ಕರ್ನಾಟಕ

karnataka

By

Published : Feb 9, 2021, 6:39 PM IST

ETV Bharat / sports

ಇಂಗ್ಲೆಂಡ್​ ಬ್ಯಾಟ್ಸ್​ಮನ್​ಗಳ ನಡೆಗೆ ಕುಪಿತರಾದ ವಿರಾಟ್​ ಕೊಹ್ಲಿ!

420 ರನ್​ಗಳ ಗುರಿ ಬೆನ್ನತ್ತಿದ ಭಾರತ ತಂಡ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ನಾಯಕ ವಿರಾಟ್​ ಕೊಹ್ಲಿ 72, ಶುಬ್ಮನ್​ ಗಿಲ್​ 50 ರನ್​ಗಳಿಸಿ ಪ್ರತಿರೋಧ ತೋರಿದರೂ ಸೋಲು ತಪ್ಪಿಸಲಾಗಲಿಲ್ಲ..

ಭಾರತ vs ಇಂಗ್ಲೆಂಡ್​ ಟೆಸ್ಟ್​
ವಿರಾಟ್​ ಕೊಹ್ಲಿ

ಚೆನ್ನೈ :ಇಂಗ್ಲೆಂಡ್ ಬ್ಯಾಟ್ಸ್​ಮನ್​ಗಳು ನಾಲ್ಕನೇ ದಿನ 2ನೇ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್ ಮಾಡುವ ವೇಳೆ ಪಿಚ್​ನಲ್ಲಿ ಓಡಿ ರನ್​ಗಳಿಸಿದ್ದಕ್ಕೆ ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಅಂಪೈರ್ ಬಳಿ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.

ಮಂಗಳವಾರ ಮುಗಿದ ಮೊದಲ ಟೆಸ್ಟ್​ ಪಂದ್ಯದಲ್ಲಿ 420 ರನ್​ಗಳ ಬೆನ್ನಟ್ಟುವಲ್ಲಿ ವಿಫಲವಾದ, ಭಾರತ ತಂಡ 227 ರನ್​ಗಳ ಸೋಲು ಕಂಡು ಸರಣಿಯಲ್ಲಿ 0-1 ರಲ್ಲಿ ಹಿನ್ನಡೆ ಸಾಧಿಸಿದೆ.

ನಾಲ್ಕನೇ ದಿನದಾಟದ ವೇಳೆ ಕೊಹ್ಲಿ ಅಂಪೈರ್​ ವಿರುದ್ಧ ಗರಂ ಆಗಿರುವ ವಿಡಿಯೋವೊಂದು ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗುತ್ತಿದೆ. ಇಂಗ್ಲೆಂಡ್ ಬ್ಯಾಟ್ಸ್​ಮನ್​ಗಳು ಪಿಚ್​ ಮೇಲೆ ಓಡುತ್ತಿದ್ದದ್ದನ್ನು ಅಂಪೈರ್ ನಿತಿನ್ ಮೆನನ್ ಗಮನಿಸದೇ ಇದ್ದದ್ದು ಇದಕ್ಕೆ ಕಾರಣವಾಗಿದೆ.

"ಓಯ್, ಮೆನನ್(ನಿತಿನ್ ಮೆನನ್), ಅವರು ಸುಲಭವಾಗಿ ಪಿಚ್ ಮಧ್ಯೆದಲ್ಲೇ ಓಡುತ್ತಾ, ರನ್​ ತೆಗೆದುಕೊಳ್ತಿದ್ದಾರೆ,ಏನಿದು? ಸ್ವಲ್ಪ ಈ ಕಡೆನೂ ಗಮನಿಸಬೇಕು" (ಸೀದೆ ರನ್ ಭೀ ಬೀಚ್‌ಗೆ ಭಾಗ್‌ ರಹಾ ಹೈ..ಉಸ್ಕೊ ಸಬ್​ಕೊ ದೇಖೊ..ಕ್ಯಾ ಹೈ ಯಾರ್) ಎಂದು ಕೊಹ್ಲಿ ಅಂಪೈರ್ ಮುಂದೆ ತಮ್ಮ ಅಸಮಾಧಾನ ಹೊರ ಹಾಕುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ.

420 ರನ್​ಗಳ ಗುರಿ ಬೆನ್ನತ್ತಿದ ಭಾರತ ತಂಡ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ನಾಯಕ ವಿರಾಟ್​ ಕೊಹ್ಲಿ 72, ಶುಬ್ಮನ್​ ಗಿಲ್​ 50 ರನ್​ಗಳಿಸಿ ಪ್ರತಿರೋಧ ತೋರಿದರೂ ಸೋಲು ತಪ್ಪಿಸಲಾಗಲಿಲ್ಲ.

ABOUT THE AUTHOR

...view details