ಕರ್ನಾಟಕ

karnataka

ETV Bharat / sports

ಆಸ್ಟ್ರೇಲಿಯಾಗೆ ಗಾಯದ ಹೊಡೆತ.... ಇಬ್ಬರು ಬಲಿಷ್ಠರು ತಂಡಕ್ಕೆ ಸೇರ್ಪಡೆ? - ಬಲಿಷ್ಠರು

ಖವಾಜ ಬದಲಿಗೆ ಮ್ಯಾಥ್ಯೂ ವೇಡ್​ ಹಾಗೂ ಸ್ಟೋಯ್ನೀಸ್​ ಬದಲಿಗೆ ಮಿಚೆಲ್​ ಮಾರ್ಶ್​ ತಂಡ ಸೇರಿಕೊಳ್ಳಲಿದ್ದಾರೆಂಬ ಮಾಹಿತಿ ಲಭ್ಯವಿದೆ. ಆದರೆ ಆಸೀಸ್​ ಕ್ರಿಕೆಟ್​ ಮಂಡಳಿಯಿಂದ ಇವರಿಬ್ಬರ ಆಯ್ಕೆ ಬಗ್ಗೆ ಯಾವುದೇ ಖಚಿತ ಮಾಹಿತಿ ಹೊರಬಂದಿಲ್ಲ.

ಆಸ್ಟ್ರೇಲಿಯಾ ತಂಡ

By

Published : Jul 7, 2019, 4:44 PM IST

ಲಂಡನ್​:ಸೆಮಿಫೈನಲ್​ ಪ್ರವೇಶಿಸಿರುವ ಹಾಲಿ ಚಾಂಪಿಯನ್​ ಆಸ್ಟ್ರೇಲಿಯಾಕ್ಕೆ ಗಾಯದ ಹೊಡೆತ ಮುಂದುವರೆದಿದ್ದು, ಬ್ಯಾಟ್ಸ್​ಮನ್​ ಖವಾಜ ಹಾಗೂ ಆಲ್​ರೌಂಡರ್​ ಸ್ಟೋಯ್ನೀಸ್​ ಆಸೀಸ್​ ತಂಡದಿಂದ ಹೊರಬಿದ್ದಿದ್ದಾರೆ.

ಶನಿವಾರ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದ ವೇಳೆ ಹ್ಯಾಮ್​ಸ್ಟ್ರಿಂಗ್​ ಗಾಯಕ್ಕೆ ತುತ್ತಾಗಿದ್ದರು. ಸ್ಟೋಯ್ನೀಸ್​ ಕೂಡ ಫೀಲ್ಡಿಂಗ್​ ನಡೆಸುವ ವೇಳೆ ಗಾಯಗೊಂಡಿದ್ದರು. ಹೀಗಾಗಿ ಸ್ಟೋಯ್ನಿಸ್​ ಕೇವಲ 3 ಓವರ್​ ಮಾತ್ರ ಎಸೆದಿದ್ದರು. ಖಾವಾಜ ಕೂಡ 6 ರನ್ ​ಗಳಿಸಿದ್ದ ವೇಳೆ ಗಾಯಗೊಂಡು ನಿವೃತ್ತಿ ತೆಗೆದುಕೊಂಡಿದ್ದರು.

ಖವಾಜ ಬದಲಿಗೆ ಮ್ಯಾಥ್ಯೂ ವೇಡ್​ ಹಾಗೂ ಸ್ಟೋಯ್ನೀಸ್​ ಬದಲಿಗೆ ಮಿಚೆಲ್​ ಮಾರ್ಶ್​ ತಂಡ ಸೇರಿಕೊಳ್ಳಲಿದ್ದಾರೆಂಬ ಮಾಹಿತಿ ಲಭ್ಯವಿದೆ. ಆದರೆ ಆಸೀಸ್​ ಕ್ರಿಕೆಟ್​ ಮಂಡಳಿಯಿಂದ ಇವರಿಬ್ಬರ ಆಯ್ಕೆ ಬಗ್ಗೆ ಯಾವುದೇ ಖಚಿತ ಮಾಹಿತಿ ಹೊರಬಂದಿಲ್ಲ.

ಆಸ್ಟ್ರೇಲಿಯಾ ಎ ಪರ ಇಂಗ್ಲೆಂಡ್​ನ ಕೌಂಟಿ ತಂಡಗಳ ವಿರುದ್ಧ ಏಕದಿನ ಸರಣಿಯಲ್ಲಿ ಭರ್ಜರಿ ಬ್ಯಾಟಿಂಗ್​ ಪ್ರದರ್ಶನ ನೀಡಿರುವ ಮ್ಯಾಥ್ಯೂ ವೇಡ್, ತಾನು ಆಡಿರುವ 4 ಪಂದ್ಯಗಳಲ್ಲಿ​ 2 ಶತಕ ಹಾಗೂ ಮತ್ತೆರಡು ಪಂದ್ಯಗಳಲ್ಲಿ 40+ ರನ್​ ಬಾರಿಸಿ ಅತ್ಯುತ್ತಮ ಫಾರ್ಮ್​ನಲ್ಲಿದ್ದಾರೆ. ಇನ್ನು ಮಿಚೆಲ್​ ಮಾರ್ಶ್​ ಕೂಡ ಉತ್ತಮ ಆಲ್​ರೌಂಡ್​ ಪ್ರದರ್ಶನ ನೀಡಿದ್ದಾರೆ. ಇವರಿಬ್ಬರ ಎಂಟ್ರಿಯಿಂದ ಆಸೀಸ್​ ತಂಡ ಮತ್ತಷ್ಟು ಬಲಿಷ್ಠವಾಗಲಿದೆ.

ABOUT THE AUTHOR

...view details