ಕರ್ನಾಟಕ

karnataka

ETV Bharat / sports

ಮಾರ್ಕ್​ ಬೌಷರ್​ ನಂತರ ದ.ಆಫ್ರಿಕಾ ಕೋಚ್​ ಟೀಮ್​ ಸೇರಿದ ಇಬ್ಬರು ದಿಗ್ಗಜರು

ಮಾರ್ಕ್​ ಬೌಷರ್​ ದ.ಆಫ್ರಿಕಾ ತಂಡದ ಮುಖ್ಯ ಕೋಚ್​ ಆಗಿ ಆಯ್ಕೆಯಾಗಿದ್ದು ಮಹತ್ತರ ಬದಲಾವಣೆ ತಂದಿದ್ದಾರೆ. ಇದೀಗ ಇವರಿಗೆ ಬೆಂಬಲವಾಗಿ ಜಾಕ್​ ಕಾಲೀಸ್​ ಬ್ಯಾಟಿಂಗ್​ ಕೋಚ್​ಗೆ ಆಯ್ಕೆಯಾಗಿದ್ದಾರೆ. ಇವರ ಜೊತೆಗೆ ದಕ್ಷಿಣ ಆಫ್ರಿಕಾ ಕ್ರಿಕೆಟ್​ ಮಂಡಳಿಯಿಂದ ಕರೆಬಂದ ಹಿನ್ನಲೆ ಬಾಂಗ್ಲಾದೇಶದ ಬೌಲಿಂಗ್​ ಕೋಚ್ ಹುದ್ದೆಯನ್ನು ತ್ಯಜಿಸಿರುವ ಚಾರ್ಲ್​ ಲಾಂಗ್​ವೆಲ್ಟ್​ ತಮ್ಮ ತವರು ತಂಡದ ಬೌಲಿಂಗ್​ ಕೋಚ್​ಆಗಿ ನೇಮಕಗೊಂಡಿದ್ದಾರೆ.

Kallis joins Langeveldt in Boucher's support staff
Kallis joins Langeveldt in Boucher's support staff

By

Published : Dec 18, 2019, 4:16 PM IST

ಕೇಪ್​ಟೌನ್​: ವಿಶ್ವಕಂಡ ಶ್ರೇಷ್ಠ ಆಲ್​ರೌಂಡರ್​ ಜಾಕ್​ ಕಾಲೀಸ್​ ದಕ್ಷಿಣ ಆಫ್ರಿಕಾದ ನೂತನ ಬ್ಯಾಟಿಂಗ್​ ಕೋಚ್​ ಆಗಿ ಆಯ್ಕೆಯಾಗಿದ್ದಾರೆ.

ಈಗಾಗಲೇ ಮಾರ್ಕ್​ ಬೌಷರ್​ ದ.ಆಫ್ರಿಕಾ ತಂಡದ ಮುಖ್ಯ ಕೋಚ್​ ಆಗಿ ಆಯ್ಕೆಯಾಗಿದ್ದು, ಮಹತ್ತರ ಬದಲಾವಣೆ ತಂದಿದ್ದಾರೆ. ಇದೀಗ ಇವರಿಗೆ ಬೆಂಬಲವಾಗಿ ಜಾಕ್​ ಕಾಲೀಸ್​ ಬ್ಯಾಟಿಂಗ್​ ಕೋಚ್​ಗೆ ಆಯ್ಕೆಯಾಗಿದ್ದಾರೆ. ಇವರ ಜೊತೆಗೆ ದಕ್ಷಿಣ ಆಫ್ರಿಕಾ ಕ್ರಿಕೆಟ್​ ಮಂಡಳಿಯಿಂದ ಕರೆಬಂದ ಹಿನ್ನಲೆ ಬಾಂಗ್ಲಾದೇಶದ ಬೌಲಿಂಗ್​ ಕೋಚ್ ಹುದ್ದೆಯನ್ನು ತ್ಯಜಿಸಿರುವ ಚಾರ್ಲ್​ ಲಾಂಗ್​ವೆಲ್ಟ್​ ತಮ್ಮ ತವರು ತಂಡದ ಬೌಲಿಂಗ್​ ಕೋಚ್​ಆಗಿ ನೇಮಕಗೊಂಡಿದ್ದಾರೆ.

"ದಕ್ಷಿಣ ಆಫ್ರಿಕಾ ಕ್ರಿಕೆಟ್​ ಮಂಡಳಿಯಿಂದ ನಮಗೆ ಗೌರವಯುತ ಮನವಿ ಬಂದ ಹಿನ್ನಲೆ ಲಾಂಗ್​ವೆಲ್ಟ್​ರನ್ನು ಕೋಚ್​ ಹುದ್ದೆಯಿಂದ ಹೊರಹೋಗುವಂತೆ ಸೂಚಿಸಿದ್ದೇವೆ. ನಮಗೆ ದಕ್ಷಿಣ ಆಫ್ರಿಕಾ ಕ್ರಿಕೆಟ್​ ಮಂಡಳಿ(CSA) ಜೊತೆ ಇರುವ ಬಾಂಧವ್ಯವನ್ನು ಗಟ್ಟಿಗೊಳಿಸಿಕೊಳ್ಳಲು ಈ ನಿರ್ಧಾರ ತೆಗೆದುಕೊಂಡಿದ್ದೇವೆ. ಅಲ್ಲದೆ ಲಾಂಗ್​ವೆಲ್ಟ್ ದಕ್ಷಿಣ ಆಫ್ರಿಕಾ ತಂಡದ ಮಾಜಿ ಆಟಗಾರರಾಗಿರುವುದರಿಂದ ಹಾಗೂ ಅವರು ತಮ್ಮ ತವರಿನ ತಂಡಕ್ಕೆ ಸೇವೆ ಸಲ್ಲಿಸಲು ಮಾಡಿರುವ ಮನವಿಯನ್ನು ಮನದಲ್ಲಿಟ್ಟುಕೊಂಡು ತ್ವರಿತವಾಗಿ ಕೋಚ್​ ತಂಡದಿಂದ ಬಿಟ್ಟುಕೊಟ್ಟಿದ್ದೇವೆ ಎಂದು ಬಿಸಿಬಿ ಸಿಇಒ ನಿಜಾಮ್​ ಉದ್ದೀನ್ ಚೌದರಿ ತಿಳಿಸಿದ್ದಾರೆ.

ಡಿಸೆಂಬರ್​ನಲ್ಲಿ ದಕ್ಷಿಣ ಆಫ್ರಿಕಾ ಕ್ರಿಕೆಟ್​ ಮಂಡಳಿಯಲ್ಲಿ ಮಹತ್ತರ ಬದಲಾವಣೆಯಾಗಿದ್ದು, ಗ್ರೇಮ್​ ಸ್ಮಿತ್​ರನ್ನು ಡೈರೆಕ್ಟರ್​ ಆಗಿ ನೇಮಕ ಮಾಡಲಾಗಿತ್ತು. ನಂತರ ಮಾರ್ಕ್​ಬೌಷರ್​ರನ್ನು ಮುಖ್ಯ ಕೋಚ್​ ಆಗಿ ನೇಮಕ ಮಾಡಲಾಗಿತ್ತು.

ABOUT THE AUTHOR

...view details