ಮೈಸೂರು: ಸತತ ಸೋಲಿನಿಂದ ಕಂಗೆಟ್ಟಿದ್ದ ಮೈಸೂರು ವಾರಿಯರ್ಸ್ ತವರು ನೆಲೆದಲ್ಲಿ ಹುಬ್ಬಳ್ಳಿ ಟೈಗರ್ಸ್ ವಿರುದ್ಧ ಜಯಗಳಿಸುವ ಮೂಲಕ ಗೆಲುವಿನ ಖಾತೆ ತೆರೆದಿದೆ.
ತವರು ನೆಲದಲ್ಲಿ ಗೆಲುವಿನ ಖಾತೆ ತೆರೆದ ಮೈಸೂರು ವಾರಿಯರ್ಸ್
ಕರ್ನಾಟಕ ಪ್ರೀಮಿಯರ್ ಲೀಗ್ನ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್ ವಿರುದ್ಧ ಮೈಸೂರು ವಾರಿಯರ್ಸ್ ತಂಡ ಜಯ ಸಾಧಿಸಿದೆ.
ಮೈಸೂರು ವಾರಿಯಸ್೯ ತಂಡಕ್ಕೆ ಜಯ
ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ ಹುಬ್ಬಳ್ಳಿ ಟೈಗರ್ಸ್, ಪ್ರವೀಣ್ ದುಬೆ ಅವರ 52 ರನ್ಗಳ ಕಾಣಿಕೆಯಿಂದ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 151 ರನ್ ಪೇರಿಸಿತು.
152 ರನ್ಗಳ ಗುರಿ ಬೆನ್ನತ್ತಿದ ಮೈಸೂರು ವಾರಿಯರ್ಸ್ ತಂಡದ ಆರಂಭಿಕ ಆಟಗಾರ ವಿನಯ್ ಸಾಗರ್ ಹಾಗೂ ಸಿದ್ಧಾರ್ಥ್ ಹುಬ್ಬಳ್ಳಿ ಟೈಗರ್ಸ್ ಬೌಲರ್ಗಳ ಮೇಲೆ ಸವಾರಿ ಮಾಡಿದ್ರು. ವಿನಯ್ ಸಾಗರ್ 51 ರನ್ ಗಳಿಸಿ ಔಟ್ ಆದ್ರೆ, ಸಿದ್ದಾರ್ಥ್ 48 ಹಾಗೂ ಅನಿರುದ್ಧ ಜೋಶಿ 46 ರನ್ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
Last Updated : Aug 26, 2019, 7:03 AM IST