ಕೋಲ್ಕತ್ತಾ:ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಚೈನಾಮ್ಯಾನ್ ಖ್ಯಾತಿಯ ಕುಲ್ದೀಪ್ ಯಾದವ್ ಪ್ರದರ್ಶನ ಹೇಳಿಕೊಳ್ಳುವಂತಹ ಮಟ್ಟದಲ್ಲಿ ಏನು ಇಲ್ಲ. ಅದರಲ್ಲೂ ನಿನ್ನೆ ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಒಂದೇ ಓವರ್ನಲ್ಲಿ 27ರನ್ ನೀಡಿ ದುಬಾರಿ ಬೌಲರ್ ಅನಿಸಿಕೊಂಡರು.
ಒಂದೇ ಓವರ್ನಲ್ಲಿ ಬರೋಬ್ಬರಿ 27ರನ್: ಲಾಸ್ಟ್ ಎಸೆತದಲ್ಲಿ ವಿಕೆಟ್ ಪಡೆದು ಕಣ್ಣೀರಿಟ್ಟ ಕುಲ್ದೀಪ್!
ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ 16ನೇ ಓವರ್ ಎಸೆಯಲು ಬಂದ ಕುಲ್ದೀಪ್ ಬರೋಬ್ಬರಿ 27ರನ್ ನೀಡಿ ದುಬಾರಿ ಅನಿಸಿಕೊಂಡರು.
ವಿರಾಟ್ ಕೊಹ್ಲಿ ಹಾಗೂ ಮೊಯಿನ್ ಅಲಿ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ 16ನೇ ಓವರ್ ಎಸೆಯಲು ಬಂದ ಕುಲ್ದೀಪ್ ಬರೋಬ್ಬರಿ 27ರನ್ ಚಚ್ಚಿಸಿಕೊಂಡರು. ಸ್ಫೋಟಕ ಬ್ಯಾಟಿಂಗ್ ನಡೆಸಿದ ಮೊಯಿನ್ ಅಲಿ 4 6 4 6 Wd 6 W ಸೇರಿದಂತೆ ಬರೋಬ್ಬರಿ 27ರನ್ ಗಳಿಸಿದರು. ಪ್ರಸಕ್ತ ಸಾಲಿನ ಐಪಿಎಲ್ನಲ್ಲಿ ಇಷ್ಟೊಂದು ರನ್ ನೀಡಿರುವ 2ನೇ ಬೌಲರ್ ಎಂಬ ಅಪಖ್ಯಾತಿಗೂ ಕೂಡ ಇವರು ಬಾಜನರಾಗಿದ್ದಾರೆ. ಇನ್ನು 16ನೇ ಓವರ್ನ ಕೊನೆ ಎಸೆತದಲ್ಲಿ ವಿಕೆಟ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗುತ್ತಿದ್ದಂತೆ ಅವರ ಬಳಿ ಪ್ರಸಿದ್ಧ ಕೃಷ್ಣ, ಆಂಡ್ರೋ ರಸೆಲ್ ಹಾಗೂ ಕ್ರಿಸ್ ಲಿನ್ ಅವರಿಗೆ ಹುರಿದುಂಬಿಸಲು ಮುಂದಾದಾಗ ಕಣ್ಣೀರು ಹಾಕಿದ್ದಾರೆ.
ಇಂಗ್ಲೆಂಡ್ನಲ್ಲಿ ನಡೆಯಲಿರುವ ವಿಶ್ವಕಪ್ಗೆ ಆಯ್ಕೆಯಾಗಿರುವ ಕುಲ್ದೀಪ್ ಯಾದವ್, ಒಂದೇ ಓವರ್ನಲ್ಲಿ ಇಷ್ಟೊಂದು ರನ್ ಬಿಟ್ಟುಕೊಟ್ಟಿದ್ದಕ್ಕಾಗಿ ಕುಲ್ದೀಪ್ ಯಾದವ್ ಕಣ್ಣೀರು ಹಾಕಿದ್ದಾರೆ. ಇನ್ನು ಅವರ ಪ್ರದರ್ಶನದಿಂದ ಸಾಮಾಜಿಕ ಜಾಲತಾಣಗಳಲ್ಲೂ ವ್ಯತಿರಿಕ್ತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.