ಕರಾಚಿ:ರೋಚಕ ಹೋರಾಟ ಕಂಡುಬಂದ ಪಾಕಿಸ್ತಾನ ಸೂಪರ್ ಲೀಗ್ ಕ್ವಾಲಿಫೈಯರ್ ಪಂದ್ಯದಲ್ಲಿ ಕರಾಚಿ ಕಿಂಗ್ಸ್ ಅಗ್ರಸ್ಥಾನಿ ಮುಲ್ತಾನ್ ಸುಲ್ತಾನ್ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿದೆ.
ಲೀಗ್ ಹಂತದ ಪಂದ್ಯಗಳು ಮಾರ್ಚ್ನಲ್ಲೇ ಮುಗಿದಿತ್ತು. ಆದರೆ ಕೋವಿಡ್ 19 ಪರಿಣಾಮ ನಾಕೌಟ್ ಪಂದ್ಯಗಳನ್ನು ಅನಿರ್ದಿಷ್ಟಾವದಿಗೆ ಮುಂದೂಡಲ್ಪಟ್ಟಿತ್ತು. ಇದೀಗ ಶನಿವಾರದಿಂದ ಪುನರಾರಂಭಗೊಂಡಿದ್ದು, ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಕರಾಚಿ ಕಿಂಗ್ಸ್ ಸೂಪರ್ ಓವರ್ ನಲ್ಲಿ ಗೆದ್ದು ಬೀಗಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಮುಲ್ತಾನ್ ಸುಲ್ತಾನ್ ತಂಡ ಬೊಪೆರಾ ಅವರ 40 ರನ್ಗಳ ನೆರವಿನಿಂದ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 7 ವಿಕೆಟ್ ಕಳೆದುಕೊಂಡು 141 ರನ್ಗಳಿಸಿತ್ತು. ಇದಕ್ಕುತ್ತರವಾಗಿ ಕರಾಚಿ ಬಾಬರ್ ಅಜಮ್ ಅವರ ಅರ್ಧಶತಕದ(65) ಹೊರೆತಾಗಿಯೂ 141 ರನ್ಗಳಿಸಿ ಗೆಲ್ಲುವ ಪಂದ್ಯವನ್ನು ಟೈನಲ್ಲಿ ಅಂತ್ಯಗೊಳಿಸಿತ್ತು.
ಆದರೆ ಸೂಪರ್ ಓವರ್ನಲ್ಲಿ ಕರಾಚಿ ಕಿಂಗ್ಸ್ ತನ್ವೀರ್ ಓವರ್ನಲ್ಲಿ 13 ರನ್ಗಳಿಸಿದರೆ, ಮುಲ್ತಾನ್ ಸುಲ್ತಾನ್ ಮೊಹಮ್ಮದ್ ಅಮೀರ್ ಎಸೆದ ಸೂಪರ್ ಓವರ್ನಲ್ಲಿ ಕೇವಲ 9 ರನ್ಗಳಿಸಿ ಸೋಲುಕಂಡಿತು.
ಈ ಗೆಲುವಿನೊಂದಿಗೆ ಕರಾಚಿ ಫೈನಲ್ ಪ್ರವೇಶಿಸಿದರೆ, ಮುಲ್ತಾನ್ ಇಂದು ನಡೆಯವು ಕ್ವಾಲಿಫೈಯರ್ ಪಂದ್ಯದಲ್ಲಿ ಗೆಲ್ಲುವ ತಂಡವನ್ನು 2ನೇ ಎಲಿಮಿನೇಟರ್ ಪಂದ್ಯದಲ್ಲಿ ಸೆಣಸಾಡಲಿದೆ.