ಮೊಹಾಲಿ: ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಪ್ರತಿಯೊಂದು ಪಂದ್ಯದಲ್ಲೂ ದಾಖಲೆ ಬರೆಯುತ್ತಾ ಸಾಗಿದ್ದು, ಸದ್ಯ ನಿರ್ಮಾಣ ಮಾಡಿರುವ ರೆಕಾರ್ಡ್ ಎಲ್ಲಕ್ಕಿಂತ ಭಿನ್ನ..!
ನಾಯಕ ಕೊಹ್ಲಿ ಬುಧವಾರ ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಟಿ20 ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಬಾರಿಸಿದ್ದಲ್ಲದೆ ತಂಡ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ಇದೇ ಕೊಹ್ಲಿ ಕ್ರಿಕೆಟ್ನ ಮೂರೂ ಮಾದರಿಯಲ್ಲೂ ಐವತ್ತಕ್ಕಿಂತ ಹೆಚ್ಚಿನ ಸರಾಸರಿ ಹೊಂದುವ ಮೂಲಕ ವಿಶೇಷತೆ ಮೆರೆದಿದ್ದಾರೆ.
ಟೆಸ್ಟ್ ಕ್ರಿಕೆಟ್ನಲ್ಲಿ 53.14, ಏಕದಿನದಲ್ಲಿ 60.31 ಹಾಗೂ ಟಿ20 ಕ್ರಿಕೆಟ್ನಲ್ಲಿ ವಿರಾಟ್ ಕೊಹ್ಲಿ 50.85 ಸರಾಸರಿ ಹೊಂದಿದ್ದಾರೆ. ಪ್ರಸ್ತುತ ಜಮಾನದಲ್ಲಿ ಬೇರಾವ ಕ್ರಿಕೆಟಿಗನೂ ಮೂರು ಮಾದರಿಯಲ್ಲಿ 50+ ಸರಾಸರಿ ಹೊಂದಿಲ್ಲ ಎನ್ನುವುದೇ ವಿಶೇಷ.
ಕ್ರಿಕೆಟ್ನ ಒಂದು ಮಾದರಿಯಲ್ಲಿ 84 ಆಟಗಾರರು 50+ ಸರಾಸರಿ ಹೊಂದಿದ್ದರೆ, ಎರಡು ಮಾದರಿಯಲ್ಲಿ ಕೇವಲ ಮೂರು ಮಂದಿ ಮಾತ್ರ 50+ ಸರಾಸರಿ ಹೊಂದಿದ್ದಾರೆ. ಆದರೆ ಮೂರೂ ಮಾದರಿಯಲ್ಲಿ 50+ ಸರಾಸರಿ ಹೊಂದಿರುವ ಆಟಗಾರ ವಿರಾಟ್ ಕೊಹ್ಲಿ ಎನ್ನುವುದು ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಹೆಮ್ಮೆಯ ಸಂಗತಿ.
ಒಂದೇ ಪಂದ್ಯದಲ್ಲಿ ರೋಹಿತ್ ಹಿಂದಿಕ್ಕಿ ಎರಡು ದಾಖಲೆ ಬರೆದ ವಿರಾಟ್ ಕೊಹ್ಲಿ
ಬುಧವಾರ ನಡೆದ ಆಫ್ರಿಕನ್ನರ ವಿರುದ್ಧ ಎರಡನೇ ಟಿ20 ಪಂದ್ಯದಲ್ಲಿ ವಿರಾಟ್ ಕೊಹ್ಲಿ ಚುಟುಕು ಪಂದ್ಯದಲ್ಲಿ ಅತೀ ಹೆಚ್ಚು ರನ್ ಗಳಿಸಿದ ಆಟಗಾರ ಎನ್ನುವ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಈ ಲೆಕ್ಕಾಚಾರದಲ್ಲಿ ರೋಹಿತ್ ಶರ್ಮಾ ಕೇವಲ ಏಳು ರನ್ಗಳಿಂದ ಹಿಂದಿದ್ದಾರೆ.
ಕೊಹ್ಲಿ ಭರ್ಜರಿ ಅರ್ಧ ಶತಕ: ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾಕ್ಕೆ 7 ವಿಕೆಟ್ಗಳ ಜಯ