ಹೈದರಾಬಾದ್: ಮುಂದಿನ ತಿಂಗಳಿಂದ ಅರಬ್ ದೇಶ ದುಬೈನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಹಬ್ಬ ಆರಂಭಗೊಳ್ಳಲಿದೆ. ಅದಕ್ಕಾಗಿ ಈಗಾಗಲೇ ಎಲ್ಲ ಪ್ರಾಂಚೈಸಿಗಳು ಸಜ್ಜಾಗಿದ್ದು, ಈ ಮಧ್ಯೆ ಇಂದು ಎರಡೂ ತಂಡಗಳು ಯುಎಇಗೆ ಪ್ರಯಾಣ ಬೆಳೆಸಿದವು.
ದುಬೈಗೆ ರಾಜಸ್ಥಾನ ರಾಯಲ್ಸ್ ಪ್ರಯಾಣ ಪಿಪಿಇ ಕಿಟ್ಟ ತೊಟ್ಟು ರಾಜಸ್ಥಾನ ರಾಯಲ್ಸ್ ತಂಡದ ಪ್ಲೇಯರ್ಸ್ ಪ್ರಯಾಣ ಬೆಳೆಸಿದರು. ರಾಬಿನ್ ಉತ್ತಪ್ಪ ಸೇರಿದಂತೆ ಅನೇಕ ಭಾರತೀಯ ಪ್ಲೇಯರ್ಸ್, ಕೋಚ್ ಹಾಗೂ ಸಹ ಸಿಬ್ಬಂದಿ ವಿಮಾನವೇರಿದ್ದಾರೆ. ಸ್ಮೀವ್ ಸ್ಮಿತ್, ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್ ಹಾಗೂ ಜೋಫ್ರಾ ಆರ್ಚರ್ ಕೆಲವೇ ದಿನಗಳಲ್ಲಿ ತಂಡ ಸೇರಿಕೊಳ್ಳಲಿದ್ದಾರೆ.
ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಕೂಡ ದುಬೈಗೆ ಪ್ರಯಾಣ ಬೆಳೆಸಿದ್ದು, ವೇಗದ ಬೌಲರ್ ಮೊಹಮ್ಮದ್ ಶಮಿ ತಮ್ಮ ಇನ್ಸ್ಟಾಗ್ರಾಂನಲ್ಲಿ ಅದರ ವಿಡಿಯೋ ಶೇರ್ ಮಾಡಿದ್ದಾರೆ. ನಾಳೆ ಚೆನ್ನೈ ಸೂಪರ್ ಕಿಂಗ್ಸ್ ಪ್ರಯಾಣ ಬೆಳೆಸಲಿದ್ದು, ಅದಾದ ಬಳಿಕ ಆರ್ಸಿಬಿ, ಡೆಲ್ಲಿ, ಕೋಲ್ಕತ್ತಾ, ಮುಂಬೈ ಇಂಡಿಯನ್ಸ್ ತಂಡಗಳು ದುಬೈಗೆ ಹಾರಲಿವೆ.
ಸೆಪ್ಟೆಂಬರ್ 19ರಿಂದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಗೊಳ್ಳಲಿದ್ದು, ಒಟ್ಟು 53 ದಿನಗಳ ಕಾಲ ಐಪಿಎಲ್ ಹಬ್ಬ ನಡೆಯಲಿದೆ. ಮೊದಲ ಪಂದ್ಯದಲ್ಲಿ ಕಳೆದ ಆವೃತ್ತಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ರನ್ನರ್ ಅಪ್ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಉದ್ಘಾಟನಾ ಪಂದ್ಯ ನಡೆಯಲಿದೆ.