ಕರ್ನಾಟಕ

karnataka

ETV Bharat / sports

ವಿಶ್ವಕಪ್​ನಲ್ಲಿ ಭಾರತ ಜಯಶಾಲಿ: ಕಳೆದ 7 ತಿಂಗಳ ಕರಾಳ ಸಮಯ ಬಿಚ್ಚಿಟ್ಟ ಹಾರ್ದಿಕ್​ ಪಾಂಡ್ಯ!

ಖಾಸಗಿ ಚಾನಲ್​ವೊಂದರಲ್ಲಿ ಭಾಗಿಯಾದ ಬಳಿಕ ನಾನು ಹೇಳಿದ ಹೇಳಿಕೆ ತುಂಬಾ ವಿವಾದಕ್ಕೊಳಗಾಗಿತ್ತು. ಇದಾದ ಬಳಿಕ ನಾನು ಕಠಿಣ ಪರಿಸ್ಥಿತಿಗೆ ಒಳಗಾಗಿದ್ದೆ ಎಂದು ಹಾರ್ದಿಕ್​ ಹೇಳಿದ್ದಾರೆ.

ಹಾರ್ದಿಕ್​​ ಪಾಂಡ್ಯ

By

Published : Apr 4, 2019, 7:54 PM IST

ಮುಂಬೈ: ಖಾಸಗಿ ಚಾನಲ್​ವೊಂದರಲ್ಲಿ ಮಹಿಳೆಯರ ಕುರಿತು ವಿವಾದಿತ ಹೇಳಿಕೆ ನೀಡಿ ಸಂಕಷ್ಟಕ್ಕೊಳಗಾಗಿದ್ದ ಆಲ್​ರೌಂಡರ್ ಹಾರ್ದಿಕ್​ ಪಾಂಡ್ಯ ಇದೀಗ ಐಪಿಎಲ್​ನಲ್ಲಿ ಮಿಂಚುತ್ತಿದ್ದಾರೆ. ನಿನ್ನೆಯ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಪಾಂಡ್ಯ ಕಳೆದ 7ತಿಂಗಳಲ್ಲಿ ತಮ್ಮ ಕ್ರಿಕೆಟ್​ ಜೀವನದಲ್ಲಿ ನಡೆದ ಕರಾಳ ದಿನಗಳನ್ನ ಮೆಲಕು ಹಾಕಿದ್ದಾರೆ.

ನಿನ್ನೆ ಸಿಎಸ್​ಕೆ ವಿರುದ್ಧದ ಪಂದ್ಯದಲ್ಲಿ ಕೇವಲ 8 ಎಸೆತಗಳಲ್ಲಿ 25ರನ್,​ ಹಾಗೂ 4 ಓವರ್​ಗಳಲ್ಲಿ 20 ರನ್​ ನೀಡಿ ಧೋನಿ ಸೇರಿ ಪ್ರಮುಖ 3ವಿಕೆಟ್​ ಪಡೆದು ಮಿಂಚಿದ್ದರು. ಪಂದ್ಯ ಮುಕ್ತಾಯವಾದ ಬಳಿಕ ಮಾತನಾಡಿದ್ದ ಪಾಂಡ್ಯ, ನನ್ನ ಈ ಪ್ರದರ್ಶನದಿಂದ ತುಂಬಾ ಸಂತೋಷವಾಗಿದೆ. ಕಳೆದ 7 ತಿಂಗಳಿಂದ ನನ್ನ ಜೀವನದಲ್ಲಿ ಎಲ್ಲವೂ ಸರಿ ಇರಲಿಲ್ಲ. ಈ ವೇಳೆ ಬಹಳಷ್ಟು ಕಠಿಣ ಹಾಗೂ ಸಂಘರ್ಷವಾದ ಸಮಯ ಕಳೆದಿರುವೆ. ನಮ್ಮ ಕ್ರಿಕೆಟ್​ ಜೀವನ ಏನಾಗುವುದೋ ಏನೋ ಎಂಬ ಭಯ ಕೂಡ ಇತ್ತು ಎಂದಿದ್ದಾರೆ.

ಇದೀಗ ನನ್ನ ಪ್ರದರ್ಶನದ ಮೇಲೆ ಹೆಚ್ಚು ಗಮನ ಹರಿಸಿದ್ದು, ವಿಶ್ವಕಪ್​ನಲ್ಲಿ ಆಡುವ ಅವಕಾಶ ಸಿಕ್ಕರೆ ಖಂಡಿತವಾಗಿ ಉತ್ತಮ ಪ್ರದರ್ಶನ ನೀಡುವೆ ಎಂದಿದ್ದಾರೆ. ಈ ಸಲ ವಿಶ್ವಕಪ್​​ನಲ್ಲಿ ಭಾರತ ಜಯಶಾಲಿಯಾಗಲಿದೆ ಎಂದು ಪಾಂಡ್ಯಾ ಇದೇ ವೇಳೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details