ಅಡಿಲೇಡ್: ವಿರಾಟ್ ಕೊಹ್ಲಿ ತಮ್ಮ ಮೊದಲ ಮಗುವಿನ ಜನನದ ಸಂದರ್ಭದಲ್ಲಿ ಪತ್ನಿಯ ಜೊತೆಗಿರಲು ಪಿತೃತ್ವ ರಜೆ ರಜೆ ತೆಗೆದುಕೊಳ್ಳುವುದಕ್ಕೆ ಅರ್ಹರು ಎಂದು ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಸ್ಟಿವ್ ಸ್ಮಿತ್ ಅಭಿಪ್ರಾಯಪಟ್ಟಿದ್ದಾರೆ. ಒಂದು ವೇಳೆ ಕೊಹ್ಲಿ ಸರಣಿಯಲ್ಲಿ ಆಡಿದ್ದರೆ ತೀವ್ರ ಒತ್ತಡ ಎದುರಿಸುತ್ತಿದ್ದರು ಎಂದು ಅವರು ಹೇಳಿದ್ದಾರೆ.
ಭಾರತ ತಂಡ ಮೊದಲ ಅಹರ್ನಿಶಿ ಟೆಸ್ಟ್ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ ಮುನ್ನಡೆಯ ಹೊರೆತಾಗಿಯೂ 2ನೇ ಇನ್ನಿಂಗ್ಸ್ನಲ್ಲಿ ಕೇವಲ 36 ರನ್ಗಳಿಗೆ ಆಲೌಟ್ ಆಗುವ ಮೂಲಕ 8 ವಿಕೆಟ್ಗಳ ಹೀನಾಯ ಸೋಲು ಕಂಡಿತ್ತು. ಇದು ಭಾರತ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಕಡಿಮೆ ಮೊತ್ತವಾಗಿತ್ತು.
ಅವರ ಪತ್ನಿ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮುಂದಿನ ತಿಂಗಳು ತಮ್ಮ ಮೊದಲ ಮಗುವಿಗೆ ಜನ್ಮ ನೀಡಲಿದ್ದಾರೆ. ಈ ಕಾರಣದಿಂದಾಗಿ ಕೊಹ್ಲಿ ಮಂಗಳವಾರ ಆಸ್ಟ್ರೇಲಿಯಾದಿಂದ ತವರಿಗೆ ಮರಳಲಿದ್ದಾರೆ.
ಖಂಡಿತವಾಗಿಯೂ ಕೊಹ್ಲಿ ಅವರು ಸರಣಿಯ ಮುಂದಿನ ಕೆಲವು ಪಂದ್ಯಗಳಿಗೆ ಇಲ್ಲದಿರುವುದು, ಭಾರತ ತಂಡವನ್ನು ದೊಡ್ಡ ನಷ್ಟವಾಗಲಿದೆ. ಅವರು ಮೊದಲ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಅವರ ಆಟದ ಕಡೆ ನೋಡಬೇಕಿದೆ. ಉತ್ತಮ ಬೌಲಿಂಗ್ ದಾಳಿಯನ್ನು ಅವರು ಹೇಗೆ ಎದುರಿಸಿದರು ಎಂದು ಅವರು ವರ್ಚುಯಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಕೊಹ್ಲಿ ಮೊದಲ ಟೆಸ್ಟ್ನಲ್ಲಿ 74 ರನ್ಗಳಿಸಿ ಇನ್ನಿಂಗ್ಸ್ ಮುನ್ನಡೆಗೆ ಕಾರಣರಾಗಿದ್ದರು.
" ನಾನು ಅವರಿಗೆ ಮೊದಲ ಟೆಸ್ಟ್ನ ನಂತರ ಅವರಿಗೆ ಪ್ರಯಾಣ ಸುರಕ್ಷಿತರಾಗಿರಲಿ ಎಂದು ಹಾರೈಸಿದ್ದೇನೆ. ಮಗುವಿನ ವಿಚಾರದಲ್ಲಿ ಎಲ್ಲ ಉತ್ತಮ ರೀತಿಯಲ್ಲಿ ನಡೆಯುತ್ತದೆ ಎಂದು ಭಾವಿಸುತ್ತೇನೆ. ಮತ್ತು ನಿಮ್ಮ ಹೆಂಡತಿಗೆ ನನ್ನ ಶುಭಾಶಯ ತಿಳಿಸಿ ಎಂದು ನಾನು ತಿಳಿಸಲು ಹೇಳಿದ್ದೇನೆ" ಎಂದು ಅವರು ಹೇಳಿದ್ದಾರೆ.
ಕೊಹ್ಲಿ ಇಂತಹ ಸಂದರ್ಭದಲ್ಲಿ ಇಲ್ಲಿ ಉಳಿದಿದ್ದರೆ ಸಾಕಷ್ಟು ಒತ್ತಡ ಇರುತ್ತಿತ್ತು ಎಂದು ನನಗೆ ಖಾತ್ರಿಯಿದೆ. ಆದರೆ, ತನ್ನ ಮೊದಲ ಮಗುವಿನ ಜನನಕ್ಕಾಗಿ ಮನೆಗೆ ಹೋಗಲು ಬಯಸುವುದರ ಪರ ನಾನು ನಿಲ್ಲತ್ತೇನೆ. ಇದು ಅವರಿಗೆ ಒಂದು ಶ್ರೇಯಸ್ಸು. ಇದು ಖಂಡಿತವಾಗಿಯೂ ಒಂದು ಮೈಲಿಗಲ್ಲಾಗಲಿದ್ದು, ಅದನ್ನು ಕಳೆದುಕೊಳ್ಳಲು ಯಾರು ಬಯಸುವುದಿಲ್ಲ " ಎಂದು ಅವರು ಹೇಳಿದ್ದಾರೆ.