕಮ್​ಬ್ಯಾಕ್​

By

Published : Mar 1, 2021, 11:02 PM IST

ಬೆಂಗಳೂರು:ಪ್ರಸ್ತುತ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿಯಲ್ಲಿ ಕ್ವಾರ್ಟರ್​ ಪೈನಲ್ ಪ್ರವೇಶಿಸಿರುವ ಕರ್ನಾಟಕ ತಂಡಕ್ಕೆ ಭಾರಿ ಬಲ ಬಂದಿದೆ. ಗಾಯದಿಂದ ಚೇತರಿಸಿಕೊಂಡಿರುವ ಮನೀಶ್ ಪಾಂಡೆ ಮತ್ತು ಟೆಸ್ಟ್​ ಸರಣಿಯಲ್ಲಿ ನೆಟ್​ ಬೌಲರ್​ ಆಗಿದ್ದ ಕೆ. ಗೌತಮ್​ ತಂಡಕ್ಕೆ ಮರಳಿದ್ದಾರೆ.

ಕೆಎಸ್​ಸಿಎ ಖಜಾಂಚಿ ವಿನಯ್​ ಮೃತ್ಯುಂಜಯ ಮನೀಶ್ ಪಾಂಡೆ ಮತ್ತು ಕೃಷ್ಣಪ್ಪ ಗೌತಮ್​ ನಾಕೌಟ್​ ಪಂದ್ಯಗಳಿಗೆ ಲಭ್ಯರಿರುವ ಮಾಹಿತಿಯನ್ನು ಖಚಿತಪಡಿಸಿದ್ದಾರೆ.

ಬಿಸಿಸಿಐ ವಿಜಯ ಹಜಾರೆ ಟ್ರೋಫಿಯ ನಾಕೌಟ್​ ಪಂದ್ಯಗಳಿಗಾಗಿ ಕೆ. ಗೌತಮ್​ರನ್ನು ಬಿಡುಗಡೆ ಮಾಡಿದೆ. ಜೊತೆಗೆ ಮನೀಶ್​ ಪಾಂಡೆ ಫಿಟ್​ ಇರುವುದಾಗಿ ಘೋಷಿಸಿದ್ದಾರೆ. ಹಾಗಿ ಆಯ್ಕೆಗಾರರು ಮನೀಶ್ ಪಾಂಡೆಯನ್ನು ನಿಶ್ಚಲ್ ಡಿ ಜಾಗಕ್ಕೆ ಮತ್ತು ಕೆ.ಗೌತಮ್​ರನ್ನು ಶುಬಾಂಗ್​ ಹೆಗ್ಡೆ ಜಾಗಕ್ಕೆ ಆಯ್ಕೆ ಮಾಡಲಾಗಿದೆ ಎಂದು ವಿನಯ್​ ತಿಳಿಸಿದ್ದಾರೆ.

ಲೀಗ್​ನ 5 ಪಂದ್ಯಗಳಲ್ಲಿ 4ರಲ್ಲಿ ಜಯಿಸಿರುವ ಕರ್ನಾಟಕ ತಂಡ ಸಿ ಗುಂಪಿನಲ್ಲಿ ಅಗ್ರಸ್ಥಾನಿಯಾಗಿ ಕ್ವಾರ್ಟರ್​ ಫೈನಲ್ ಪ್ರವೇಶಿಸಿದೆ. ಈಗಾಗಲೆ ಆರಂಭಿಕರಾದ ದೇವದತ್​ ಪಡಿಕ್ಕಲ್, ರವಿಕುಮಾರ್ ಸಮರ್ಥ್​ ಅದ್ಭುತ ಫಾರ್ಮ್​ನಲ್ಲಿದ್ದಾರೆ. ಇದೀಗ ಮನೀಶ್ ಪಾಂಡೆ ಬ್ಯಾಟಿಂಗ್​ ಬಲವನ್ನು ಹೆಚ್ಚಿಸಿದರೆ, ಗೌತಮ್ ಬೌಲಿಂಗ್ ಜೊತೆಗೆ ಬ್ಯಾಟಿಂಗ್​​ ಕೂಡ ನಡೆಸಬಲ್ಲವರಾಗಿರುವುದರಿಂದ ಹಾಲಿ ಚಾಂಪಿಯನ್ ಕರ್ನಾಟಕ ತಂಡ ಮತ್ತೆ ವಿಜಯ್ ಹಜಾರೆ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಳ್ಳುವ ಅದ್ಭುತ ಅವಕಾಶ ದೊರೆತಿದೆ.

ಇದನ್ನು ಓದಿ:ಕೊಹ್ಲಿ 'ಮಾಡರ್ನ್​ ಡೇ ಹೀರೋ': ಆಸೀಸ್ ಲೆಜೆಂಡ್ ಸ್ಟೀವ್ ವಾ ಪ್ರಶಂಸೆ

ABOUT THE AUTHOR

...view details